ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಶಾಸಕ ಡಿ.ಎಮ್.ಐಹೊಳೆ
MLA D.M. Aihole distributed books to children
ರಾಯಬಾಗ 23: ಮಕ್ಕಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ, ಮಕ್ಕಳನ್ನು ಸರ್ವತೋಮುಖ ಆರೋಗ್ಯವಂತರನ್ನಾಗಿ ಬೆಳೆಸುವ ಅಂಗನವಾಡಿ ಕಾರ್ಯಕರ್ತೆಯರು ಎರಡನೇ ತಾಯಂದಿರು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಗುರುವಾರ ಪಟ್ಟಣದ ಮೋಮಿನ ಗಲ್ಲಿಯ ಅಂಗನವಾಡಿ ಕೇಂದ್ರ ನಂ 4 ರಲ್ಲಿ ಹೊಸದಾಗಿ ಪ್ರಾರಂಭಿಸಲಾದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳನ್ನು ಸರಕಾರ ಉನ್ನತೀಕರಿಸುತ್ತಿದೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕಲಿಕೆಯಲ್ಲಿ ಬದಲಾವಣೆ ತಂದು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಪಾಠ ಮಾಡುವದು,
ಅಕ್ಷರ ಅಭ್ಯಾಸ ಮಾಡುವುದನ್ನು ಈ ತರಗತಿಯಲ್ಲಿ ಕಲಿಸಲಾಗುತ್ತಿದೆ. ಅಲ್ಲದೆ ಸರ್ಕಾರ ಪುಸ್ತಕ, ಬ್ಯಾಗ, ಬೂಟು, ಸಾಕ್ಸಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತದೆ ಪಾಲಕರು ಇದರ ಸದುಪಯೋಗ ಪಡೆದು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕೆಂದು ಹೇಳಿದರು. ಶಾಸಕರು ಅಂಗನವಾಡಿ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ತಹಶೀಲ್ದಾರ ಮಹಾದೇವ ಸನಮುರಿ, ಸಿಡಿಪಿಒ ಭಾರತಿ ಕಾಂಬಳೆ, ಸದಾನಂದ ಹಳಿಂಗಳಿ, ಸುರೇಶ ಮಾಳಿ, ಪ.ಪಂ. ಸದಸ್ಯ ಜಾವೇದ ಮೋಮಿನ್, ಜಿಯಾವುಲ್ಲಾ ಮುಲ್ಲಾ, ಯಾಸ್ಮೀನ ಮೋಮಿನ್, ಮಹೇಶ ಕರಮಡಿ, ಕಾಮಣ್ಣ ಹೆಳವರ, ಆಜೀಮ ಮುಲ್ಲಾ, ಪ್ರಭಾ ಯಳಕರ, ಪರವೀನ ನದಾಫ, ಚನ್ನಮ್ಮ ಗಡಕರಿ, ಅಂಗನವಾಡಿ ನೌಕರರು ಇದ್ದರು.ಫೋಟೊ: 23 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ:ಪಟ್ಟಣದ ಅಂಗನವಾಡಿ ಕೇಂದ್ರ ನಂ 4 ರಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಡಿ.ಎಮ್.ಐಹೊಳೆಯವರು ಅಂಗನವಾಡಿ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 