ರಾಷ್ಟ್ರ ಗೀತೆಗೆ ಅಪಹಾಸ್ಯ ಮಾಡಿದ ಸಂಸದ ಕಾಗೇರಿ ಸಂಸದನಾಗಿ ಮುಂದುವರಿಯಲು ಅರ್ಹರಲ್ಲ -ಕೆ .ಶಂಭು ಶೆಟ್ಟಿ
MP Kageri who mocked the national anthem is not eligible to continue as an MP - K. Shambhu Shetty
ರಾಷ್ಟ್ರ ಗೀತೆಗೆ ಅಪಹಾಸ್ಯ ಮಾಡಿದ ಸಂಸದ ಕಾಗೇರಿ ಸಂಸದನಾಗಿ ಮುಂದುವರಿಯಲು ಅರ್ಹರಲ್ಲ -ಕೆ .ಶಂಭು ಶೆಟ್ಟಿ
ಕಾರವಾರ 06 : ರಾಷ್ಟ್ರಗೀತೆಯಾದ "ಜನ ಗಣ ಮನ" ವನ್ನು ಅಪಹಾಸ್ಯ ಮಾಡಿರುವುದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ರಾಷ್ಟ್ರಕ್ಕೇ ಅಪಹಾಸ್ಯ ಮಾಡಿದಂತಾಗಿದೆ. ಅವರು ಸಂಸದನಾಗಿ ಮುಂದುವರಿಯಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಉತ್ತರ ಕನ್ನಡ ಕಾಂಗ್ರೆಸ್ ಪಕ್ಷದ ವಕ್ತಾರ ಕೆ. ಶಂಭು ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅವರು , ನಮ್ಮ ರಾಷ್ಟ್ರ ಧ್ವಜ, ನಮ್ಮ ಸಂವಿಧಾನದ ಅವಿಭಾಜ್ಯ ಅಂಗ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮತ್ತವರ ಸಂಘ ಪರಿವಾರ ನಮ್ಮ ಸಂವಿಧಾನವನ್ನೇ ಗೌರವಿಸುತ್ತಿಲ್ಲ , ಬದಲಾಗಿ ಅವರು ಮನುಸ್ಮೃತಿಯನ್ನೇ , ಸಂವಿಧಾನವನ್ನಾಗಿ ತರಲು ತೆರೆಮರೆ ಕೆಲಸ ಮಾಡುತಿದ್ದಾರೆ. ಈ ಹಿಂದಿನ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು ಎಂಬುದಾಗಿ , ಬಹಿರಂಗವಾಗಿ ಹೇಳಿಕೆ ಕೊಟ್ಟ ದಾಖಲೆ ಕೂಡಾ ನಮ್ಮ ಕಣ್ಮುಂದೆ ಇದೆ. ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಮತ್ತು ಹಾಲಿ ಸಂಸದ ವಿಶ್ವೇಶ್ವರ ಕಾಗೇರಿ ,
ಇಬ್ಬರೂ ಆರ್ .ಎಸ್ .ಎಸ್ . ಗರಡಿಯಲ್ಲಿ ಪಳಗಿ ಬಂದವರಾದ್ದರಿಂದ, ಇಬ್ಬರಿಗೂ ನಮ್ಮ ಧ್ವಜ, ಸಂವಿಧಾನ, ರಾಷ್ಟ್ರಗೀತೆ ಮೇಲೆ ಗೌರವ ಮತ್ತು ಬದ್ಧತೆಯೇ ಇಲ್ಲ. ಅವರಿಬ್ಬರ ಹೃದಯದಲ್ಲಿರುವುದು ಭಗವದ್ವಜ, ಮನುಸ್ಮೃತಿ ಮತ್ತು ಆರ್ ಎಸ್ ಎಸ್ ಶಾಖೆಯಲ್ಲಿ ಹಾಡುವ ಪ್ರಾರ್ಥನಾ ಗೀತೆ. ಈ ಒಳ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಹಿಂದೂ ಹಿಂದುಳಿದ ವರ್ಗದ ಯುವಕರ ಮುಖಾಂತರ ಕೋಮು ಸೌಹಾರ್ದತೆಗೆ ಭಂಗ ತಂದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸುತಿದ್ದಾರೆ ಎಂದು ಶಂಭು ಶೆಟ್ಟರು ಟೀಕಿಸಿದ್ದಾರೆ.
ನಮ್ಮ ಭಾರತದ ಎಲ್ಲಾ ಭಾಗಗಳ ಸಮಗ್ರ ಏಕತೆ,ದೈವಿ ಶಕ್ತಿ ಮತ್ತು ರಾಷ್ಟ್ರ ಭಕ್ತಿಯ ಸ್ತುತಿಯು ನಮ್ಮ ರಾಷ್ಟ್ರ ಗೀತೆಯ ಮುಖ್ಯ ಸಾರಾಂಶ . ಭವ್ಯ ಭಾರತದ ಉತ್ಕರ್ಷೆಗಾಗಿ ನಾವು ಪ್ರಾರ್ಥಿಸುವ ಭಾಗ್ಯವಿದಾತ ಅದು . ನಾವು ನಂಬುವ ದೈವೀ ಶಕ್ತಿ ಎಂಬುದಾಗಿದೆ . ಆದರೆ ರಾಷ್ಟ್ರ ಕವಿ ರವೀಂದ್ರನಾಥ ಟಾಗೋರ್ ಬರೆದಿರುವ , ನಮ್ಮ ರಾಷ್ಟ್ರಗೀತೆ ಸಂಸದ ಕಾಗೇರಿ ಅವರಿಗೆ ಒಬ್ಬ ಬ್ರಿಟಿಷ ಅಧಿಕಾರಿಗೆ ಬರೆದ ಸ್ವಾಗತ ಗೀತೆಯಾಗಿ ಕಂಡಿರುವುದು, ಅವರಲ್ಲಿವ ಸಂವಿಧಾನ ವಿರೋಧಿ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಕೆ. ಶಂಭು ಶೆಟ್ಟಿ ಟೀಕಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 