ಕಚ್ಚಾ ಕಾಲುವೆ ದುರಸ್ತಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
MLA Srinivasa Mane Bhoomipuje for the repair work of the crude canal
ಹಾನಗಲ್ 14 : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ? 492 ಲಕ್ಷ ವೆಚ್ಚದಲ್ಲಿ ನಗರದ ಆನಿಕೆರೆಯಿಂದ ಅಚಗೇರಿ ಕೆರೆವರೆಗೆ 1.3 ಕಿ.ಮೀ. ಕಚ್ಚಾ ಕಾಲುವೆ ದುರಸ್ತಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ನಗರದ ಮುಖ್ಯರಸ್ತೆಯಲ್ಲಿನ ಗ್ರಾಮದೇವಿ ದೇವಸ್ಥಾನದ ಎದುರಿನ ನೂರಾನಿ ಗಲ್ಲಿಯಿಂದ ಹಿಡಿದು ಸುರಳೇಶ್ವರ ರಸ್ತೆಯಲ್ಲಿನ ಪುರಸಭೆ ಕಚೇರಿವರೆಗೆ ಮಳೆಗಾಲದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿತ್ತು. ಅಲ್ಲದೇ ನೂರಾರು ಮನೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಮಂತಗಿ ರಸ್ತೆಯ ಕಂಬಳಗೇರಿ ಮತ್ತು ಇಂದಿರಾ ನಗರದ ಚರಂಡಿ ನೀರು ನಗರದ ಕುಡಿಯುವ ನೀರಿನ ಪ್ರಮುಖ ಮೂಲ ಆನಿಕೆರೆ ತಲುಪುತ್ತಿತ್ತು. ಕಾಲುವೆ ನಿರ್ಮಾಣದಿಂದ ಮಳೆ ನೀರು ರಸ್ತೆಯಲ್ಲಿ ನಿಲ್ಲುವುದು, ಮನೆಗಳಿಗೆ ನುಗ್ಗುವುದು ಮತ್ತು ಚರಂಡಿ ನೀರು ಆನಿಕೆರೆ ತಲುಪಿ ಕಲುಷಿತಗೊಳ್ಳುವುದು ತಪ್ಪಲಿದೆ. ಮಹತ್ವಾಕಾಂಕ್ಷೆಯ ಕಾಲುವೆ ಕಾಮಗಾರಿ ಕೈಗೊಳ್ಳಬೇಕು ಎನ್ನುವುದು ಪುರಸಭೆ ನಿವಾಸಿಗಳ ಹತ್ತಾರು ವರ್ಷಗಳ ಬೇಡಿಕೆಯಾಗಿತ್ತು. ಅದೀಗ ಈಡೇರುತ್ತಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಲ್ಲೇರ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ಮುಖ್ಯಾಧಿಕಾರಿ ಜಗದೀಶ, ಮುಖಂಡರಾದ ರವಿ ದೇಶಪಾಂಡೆ, ತಮ್ಮಣ್ಣ ಆರೆಗೊಪ್ಪ, ಸಿಕಂದರ ವಾಲಿಕಾರ, ನೌಶಾದ ರಾಣೇಬೆನ್ನೂರ, ಶಿವು ಭದ್ರಾವತಿ, ಜಾಫರ್ ಬಾಳೂರ, ಮುನ್ನಾ ನಾಯ್ಕನವರ, ನಾಸೀರ್ ಖಾಜಿ, ಸುರೇಶ ನಿಂಗೋಜಿ, ಮಹೇಶ ಕೊಲ್ಲಾಪೂರ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 