ಮಾಧುರಿ ಆನೆಯನ್ನು ಮರಳಿ ಮಠಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ

ಮಾಧುರಿ ಆನೆಯನ್ನು ಮರಳಿ ಮಠಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ Madhuri appeals to the District Collector to return the elephant to the monastery

ಮಾಧುರಿ ಆನೆಯನ್ನು ಮರಳಿ ಮಠಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ 

ಕಾಗವಾಡ, 04 ; ಮಹಾರಾಷ್ಟ್ರದ ಶಿರೋಳ ತಾಲೂಕಿನ ನಾಂದಣಿ ಜೈನ ಮಠದ ಮಹಾದೇವಿ (ಮಾಧುರಿ) ಎಂಬ ಆನೆಯನ್ನು ಅನ್ಯಾಯವಾಗಿ ಉದ್ದಿಮೆ ಅಂಬಾನಿ ಒಡೆತನದಲ್ಲಿರುವ ವಣತಾರ ಉದ್ಯಾನವನಕ್ಕೆ ಸ್ಥಳಾಂತರಿಸಿದ್ದು, ನಾಂದಣಿ ಜೈನ ಮಠದ ಆನೆಯನ್ನು ಮುಕ್ತಗೊಳಿಸಿ, ಮರಳಿ ಜೈನ ಮಠಕ್ಕೆ ನೀಡಿರಿ ಎಂಬ ಬೇಡಿಕೆಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಜೈನ ಬಾಂಧವರು ರವಿವಾರ ದಿ. 03 ರಂದು ನಾದಂಣಿ ಜೈನಮಠದಲ್ಲಿ ಭವ್ಯವಾದ ಚಳುವಳಿ ಹಮ್ಮಿಕೊಂಡು, ನಾಂದಣಿಯಿಂದ ಕೊಲ್ಲಾಪೂರದ ವರೆಗೆ 42 ಕೀ.ಮಿ. ಮೌನ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ. 

ಈ ವೇಳೆ ಮಾಜಿ ಸಂಸದ ಹಾಗೂ ಸ್ವಾಭಿಮಾನಿ ಶೇತಕರಿ ಸಂಘಟನೆಯ ಸಂಸ್ಥಾಪಕ ರಾಜು ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಅನ್ಯಾಯವಾಗಿ ಜೈನ ಮಠಗಳಲ್ಲಿರುವ ಆನೆಗಳನ್ನು ಉದ್ದಿಮೆ ಅಂಬಾನಿ ಇವರಿಗೆ ಒಪ್ಪಿಸುವ ಹನ್ನಾರ ಮಾಡುತ್ತಿದೆ. ಕಳೆದ ಅನೇಕ ವರ್ಷಗಳಿಂದ ಪರಂಪರೆಯಾಗಿ ಜೈನ ಮಠಗಳಲ್ಲಿ ಆನೆಗಳನ್ನು ಸಾಕಲಾಗುತ್ತಿದೆ. ಇವುಗಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಬಳೆಸಲಾಗುತ್ತದೆ. ಆದರೆ ಅನ್ಯಾಯವಾಗಿ ನಾಂದಿನಿ ಜೈನ ಮಠದ ಆನೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಲ್ಲದೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಜೈನ ಮಠಗಳಲ್ಲಿರುವ ಆನೆಗಳಿಗೆ ಈಗಾಗಲೇ ನೋಟಿಸು ನೀಡಿ, ಅವುಗಳನ್ನು ಅಂಬಾನಿಯ ವನತಾರಾ ಅರಣ್ಯಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಲಾಗುತ್ತಿದ್ದೆ. ಇದನ್ನು ಜೈನ ಸಮಾಜ ಒಪ್ಪುವುದಿಲ್ಲ. ಕೂಡಲೇ ನಮ್ಮ ನಾಂದಣಿ ಮಠದ ಆನೆಯನ್ನು ವಾಪಸ್ ಕಳುಹಿಸಬೇಕು. ಮತ್ತು ಇನ್ನೂಳಿದ ಆನೆಗಳನ್ನು ಮಠಗಳಲ್ಲಿಯೇ ಇರಲು ಬಿಡಬೇಕೆಂದು ಆಗ್ರಹಿಸಿದರು. ಸರ್ಕಾರ ನಮ್ಮ ಬೇಡಿಕೆಗೆ ಬಗ್ಗದೇ ಇದ್ದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮಾಜದವರು ಉಗ್ರ ಹೋರಾಟ ಮಾಡಲಿದ್ದಾರೆ. ಈಗಾಗಲೇ ಶಿರೋಳ ತಾಲೂಕಿನಾದ್ಯಂತ ಬೈಕಾಟ್ ಜಿಯೋ ಹ್ಯಾಶ್‌ಟ್ಯಾಗ್ ಸದ್ದು ಮಾಡುತ್ತಿದ್ದು, ಕಳೆದ ಕೆಲವೇ ಕೆಲ ದಿನಗಳಲ್ಲಿ ತಾಲೂಕಿನ ಸಾವಿರಾರು ಜಿಯೋ ಗ್ರಾಹಕರು ಜಿಯೋದಿಂದ ನಿರ್ಗಮಿಸಿದ್ದಾರೆ. ಮುಂದೇ ಬೈಕಾಟ್ ರಿಲೈಯನ್ಸ್‌ ಕೂಡಾ ತಾಲೂಕಿನಲ್ಲಿ ಜೊತೆಗೆ ಕರ್ನಾಟಕ ಮಹಾರಾಷ್ಟ್ರದಲ್ಲಿ ಸದ್ದು ಮಾಡಲಿದೆ ಎಂದು ತಿಳಿಸಿದರು. 

ಈ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದ ಗಣ್ಯರು, ಶಾಸಕರು, ಮಾಜಿ ಶಾಸಕರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ಜೈನ ಸಮಾಜದ ಬಾಂಧವರು, ಜೈನೇತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.