ಸಂಪೂರ್ಣತಾ ಅಭಿಯಾನ ಸನ್ಮಾನ ಸಮಾರಂಭದಲ್ಲಿ ಶಾಸಕ ನಾಡಗೌಡ: ಅಭಿಮತ ಸಮಗ್ರ ಅಭಿವೃದ್ಧಿಗೆ ಜನರ ಭಾಗವಹಿಸುವಿಕೆ ಅಗತ್ಯ
MLA Nadagowda at the Sampurnata Abhiyan felicitation ceremony: People's participation is necessary
ಸಂಪೂರ್ಣತಾ ಅಭಿಯಾನ ಸನ್ಮಾನ ಸಮಾರಂಭದಲ್ಲಿ ಶಾಸಕ ನಾಡಗೌಡ: ಅಭಿಮತ ಸಮಗ್ರ ಅಭಿವೃದ್ಧಿಗೆ ಜನರ ಭಾಗವಹಿಸುವಿಕೆ ಅಗತ್ಯ
ತಾಳಿಕೋಟಿ 30: ಯಾವುದೇ ಒಂದು ತಾಲೂಕು ಸಮಗ್ರ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಅಲ್ಲಿ ಸರ್ಕಾರಿ ಅಧಿಕಾರಿಗಳು ಮಾತ್ರ ಕೆಲಸ ಮಾಡಿದರೆ ಸಾಲದು ಇದಕ್ಕೆ ಸಾರ್ವಜನಿಕರ ಭಾಗವಹಿಸುವಿಕೆಯೂ ಅಷ್ಟೇ ಅತ್ಯಗತ್ಯವಾಗಿದೆ ಎಂದು ಕೆ.ಎಸ್. ಡಿ.ಎಲ್.ನಿಗಮದ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು. ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಮಂಗಳವಾರ ನೀತಿ ಆಯೋಗ, ಜಿಲ್ಲಾಡಳಿತ,ಜಿಪಂ ಮತ್ತು ತಾಲೂಕಾಡಳಿತ,ತಾಪಂ ಸಹಯೋಗದೊಂದಿಗೆ ಮಹತ್ವಕಾಂಕ್ಷಿ ತಾಲೂಕ ಕಾರ್ಯಕ್ರಮದಡಿ ಹಮ್ಮಿಕೊಂಡ ಸಂಪೂರ್ಣತ ಅಭಿಯಾನ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅತಿ ಹಿಂದುಳಿದ 14 ತಾಲೂಕುಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರದ ಸಂಪೂರ್ಣತಾ ಅಭಿಯಾನಕ್ಕೆ ಕಳೆದ ವರ್ಷ ಚಾಲುನೆ ನೀಡಲಾಗಿತ್ತು ಇದರಲ್ಲಿ ತಾಳಿಕೋಟಿ ತಾಲೂಕ ಕೂಡಾ ಒಂದಾಗಿತ್ತು, ಒಟ್ಟು 39 ಸೂಚ್ಯಂಕಗಳಲ್ಲಿ ಮೊದಲ ಹಂತದಲ್ಲಿ ಆರು ಸೂಚ್ಯಂಕಗಳನ್ನು ಕೊಡಲಾಗಿತ್ತು ಇದರಲ್ಲಿ ಆರೋಗ್ಯ ಶಿಕ್ಷಣ ಮೂಲ ಸೌಲಭ್ಯ ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನಮಟ್ಟ ಎತ್ತರಿಸುವ ಉದ್ದೇಶ ಈ ಕಾರ್ಯಕ್ರಮದಾಗಿತ್ತು ಒಂದು ವರ್ಷದ ನಂತರ ಶೇ.100ರಷ್ಟು ಪ್ರಗತಿ ಸಾಧನೆ ಆಗಿದ್ದು ಸಂತೋಷದ ವಿಷಯವಾಗಿದೆ ಇದಕ್ಕಾಗಿ ನಾನು ನಮ್ಮೆಲ್ಲ ಅಧಿಕಾರಿ ವರ್ಗಕ್ಕೆ ಅಭಿನಂದಿಸುತ್ತೇನೆ ಎಂದ ಅವರು ಉಳಿದ 33 ಸೂಚ್ಯಂಕ ತಲುಪುವ ಗುರಿ ನಮ್ಮ ಮುಂದಿದೆ ಇದಕ್ಕೆ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅವರು ಒಂದು ವರ್ಷದಲ್ಲಿ ಶೇ.100 ರಷ್ಟು ಸಾಧನೆ ಮಾಡಿ ತೋರಿಸಿದ ನಮ್ಮೆಲ್ಲ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ ಈ ಸಾಧನೆಗಾಗಿ ಬಂಗಾರದ ಪದಕವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಜಿ.ಪಂ.ಸಿಇಓ ರಿಷಿ ಆನಂದ ಮಾತನಾಡಿದರು. ಇದೇ ಸಂದರ್ಭದಲ್ಲಿ ಆರು ಸೂಚ್ಯಂಕಗಳಲ್ಲಿ ಸಾಧನೆ ಮಾಡಿದ ಎಲ್ಲಾ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಿ ಗೌರವಿಸಲಾಯಿತು. 5 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಿಸಲಾಯಿತು ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.ಜಿಪಂ ಮುಖ್ಯ ಯೋಜನಾಧಿಕಾರಿ ಎಸ್ಜಿ ಅಲ್ಲಾಪೂರ ಪ್ರಸ್ತಾವಿಕವಾಗಿ ಮಾತನಾಡಿದರು. ತಾಳಿಕೋಟಿ ತಹಸಿಲ್ದಾರ್ ಡಾ.ವಿನಯಾ ಹೂಗಾರ, ಜಿಲ್ಲಾ ಉ.ಕೃ.ನಿ. ಶರಣಗೌಡ ಬಿಳಗಿ, ಟಿಹೆಚ್‌ಒ ಡಾ. ಸತೀಶ ತಿವಾರಿ, ಪಿಡಿಪಿಓ ಶಿವಕುಮಾರ ಕುಂಬಾರ,ಎಇಇ ಆರ್.ಎಸ್.ಹಿರೇಗೌಡರ,ಬಿಇಓ ಬಿ.ಎಸ್.ಸಾವಳಗಿ, ಮುಖಂಡರಾದ ಸಿದ್ದನಗೌಡ ಪಾಟೀಲ ಯಾಳಗಿ, ಪ್ರಭುಗೌಡ ಮದರಕಲ್ ಮಡು ಸಾಹುಕಾರ ಬಿರಾದಾರ ಇದ್ದರು. ಪಿಡಿಓ ಬಿ.ಎಂ.ಸಾಗರ ಸ್ವಾಗತಿಸಿದರು.ಬಿ.ಐ.ಹಿರೇಹೊಳಿ ನಿರೂಪಿಸಿದರು. ಶಿಕ್ಷಕ ರಾಜು ಬಿಜಾಪುರ ವಂದಿಸಿದರು. ಗಮನ ಸೆಳೆದ ಮಳಿಗೆಗಳು: ಜಲಜೀವನ್ ಮಿಷನ್ ತೋಟಗಾರಿಕೆ ಇಲಾಖೆ ಪಶುಪಾಲನೆ ಮತ್ತು ಪಶು ವೇದಿಕೆ ಸೇವಾ ಇಲಾಖೆ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಹಾಗೂ ನರೇಗಾ ಮಾಹಿತಿ ಕೇಂದ್ರ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಏರಿ್ಡಸಿದ್ದ ವಸ್ತು ಪ್ರದರ್ಶನ ಮಳಿಗೆಗಳು ಗಮನಸೆಳೆದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 