ಸಂಸ್ಕೃತ ಪಾಠಶಾಲೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಂದ ಭೂಮಿ ಪೂಜೆ

ಸಂಸ್ಕೃತ ಪಾಠಶಾಲೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಂದ ಭೂಮಿ ಪೂಜೆ MLA K. Raghavendra Hitnal performs Bhoomi Puja for Sanskrit Pathshala

                              ಕೊಪ್ಪಳ 21:  ಜಂಗಮ ಸಮಾಜದಿಂದ ಭಾಗ್ಯನಗರದಲ್ಲಿ ಭೂಮಿಯನ್ನು ಖರೀದಿಸಲಾಗಿತ್ತು, ಆದರೆ ಈಗ ಕಟ್ಟಡ ಕಾಮಗಾರಿಗೆ ಸಮಯ ಕೂಡಿಬಂದಿದ್ದು, ಇಂದು ಸಮಾಜದ ಎಲ್ಲರೂ ಸೇರಿ ನೂತನ ಸಂಸ್ಕೃತ ಪಾಠಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು ನಮಗೆ ಸಂತೋಷವನ್ನುಂಟು ಮಾಡಿದ್ದು ಮುಂದಿನ ದಿನಗಳಲ್ಲಿ ಈ ಕಟ್ಟಡಕ್ಕೆ ಬೇಕಾದ ಮೂಲ ಸೌಕರ್ಯಗಳಿಗೆ ನಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುತ್ತೇನೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಭಾಗ್ಯನಗರದ ಓಜನಹಳ್ಳಿ ರಸ್ತೆಯಲ್ಲಿರುವ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ದಿಯ ಜಾಗೆಯಲ್ಲಿ ಶುಕ್ರವಾರ ದಂದು ಸಂಸ್ಕೃತ ಪಾಠ ಶಾಲೆಯ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ನಂತರ ಜಂಗಮ ಸಮಾಜದ ತಾಲೂಕಾಧ್ಯಕ್ಷ ಹಂಪಯ್ಯ ಮೆತಗಲ್ ಮಾತನಾಡಿ, ಭಾಗ್ಯನಗರದಲ್ಲಿರುವ ನಮ್ಮ ಸಮಾಜದ ಜಾಗೆಯಲ್ಲಿ ಭವ್ಯವಾದ ವೈದಿಕ ಸಂಸ್ಕೃತ ಪಾಠ ಶಾಲೆಯನ್ನು ಪ್ರಾರಂಭಿಸಲು ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ಜರುಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಪ್ರತಿಯೊಬ್ಬ ವಟುಗಳಿಗೆ ವೇದ, ಅಧ್ಯಯನ ಹಾಗೂ ಸಂಸ್ಕೃತ ಪಾಠ ಶಾಲೆ ಪ್ರಾರಂಭಗೊಳ್ಳಲಿವೆ. ಇದಕ್ಕೆ ಸಮಾಜದ ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.  

                            ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಹೊನ್ನೂರ್ ಸಾಬ್, ಪಪಂ ಸದಸ್ಯ ಗವಿಸಿದ್ದಯ್ಯ, ಕೊಪ್ಪಳ ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ಗುರುರಾಜ್ ಹಲಿಗೇರಿ, ಕಾಂಗ್ರೆಸ್ ಮುಖಂಡ ಕೆಎಂ ಸಯ್ಯದ್, ಜಂಗಮ ಸಮಾಜ ಗೌರವಧ್ಯಕ್ಷ ಕೊಟ್ರಬಸಯ್ಯ ಹಿರೇಮಠ, ಅಧ್ಯಕ್ಷ ಹಂಪಯ್ಯ ಮೆತಗಲ್ಲ, ಉಪಾಧ್ಯಕ್ಷ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಪ್ರಧಾನ ಕಾರ್ಯದರ್ಶಿ ಬಸಯ್ಯ ಹಿರೇಮಠ, ಸಮಾಜದ ಮುಖಂಡರಾದ ವಿಎಂ ಭೂಸನೂರಮಠ, ನೀಲಕಂಠಯ್ಯ ಹಿರೇಮಠ, ಗವಿಸಿದಯ್ಯ ಸಸಿಮಠ, ಬಾಲಚಂದರ್, ಸಿದ್ದಯ್ಯ ಹಿರೇಮಠ, ಪಂಪಯ್ಯ ಹಿರೇಮಠ, ಶಿವಕುಮಾರ್ ಹಿರೇಮಠ, ನಾಗಭೂಷಣ ಸಾಲಿಮಠ, ಶಂಕ್ರಯ್ಯ ಸಾಲಿಮಠ, ಸಿದ್ದು ಹಿರೇಮಠ, ಬಿಕೆ ಹಿರೇಮಠ, ಶಂಕ್ರಯ್ಯ ಗುತ್ತಿಗೆದಾರರು, ಪಂಚಯ್ಯ ಹಿರೇಮಠ, ಮಂಜುನಾಥ ಕದ್ರಳ್ಳಿಮಠ, ಶಿವಯ್ಯ,ರವಿಯ್ಯ, ಬಸಲಿಂಗಯ್ಯ ಗದಗಿನಮಠ, ಜಯಶ್ರೀ ಹಿರೇಮಠ, ಲಲಿತಾ ಹಿರೇಮಠ, ಪಾರ್ವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.