ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ
MLA J.N.Ganesh Bhumi Pooja for temple reconstruction
ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ
ಕಂಪ್ಲಿ 24: ಪಟ್ಟಣದ ಕೊರವರ ಓಣಿಯಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಹಾಗೂ ಕೊರವರ ಸಮುದಾಯದ ಆರಾಧ್ಯ ದೇವಿಯಾದ ಶ್ರೀ ಕೊರವರ ಮಾರೆಮ್ಮ ದೇವಿ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆಯನ್ನು ನೆರವೇರಿಸಿದರು.ಪಟ್ಟಣದ ಕೊರವರ ಓಣಿಯಲ್ಲಿರುವ ಕೊರವರ ಮಾರೆಮ್ಮ ದೇವಿ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು, ಶಿಥಿಲಗೊಂಡಿದ್ದು, ಕೊರವರ ಸಮುದಾಯದವರು ದೇವಸ್ಥಾನ ಪುನರ್ ನಿರ್ಮಾಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ 5 ಲಕ್ಷರೂ ತಮ್ಮ ಶಾಸಕರ ಅನುನದಾನದಲ್ಲಿ ಒದಗಿಸಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನೂ ನೀಡಲಾಗುವುದು ಎಂದರು.ತಾಲ್ಲೂಕು ಕೊರವರ ಸಮುದಾಯದ ಕಾರ್ಯದರ್ಶಿ ವಿರುಪಣ್ಣ ಮಾತನಾಡಿ, ನಮ್ಮ ಸಮುದಾಯದ ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ದೇವಿಯ ದೇವಸ್ಥಾನ ಶಿಥಿಲಗೊಂಡಿದ್ದು, ಅದನ್ನು ಪುನರ್ಮಿಸಲು ಸಮುದಾಯದವರು ಮುಂದಾಗಿದ್ದು, ಸುಮಾರು 35 ರಿಂದ 40 ಲಕ್ಷ ರೂಗಳ ವೆಚ್ಚದಲ್ಲಿ ಶಿಲಾದೇವಸ್ತಾನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಶಾಸಕರು ಅನುದಾನ ಒದಗಿಸುವುದಾಗಿ ಭರವಸೆಯನ್ನು ನೀಡಿದ್ದು, ಈಗಾಗಲೇ 5 ಲಕ್ಷರೂಗಳನ್ನು ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಅದ್ಯಕ್ಷ ಎನ್.ಹಬೀಬ್ ರೆಹಮಾನ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಕೊರವರ ಸಮಾಜದ ಗೌರವಾಧ್ಯಕ್ಷ ಮಲ್ಲಪ್ಪ, ಅಧ್ಯಕ್ಷ ಯಂಕಪ್ಪ, ಮುಖಂಡರಾ ಹೊಳೆಯಪ್ಪ, ಗಂಗಾಧರ್, ಹನುಮಂತಪ್ಪ, ಜಂತಕಲ್ ಹನುಮಂತಪ್ಪ, ಹುಲುಗಪ್ಪ, ಶ್ರೀನಿವಾಸ್, ದರೋಜಿ ಬಸವರಾಜ, ತೆಕ್ಕಲಕೋಟೆ ಹುಲುಗಪ್ಪ, ಕೆ.ರಾಮಾಲಿಸ್ವಾಮಿ, ಕೆ.ಸುರೇಶ,ಶೀನಪ್ಪ, ಬಿ.ರಾಮ, ಜಂತಕಲ್_ಸಣ್ಣಹನುಮಂತ.ಹುಲುಗಪ್ಪ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 