ನೂತನ 12*7 ಬೊಲೆರೊ ನಿರ್ವಹಣಾ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ
MLA J.N. Ganesh flagged off the new 12*7 Bolero maintenance vehicle
ಕಂಪ್ಲಿ 13: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕಂಪ್ಲಿ ವಿದ್ಯುತ್ ಉಪವಿಭಾಗಕ್ಕೆ ಮಂಜೂರಾದ ನೂತನ 12*7 ಬೊಲೆರೊ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಾಹನಕ್ಕೆ ಶಾಸಕ ಜೆ.ಎನ್.ಗಣೇಶ್ ಮಂಗಳವಾರ ಚಾಲನೆ ನೀಡುವ ಮೂಲಕ ಲೋಕಾರೆ್ಣಗೊಳಿಸಿದರು.
ಶಾಸಕ ಗಣೇಶ ಅವರು ಮಾತನಾಡಿ, ವಿದ್ಯುತ್ ಸಮಸ್ಯೆಗಳು, ಕಂಬಗಳು ಬಿದ್ದಿರುವುದು, ವಿದ್ಯುತ್ ಕಡಿತ, ಮತ್ತು ಇತರ ವಿದ್ಯುತ್ ಸಂಬಂಧಿತ ದೂರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕೆಲಸವಾಗುತ್ತದೆ. ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ದೂರುಗಳಿದ್ದಲ್ಲಿ ಗ್ರಾಹಕರು 1912ಗೆ ಕರೆ ಮಾಡಿ ತಿಳಿಸಬಹುದಾಗಿದೆ. ಆ ಮೂಲಕ ಜೆಸ್ಕಾಂ ಸಿಬ್ಬಂದಿ ಸಮಸ್ಯೆಗೆ ಕೂಡಲೇ ಸ್ಪಂದಿಸಲಿದ್ದಾರೆ ಎಂದರು.
ನಂತರ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ) ಶ್ರೀನಿವಾಸ ಪ್ರಸಾದ್ ಕೆ ಮಾತನಾಡಿ, ತ್ವರಿತ ದೂರು ಪರಿಹಾರ ಮತ್ತು ಸಾರ್ವಜನಿಕರಿಂದ ಬರುವ ವಿದ್ಯುತ್ ವ್ಯತ್ಯಯದ ದೂರುಗಳಿಗೆ ಲೈನ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತಲುಪಲು ಈ ವಾಹನ ಸಹಕಾರಿಯಾಗಲಿದೆ. ದಿನದ 12*7 ಗಂಟೆಯೂ ತುರ್ತು ನಿರ್ವಹಣಾ ಕಾರ್ಯಗಳಿಗಾಗಿ ಈ ವಾಹನ ಸನ್ನದ್ಧವಾಗಿರುತ್ತದೆ. ಸುರಕ್ಷಿತ ಪರಿಕರಗಳ ಸಾಗಣೆ ಮತ್ತು ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಬೇಕಾಗುವ ಅಗತ್ಯ ಉಪಕರಣಗಳು ಹಾಗೂ ಸುರಕ್ಷತಾ ಕವಚಗಳನ್ನು ಹೊತ್ತೊಯ್ಯಲು ಅನುಕೂಲಕರವಾಗಿದೆ. ಗ್ರಾಮೀಣ ಭಾಗಕ್ಕೆ ಸುಲಭ ಸಂಪರ್ಕಿಸಲು ಸಾಧ್ಯ. ತುರ್ತು ವಿದ್ಯುತ್ ಅನಾಹುತಗಳನ್ನು ತಡೆಗಟ್ಟಲು ಮತ್ತು ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಆನೆಯ ಬಲ ಬಂದಂತಾಗಿದೆ. ಸಾರ್ವಜನಿಕರು ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದು, ಈ ಹೊಸ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ,
ಸಹಾಯಕ ಇಂಜಿನಿಯರ್(ಎಇ)ಗಳಾದ ವಿನೋದ್ ಕುಮಾರ್, ಭೀಮೇಶ್, ಶ್ರೀನಿವಾಸ್, ಜೆಇ ಮಹಾಂತೇಶ್ ಹಾಗೂ ಉಪವಿಭಾಗದ ಎಲ್ಲಾ ಶಾಖಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 