ಗುಜರಾತನ ವಡೋದರ ಪಂಪ್‌ಗಳ ಉತ್ಪಾದನಾ ಘಟಕಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ
MLA Laxman Savadi visits pump manufacturing unit in Vadodara, Gujarat
ಗುಜರಾತನ ವಡೋದರ ಪಂಪ್‌ಗಳ ಉತ್ಪಾದನಾ ಘಟಕಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ
ಅಥಣಿ 06: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಪಂಪ್‌ಗಳ ಉತ್ಪಾದನಾ ಘಟಕವಿರುವ ಗುಜರಾತನ ವಡೋದರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಸ್ಥಳೀಯ ನೀರಾವರಿ ಇಲಾಖೆಯ ಇಂಜನೀಯರ್ಸ ಮತ್ತು ಬೆಂಗಳೂರಿನ ಕನ್ಸಲ್ಟಂಟ್ ಕಂಪನಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ನಿಗದಿತ ಸಮಯದೊಳಗಾಗಿ ಮೂರೂ ಪಂಪಗಳನ್ನು ಪೂರೈಕೆ ಮಾಡಬೇಕು ಎಂದು ಉತ್ಪಾದನಾ ಸಂಸ್ಥೆಗೆ ಸೂಚಿಸಿದರು.
ಈ ಸಂಬಂಧ ಶಾಸಕ ಲಕ್ಷ್ಮಣ ಸವದಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ 17500 ಹಾರ್ಸ ಪಾವರ ಸಾಮರ್ಥ್ಯ ಉಳ್ಳ ಮೂರು ಪಂಪ್‌ಗಳ ತಯಾರಿಕೆಯನ್ನು ಹಾಗೂ ಸ್ಪೈರಲ್ ಕೇಸಿಂಗ ಕಾಮಗಾರಿಗಳನ್ನು ಪರೀಶೀಲಿಸಿದ್ದು, ಮುಂಬರುವ ನವ್ಹೆಂಬರ ಒಳಗಾಗಿ ಮೂರೂ ಪಂಪಗಳನ್ನು ಪೂರೈಕೆ ಮಾಡುವ ಮೂಲಕ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿರುವೆ ಎಂದ ಅವರು ಈ ಮೂರು ಪಂಪ್‌ಗಳು ಕೋರಿಯಾದಲ್ಲಿ ಉತ್ಪಾದನೆಯಾಗುತ್ತವೆ ಅಲ್ಲಿಂದ ವಡೋದರಾಕ್ಕೆ ಏರ್ ಲಿಫ್ಟ ಮಾಡಿಕೊಂಡು ಅಲ್ಲಿಂದ ಅಥಣಿಗೆ ಪೂರೈಕೆ ಮಾಡಿಕೊಳ್ಳುತ್ತೇವೆ ಎಂದರು.
ನೀರಾವರಿ ವಂಚಿತ ಪೂರ್ವ ಭಾಗದ ಕಕಮರಿ, ರಾಮತೀರ್ಥ, ಕೊಟ್ಟಲಗಿ, ತೆಲಸಂಗ, ಬನ್ನೂರ, ಹಾಲಳ್ಳಿ ಸೇರಿದಂತೆ ಏಳು ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮುಂದಿನ ವರ್ಷದ ಜನೇವರಿ ಒಳಗಾಗಿ ಪೂರ್ಣಗೊಳಿಸುವ ಗುರಿ ಇದ್ದು, ಇದಕ್ಕಾಗಿ ಗುಜರಾತನ ಪಂಪ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ನವ್ಹೆಂಬರ ಅಂತ್ಯದೊಳಗಾಗಿ ಮೂರೂ ಪಂಪಗಳನ್ನು ಪೂರೈಕೆ ಮಾಡಬೇಕು ಎಂದು ಸೂಚಿಸಿರುವೆ ಎಂದರು. ಶಾಸಕ ಲಕ್ಷ್ಮಣ ಸವದಿ ಇವರಿಗೆ ಅಥಣಿ ನೀರಾವರಿ ಇಲಾಖೆಯ ಪ್ರವೀಣ ಹುಣಶಿಕಟ್ಟಿ, ಬೆಂಗಳೂರಿನ ಕನ್ಸಲ್ಟಂಟ ಸಂಸ್ಥೆಯ ಇಂಜನೀರ್ಸ ಸೇರಿದಂತೆ ಅನೇಕರು ಸಾಥ ನೀಡಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 