ಶಾಸಕರಿಂದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ
MLA distributes certificates to beneficiaries
ಬ್ಯಾಡಗಿ 23 : ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 2025 26 ನೇ ಸಾಲಿನ ವಿಶೇಷ ಘಟಕದ ಯೋಜನೆ ಅಡಿ ಕೊಳವೆಬಾವಿ ಕೊರೆದು ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಆಯ್ಕೆಯಾದ ಫಲಾನುಭವಿಗಳಿಗೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಪ್ರಮಾಣ ಪತ್ರವನ್ನು ಇಂದು ವಿತರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಟ್ಟು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಆಯ್ಕೆಯಾಗಿದೆ 108 ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸುವ ಮೂಲಕ ಮಾತನಾಡಿದವರು ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸ ಎಂಬ ವಚನದಂತೆ ಆಯ್ಕೆಯಾದ ರೈತರು ತಮ್ಮ ಜಮೀನಿನಲ್ಲಿ ಕಾಯಕ ನಿಷ್ಠೆಯಿಂದ ಕೆಲಸ ಮಾಡಿ ಉತ್ತಮ ರೀತಿಯಲ್ಲಿ ಬೆಳೆ ಬೆಳೆದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬಂದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಸಬುದ್ಧರಾಗಬೇಕು ಎಂದರು .
ರಾಜ್ಯ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಕ್ಷೇತ್ರಕ್ಕೆ ನೀರಾವರಿ ಇಲಾಖೆ ವತಿಯಿಂದ 108 ರೈತರಿಗೆ ಉಚಿತ 5ಲಕ್ಷ ವೆಚ್ಚದಲ್ಲಿ ಉಚಿತ ಕೊಳವೆಬಾವಿ ನಿರ್ಮಿಸಲು ನೀಡಿದ್ದು ಪ್ರತಿ ರೈತರಿಗೆ ಇಲಾಖೆ ವತಿಯಿಂದ ಅವರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ಸೆಟ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತಾರೆ. ಆಯ್ಕೆಯಾದ ಫಲಾನುಭವಿ ತಮ್ಮ ಜಮೀನಿಗೆ ಕೊಳವೆಬಾವಿ ಕೂರಸಿ ನಂತರ ತನ್ನ ಜಮೀನನ್ನು ಬೇರೆಯವರಿಗೆ ಲಾವಣಿ ಹಾಕಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದಾನಪ್ಪ ಚೂರಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಸೀಮೆ, ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಆರ್ ಪಾಟೀಲ, ತಾಲೂಕು ಗ್ಯಾರೆಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ, ತಾಲೂಕು ಇಓ ಕೆ ಮಲ್ಲಿಕಾರ್ಜುನ್, ತಹಸಿಲ್ದಾರ್ ಚಂದ್ರಶೇಖರ್ ನಾಯಕ್, ಸಣ್ಣನೀರಾವರಿ ಇಲಾಖೆಯ ಇಂಜಿನಿಯರ್ ಆರಾಧ್ಯ,ಮುಖಂಡರಾದ ಬಸವರಾಜ್ ಕೋಣನವರ, ಮಾರುತಿ ಅಚ್ಚಿಗೇರಿ, ಬೀರ್ಪ ಬಣಕಾರ್, ಮಲ್ಲಿಕಾರ್ಜುನಪ್ಪ ಕರಿ ಲಿಂಗಪ್ಪನವರ್, ರುದ್ರ್ಪ ಹೊಂಕಣ, ರಮೇಶ್ ಕೋಟಿಯವರ್, ಹಾಗೂ ಅನೇಕ ಮುಖಂಡರು ಮತ್ತು ಫಲಾನುಭವಿ ರೈತರುಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 