ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಶಾಸಕ ಗಣೇಶ ಬೃಹತ್ ಹನುಮ ಪಾದಯಾತ್ರೆ
ಚಿಕ್ಕೋಡಿ 12: ಹನುಮ ಜಯಂತಿ ಪ್ರಯುಕ್ತ ಚಿಕ್ಕೋಡಿ ಪಟ್ಟಣದಿಂದ ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನದವರೆಗೆ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಸುಮಾರು 5 ಸಾವಿರ ಭಕ್ತರು ಹನುಮ ಪಾದಯಾತ್ರೆ ನಡೆಸಿ ಭಕ್ತಿಭಾವ ಮೆರೆದರು.
ಚಿಕ್ಕೋಡಿ ಬಸ್ ನಿಲ್ದಾಣ ಹತ್ತಿರ ಸೇರಿದ ಭಕ್ತರು ಬಸವ ಸರ್ಕಲ, ಹಾಲಟ್ಟಿ, ಚನ್ನವರ ಕ್ರಾಸ, ಚೆನ್ಯಾನದಡ್ಡಿ, ಜೈನಾಪೂರ ಮಾರ್ಗವಾಗಿ ಹನುಮ ಪಾದಯಾತ್ರೆ ನಡೆಯಿತು. ಶಾಸಕ ಗಣೇಶ ಹುಕ್ಕೇರಿ ಅವರು 25 ಕೆಜಿ ಬೆಳ್ಳಿಯ ಕವಚದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಮಾರ್ಗಮಧ್ಯೆದಲ್ಲಿ ಭಕ್ತರಿಗೆ ಅಲ್ಪೋಪಹಾರ, ತಂಪು ನೀರು, ಹಣ್ಣಿನ ಜ್ಯೂಸ್ ವ್ಯವಸ್ಥೆ ಕಲ್ಪಿಸಿದ್ದರು. ವಿಶೇಷವಾಗಿ ಮುಸ್ಲಿಂ ಬಾಂಧವರು ಹನುಮ ಭಕ್ತರಿಗೆ ಕಲ್ಲಂಗಡಿ ಹಣ್ಣಿನ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿತ್ತು. ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನಕ್ಕೆ ತಲುಪಿದ ಪಾದಯಾತ್ರೆಯು ದೇವಸ್ಥಾನದ ಕಮೀಟಿಯು 25 ಕೆಜಿ ಬೆಳ್ಳಿಯ ಕವಚ ಭವ್ಯವಾಗಿ ಸ್ವಾಗತಿಸಿದರು.
10 ಅಡಿಯ ಕಲ್ಲಿನ ಹನುಮಾನ ಮೂರ್ತಿ ಮತ್ತು 45 ಲಕ್ಷ ರೂ ವೆಚ್ಚದ ದೇವಸ್ಥಾನದ ಮೇಲ್ಚಾವಣಿಯನ್ನು ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು. ಅನ್ನಪೂರ್ಣೇಶ್ವರಿ ಪೌಂಡೇಶನದಿಂದ 25 ಸಾವಿರ ಭಕ್ತರಿಗೆ ಮಹಾಪ್ರಸಾದಕ್ಕೆ ಸ್ವಾಮೀಜಿಗಳು ಚಾಲನೆ ನೀಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ತೋರಣಹಳ್ಳಿ ದೇವಸ್ಥಾನ ಅಭಿವೃದ್ಧಿಯಾಗಲು ನಾನು ಮತ್ತು ಶಾಸಕ ಗಣೇಶ ಹುಕ್ಕೇರಿ ಭಕ್ತಿಭಾವದಿಂದ ಪ್ರಯತ್ನ ಮಾಡುತ್ತೇವೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ 20 ಲಕ್ಷ ರೂ ಅನುದಾನ ಕೊಡಲಾಗುತ್ತದೆ. ದೇವಸ್ಥಾನದ ಸುತ್ತಮುತ್ತ ಭಕ್ತರಿಗೆ ಸುರಕ್ಷಿತ ರಸ್ತೆ ಅಭಿವೃದ್ಧಿಗೆ 4 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಚಿಕ್ಕೋಡಿಯಿಂದ ತೋರಣಹಳ್ಳಿಯವರಿಗೆ ಸುಮಾರು 14 ಕಿ.ಮೀ ಹನುಮ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನ ಮಾಡೋಣ ಎಂದರು.
ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಸದಲಗಾ ಶ್ರದ್ಧಾನಂದ ಸ್ವಾಮೀಜಿ, ಕುಮಾರ ಪಾಟೀಲ, ರವಿ ಮಿರ್ಜೆ, ಪಿ.ಐ.ಕೋರೆ, ರಾಮಾ ಮಾನೆ, ಅನಿಲ ಮಾನೆ, ಇರ್ಾನ ಭೇಪಾರಿ, ಸಾಭೀರ ಜಮಾದಾರ, ಗುಲಾಬ ಬಾಗವಾನ, ಅನಿಲ ಪಾಟೀಲ, ವಿನೋಧ ಕಾಗೆ, ರಾಜು ಕರಾಳೆ, ಸುನೀಲ ಸಪ್ತಸಾಗರೆ, ಉಮೇಶ ಸಾತ್ವರ, ರಾಮಗೌಡ ಸಣ್ಣಲಚ್ಚಪ್ಪಗೋಳ, ಭೀಮಾ ಸಣ್ಣಲಚ್ಚಪ್ಪಗೋಳ, ಬಸು ಮಾಳಗೆ, ಮಲಗೌಡ ಪಾಟೀಲ, ಬಾಲಕೃಷ್ಣ ದೊಡ್ಡಲಚ್ಚಪ್ಪಗೋಳ ಸೇರಿದಂತೆ ಮುಂತಾದವರು ಇದ್ದರು.