ಗಂಗಾ ಕಲ್ಯಾಣ ಯೋಜನೆ ಕೊಳವೆಬಾವಿ ಕೊರೆಸಲು ಶಾಸಕರಿಂದ ಚಾಲನೆ
MLA initiates drilling of Ganga Kalyan Yojana borewell
ಗಂಗಾ ಕಲ್ಯಾಣ ಯೋಜನೆ ಕೊಳವೆಬಾವಿ ಕೊರೆಸಲು ಶಾಸಕರಿಂದ ಚಾಲನೆ
ಹಾವೇರಿ 05: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಮಗದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆಗೆ ಹಾಗೂ ಕೊಳವೆಬಾವಿ ಕೊರೆಸಲು ಬುಧವಾರ ಶಾಸಕ ಪ್ರಕಾಶ ಕೋಳಿವಾಡ ಅವರು ಚಾಲನೆ ನೀಡಿದರು. ಗಂಗಾ ಕಲ್ಯಾಣ ಯೋಜನೆಯಡಿ ರಾಣೇಬೆನ್ನೂರ ತಾಲೂಕು ಹಿರೇಮಾಗನೂರ ಗ್ರಾಮದ ಮುನೀರಸಾಬ ರಹಿಂಸಾಬ ಶೇಖಸನದಿ ಎಂಬುವವರಿಗೆ ಕೊಳವೆಬಾವಿ ಸೌಲಭ್ಯ ಮಂಜೂರಾಗಿದ್ದು, ರೂ. 3 ಲಕ್ಷ ಮೊತ್ತ ನಿಗಮದಿಂದ ಸಹಾಯಧನ ನೀಡಲಾಗಿದೆ. ಈ ಸಂದರ್ಭದಲ್ಲಿ ಕೆ.ಎಂ.ಎಫ್ ಜಿಲ್ಲಾ ಅಧ್ಯಕ್ಷ ಮಂಜನಗೌಡ ಪಾಟೀಲ, ಗ್ರಾ.ಪಂ.ಸದಸ್ಯ ಈಶಪ್ಪ ಪೂಜಾರ, ಕುರುವತ್ತೆಪ್ಪ ದ್ಯಾವಳ್ಳಿ, ಯಲ್ಲಪ್ಪ ರಡ್ಡಿವರ, ಗಂದಾಧರ ಜಿಗಳಿ, ಸಂತೋಷ ಯಡಚಿ, ನಿಗಮದ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 