ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
MLA Srinivasa Mane Bhoomipuje for road development work
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 16: ತಾಲೂಕಿನ ನೀರಲಗಿ ಮ ಆಡೂರು ಗ್ರಾಮದಲ್ಲಿ ಗುರುವಾರ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ರೂ. 70 ಲಕ್ಷ ವೆಚ್ಚದಲ್ಲಿ ನೀರಲಗಿ ಮ ಆಡೂರು - ಮಾಸನಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಗ್ರಾಮಸ್ಥರ ಸಮಸ್ಯೆ, ಅಹವಾಲು ಆಲಿಸಿದರು. ಗ್ರಾಪಂ ವಾಟರಮನ್ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆದಾಗ ಸೂಕ್ತ ಕ್ರಮಕ್ಕೆ ಸ್ಥಳದಲ್ಲಿದ್ದ ಮಾಸನಕಟ್ಟಿ ಪಿಡಿಒ ಆರ್.ವೈ.ಹನಕನಹಳ್ಳಿ ಅವರಿಗೆ ಸೂಚಿಸಿದರು. ಗ್ರಾಮದ ಸ್ಮಶಾನ ಸ್ವಚ್ಛತೆ ಕುರಿತ ಮನವಿಗೆ ಸ್ಪಂದಿಸಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಕಾಳಜಿ ವಹಿಸಿದರೆ ಗ್ರಾಮಾಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದ ಶಾಸಕ ಮಾನೆ, ತಾಲೂಕಿನಲ್ಲಿ ಗ್ರಾಮ, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ. ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಸುಧಾರಣೆ ಕಾಣದ ರಸ್ತೆಗಳನ್ನು ಸುಧಾರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಗಮನ ನೀಡಲಾಗಿದೆ ಎಂದು ತಿಳಿಸಿದರು.
ಮಾಸನಕಟ್ಟಿ ಗ್ರಾಪಂ ಅಧ್ಯಕ್ಷ ಗಂಗಪ್ಪ ಹಿರಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೀಲಪ್ಪ ಮಾಳಗಿಮನಿ, ಸದಸ್ಯರಾದ ಜಾಫರಸಾಬ ನದಾಫ್, ಜಾಯಿದಾ ಹುರುಳಿಕುಪ್ಪಿ, ಚಂದ್ರ್ಪ ಜೈನರ, ಈಶ್ವರ ಚೌಟಿ, ಮುಖಂಡರಾದ ಬಸವರಾಜ ಹೊಸಮನಿ, ಮಹಬಳೇಶ್ವರ ಚಿಕ್ಕಮಠ, ಚಂದ್ರು ಕಲ್ಲವಡ್ಡರ, ಸುರೇಶ ಗೊದಮನಿ, ಆನಂದ ಬೇವಿನಕಟ್ಟಿ, ಪುಟ್ಟರಾಜ ಹೊಸಮನಿ, ಶಂಭುಲಿಂಗ ಕಮ್ಮಾರ, ಬಸವಣ್ಣೆಪ್ಪ ದೇವಗಿರಿ, ಚಂದ್ರಶೇಖರ ಕುಂಕರ, ಬಸನಗೌಡ ಪಾಟೀಲ, ಅಶೋಕ ಹೆಳವರ, ಚಂದ್ರಶೇಖರ ದೇವಗಿರಿ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 