ಎಲ್‌ಕೆಜಿ, ಯುಕೆಜಿ ತರಗತಿಗಳ ಪ್ರಾರಂಭೋತ್ಸವಕ್ಕೆ ಶಾಸಕ ತಮ್ಮಣ್ಣವರ ಚಾಲನೆ
MLA Tammanna inaugurates the commencement ceremony of LKG and UKG classes
ಹಾರೂಗೇರಿ, 24 : ಅಂಗನವಾಡಿ ಕೇಂದ್ರಗಳು ಪ್ರೀತಿ, ಮಮತೆ, ವಾತ್ಸಲ್ಯದ ಪ್ರತೀಕವಾಗಿದ್ದು, ಕಾರ್ಯಕರ್ತೆಯರು ಮಗುವಿನ ಭವಿಷ್ಯದ ತಳಮಟ್ಟದ ಕಲಿಕೆಯನ್ನು ಗಟ್ಟಿಗೊಳಿಸಬೇಕೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಪಟ್ಟಣದ ಜೈಭೀಮ ನಗರದ ಎಸ್ಸಿ ಕೇರಿ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ) ತರಗತಿಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಲ್ಲಿ ಕಲಿಸುವ ಸಂಸ್ಕಾರ, ಮೌಲ್ಯಗಳು ಬದುಕಿನುದ್ದಕ್ಕೂ ಮಗುವಿನ ವಿಕಾಸಕ್ಕೆ ಕಾರಣವಾಗುತ್ತದೆ. ಸರ್ಕಾರದ ಪ್ರಮುಖ ಯೋಜನೆಯ ಆಶಯವನ್ನು ಕಾರ್ಯಕರ್ತೆಯರು ಸಫಲಗೊಳಿಸಬೇಕೆಂದು ಹೇಳಿದರು.
ರಾಯಬಾಗ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ ಕಾಂಬಳೆ ಮಾತನಾಡುತ್ತ ರಾಯಬಾಗ ತಾಲೂಕಿನಲ್ಲಿ 38 ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ಉನ್ನತೀಕರಿಸಿದೆ. ಈ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ಮಗುವಿಗೆ ಪುಸ್ತಕ, ಬ್ಯಾಗ್, ಶೂ-ಸಾಕ್ಷ್‌ಗಳನ್ನು ವಿತರಿಸಲಾಗುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷ ಬಸವರಾಜ ಅರಕೇರಿ, ಬೆಳಗಾವಿ ಜಿಲ್ಲಾ ಯೋಜನಾ ಸಮಿತಿ ಪುರಸಭೆ ಕ್ಷೇತ್ರದ ಸದಸ್ಯ ಆನಂದಗೌಡ ಪಾಟೀಲ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಮಾಳು ಹಾಡಕಾರ, ವರ್ಧಮಾನ ಶಿರಹಟ್ಟಿ, ಸಚೀನ ಹಳಕಲ್, ಬಾಳೇಶ ಹಾಡಕಾರ, ಬಸವರಾಜ ಚೌಗಲಾ, ಬಾಬು ನಡೋಣಿ, ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಪ್ರಭಾವತಿ ಯಳ್ಕರ, ವಲಯ ಮೇಲ್ವಿಚಾರಕಿ ಶರಾವತಿ ನಿಡಸೋಶಿ, ಕಾರ್ಯಯರ್ತೆಯರಾದ ವಿದ್ಯಾ ಕಟ್ಟಿ, ಎಸ್.ಯು.ನದಾಫ್, ಭಾರತಿ ಗಚ್ಚಿ, ಶೋಭಾ ಸರಿಕರ ಮತ್ತೀತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 