ಮಧುಕರ್ ಶೆಟ್ಟಿ ಸಾವು : ತನಿಖೆಗೆ ಆದೇಶ
ಬೆಂಗಳೂರು,ಡಿ.29- ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸಾವು ಕುರಿತು ವರದಿಯನ್ನು ಆಧರಿಸಿ ಸಂಶ ಯವಿದ್ದರೆ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಧುಕರ ಶೆಟ್ಟಿ ಸಾವಿನ ಬಗ್ಗೆ ತನಿಖೆ ನಡೆಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚಚರ್ಿಸಲಾಗುವುದು. ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದ ವರದಿ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ನಮ್ಮ ಅಧಿಕಾರಿಗಳು ಈಗಾಗಲೇ ಕಾಯರ್ೊನ್ಮುಖರಾಗಿದ್ದಾರೆ.ಅವರ ಸಾವು ಸಹಜವಾಗಿದೆಯೇ ಅಥವಾ ಅಸಹಜವೇ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಹೈದರಾಬಾದ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರು ಎಚ್1ಎನ್1 ಖಾಯಿಲೆಯಿಂದ ಬಳಲುತ್ತಿದ್ದು, ಶ್ವಾಸಕೋಶದ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದರು.
ಹೈದರಾಬಾದ್ನ ಕಾಂಟಿ ನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.
ಆಸ್ಪತ್ರೆಯಿಂದ ವರದಿ ತರಿಸಿಕೊಂಡು ಸಂಶಯವಿದ್ದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ತಿಳಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರೂ ಕೂಡ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.ಲೋಕಾಯುಕ್ತದಲ್ಲಿ ಸೇವೆಯಲ್ಲಿದ್ದಾಗ ಕೆಲವು ರಾಜಕಾರಣಿಗಳು, ಅಧಿಕಾರಿಗಳನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದ ಮಧುಕರ ಶೆಟ್ಟಿಯವರ ಅಕಾಲಿಕ ಮರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಈ ಬಗ್ಗೆ ತನಿಖೆ ನಡೆಸಲು ಕೂಡ ಸಕರ್ಾರ ಮುಂದಾಗಿದೆ.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 