ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
MLA Srinivas Mane performs Bhoomi Pooja for development works
ಹಾನಗಲ್ 12: ತಾಲೂಕಿನ ಕೆಲವರಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ? 1.30 ಕೋಟಿ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ? 55 ಲಕ್ಷ, ಬ್ಯಾತನಾಳ ಗ್ರಾಮದಲ್ಲಿ ? 30 ಲಕ್ಷ, ಮಾಳಾಪುರ ಗ್ರಾಮದಲ್ಲಿ 30 ಲಕ್ಷ, ಕೆಲವರಕೊಪ್ಪ ಗ್ರಾಮದಲ್ಲಿ ? 15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸಿಸಿರಸ್ತೆ, ಸಿಡಿ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ತಾಲೂಕಿನ ಜೀವನಾಡಿ ಧರ್ಮಾ ಜಲಾಶಯದ ಕಾಲುವೆ ಜಾಲ ಹೂಳೆತ್ತುವ ಕಾಮಗಾರಿಗೆ ? 50 ಕೋಟಿ ವೆಚ್ಚದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಕಾಲುವೆ ಹೂಳು ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳಿಗೆ ಸಮರ್ಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ತಾಲೂಕಿನ ರಸ್ತೆಗಳ ಸುಧಾರಣೆಗೂ ? 50 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ತಾಲೂಕಿಗೆ ವಾರ್ಷಿಕ ? 250 ಕೋಟಿ ಆರ್ಥಿಕ ನೆರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಿಗುತ್ತಿದ್ದು, ಜನಕಲ್ಯಾಣ ಕಾರ್ಯಕ್ರಮಗಳ ಜೊತೆ ಜೊತೆಗೆ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಮಾನೆ ಶ್ರೀನಿವಾಸ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಗೋಪಾಲ ಕಾನಮನಿ, ಸದಸ್ಯರಾದ ಬಸವರಾಜ ಮಾಳಣ್ಣನವರ, ಸಿದ್ದು ವಡ್ಡರ, ಶಾಂತಪ್ಪ ಬಡಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಬಸವರಾಜ ಕಾನಮನಿ, ಲೋಕೇಶ ಅಗಸಿಬಾಗಿಲ, ಪರಮೇಶ ಶಿಗಡಿ, ವಾಮೇಶ ಲಮಾಣಿ, ಬಸವಂತ ನಾಯ್ಕ, ಕಾಂತಪ್ಪ ಲಮಾಣಿ, ಭೀಮಣ್ಣ ಲಮಾಣಿ, ಬಂಗಾರೆಪ್ಪ ಕಲಕೇರಿ, ನಾಗರಾಜ ವಡ್ಡರ, ವೀರಭದ್ರ್ಪ ಕೋಳೂರ, ನಾಗಪ್ಪ ಪೂಜಾರ, ಮಹರುದ್ರ್ಪ ಮಾಳಣ್ಣನವರ, ಗುಡ್ಡಪ್ಪ ತಿಳವಳ್ಳಿ, ಬಸವರಾಜ ಮತ್ತಿಹಳ್ಳಿ, ನಾಗರಾಜ ಈಳಿಗೇರ, ವೆಂಕಟೇಶ ಅಗಸಿಬಾಗಿಲ, ಕೃಷ್ಣ ಮಡ್ಲೂರ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 