ಫೆಸ್‌ಬುಕ್, ವಾಟ್ಸಾಪ್ ಬಿಟ್ಟು ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಶಾಸಕ ಜೆ.ಎನ್‌.ಗಣೇಶ್

ಫೆಸ್‌ಬುಕ್, ವಾಟ್ಸಾಪ್ ಬಿಟ್ಟು ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ  ಶಾಸಕ ಜೆ.ಎನ್‌.ಗಣೇಶ್ MLA J.N. Ganesh urges female students to leave Facebook and WhatsApp and pursue education for a bri

ಕಂಪ್ಲಿ 24 : ಆಧುನಿಕ ಯುಗದಲ್ಲಿ ಜೀವನ ಕಷ್ಟಕರ. ಅಂದರಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು. ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿಯಲ್ಲಿರುವ ವಿವಿಎಸ್‌ಎಸ್ ಟ್ರಸ್ಟಿನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಮದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ದಿನದಲ್ಲಿ ಜೀವನ ಅಷ್ಟು ಸುಲಭವಲ್ಲ. ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ ಅತಿಮಖ್ಯವಾಗಿದೆ.

ಓದುವ ಹಂತದಲ್ಲಿ ಎಷ್ಟೇ ಕಷ್ಟ ಬಂದರೂ ವಿದ್ಯೆ ಕಲಿಯಬೇಕು. ಜವಾಬ್ದಾರಿ ಇಲ್ಲದ ಹೆಣ್ಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಜೀವನ ನಡೆಸುವುದು ಕಷ್ಟಕರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ಉನ್ನತ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನದಂದು ಅಭಿವೃದ್ಧಿಯೊಂದಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಾಧನೆಯ ಆಲೋಚನೆ ಇದ್ದರೆ ಒಳ್ಳೆಯ ಬದುಕು ಸಾಧಿಸಲು ಸಾಧ್ಯ. ಫೆಸ್‌ಬುಕ್, ವಾಟ್ಸಾಪ್ ಬಿಟ್ಟು ಓದಿನ ಕಡೆಗೆ ಮುಂದಾಗಬೇಕು. ಪೋಷಕರ ಕಷ್ಟಗಳನ್ನು ಅರಿತು ಶಿಕ್ಷಣದೊಂದಿಗೆ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ನಂತರ ಹೆಚ್‌.ವೀರಾಪುರದ ಶಿವಲಿಂಗ ಮಠದ ಜಡೇಶ್ ತಾತ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿ, ಮಕ್ಕಳು ಗುರಿಯನ್ನಿಟ್ಟುಕೊಂಡು ಕಲಿಕಾ ಹಂತದಲ್ಲಿ ಮುಂದೆ ಸಾಗಿದರೆ ಒಳ್ಳೆಯ ಭವಿಷ್ಯ ದೊರಕುತ್ತದೆ ಎಂದರು.ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಮಾತನಾಡಿದರು  ಪುರಸಭೆ ಮಾಜಿ ಸದಸ್ಯ ಸಿ.ಆರ್‌.ಹನುಮಂತ ಮಾತನಾಡಿ, ಶಿಕ್ಷಣದೊಂದಿಗೆ ದೇಶದ ಉತ್ತಮ ನಾಗರಿಕರಾಗಬೇಕು. ಐಎಎಸ್, ಐಪಿಎಸ್ ಮೂಲಕ ಹುದ್ದೆಗಳನ್ನು ಪಡೆದು ಪೋಷಕರ ಪಾಲನೆ ಪೋಷಣೆ ಮಾಡಬೇಕು ಎಂದರು.

ವಿವಿಎಸ್‌ಎಸ್ ಟ್ರಸ್ಟ್‌ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಅಧ್ಯಕ್ಷತೆವಹಿಸಿದ್ದರು.  ವಿವಿಧ ರಂಗದಲ್ಲಿ ಸಾಧನೆ ಮಾಡಿದ ಶಾಂತ ಗಡ್ಡದ್, ಎಂ.ಬಿ.ಶುಭಾ ಸೋಮಶೇಖರ, ಕೆ.ಶೋಭಾ, ಡಾ.ಶ್ರದ್ಧಾ ಭರತ್ ಇವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಕ್ಕಿ ಗಿರಿಣಿ ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪ್ರಾಚಾರ್ಯರಾದ ಮಹಮ್ಮದ್ ಶಫಿ, ಬಸವರಾಜಸ್ವಾಮಿ, ಮಹಾಬಲೇಶ್ವರ​‍್ಪ, ಪತ್ರಕರ್ತರಾದ ಬಡಿಗೇರ ಜಿಲಾನ್ ಸಾಬ್, ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.