ವಸತಿ ನಿಲಯ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

MLA Aihole drives for dormitory room construction work

ವಸತಿ ನಿಲಯ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ  

ರಾಯಬಾಗ 28: ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  

ಮಂಗಳವಾರ ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜಿ.ಪಂ.ಅನುದಾನದಡಿ ಮಂಜೂರಾದ ರೂ.15 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ರೂ.5 ಲಕ್ಷ ವೆಚ್ಚದಲ್ಲಿ ಹಳೆ ಕಟ್ಟಡ ರಿಪೇರಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಸತಿ ನಿಲಯಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.  

ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಎಇ ಎಸ್‌.ಎಸ್‌.ಹೊಸಮನಿ, ಬಿಸಿಎಮ್ ತಾಲೂಕು ಕಲ್ಯಾಣಧಿಕಾರಿ ಕಲ್ಪನಾ ಕಾಂಬಳೆ, ವಿಸ್ತಿರಣಾಧಿಕಾರಿ ಸುರೇಶ ಮಲಾಜಿ, ಅನೀಲ ಬೊಮ್ಮನವರ, ಸದಾಶಿವ ಘೋರೆ​‍್ಡ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಚಿದಾನಂದ ಹಳಿಂಗಳಿ, ರಾಜು ಮೊಮಿನ, ಭಾರತಿ ಲೋಹಾರ, ಶಿವು ಕೋಳಿ, ರಿತೇಶ ಅವಳೆ, ಅನೀಲ ಕೊರವಿ, ಆರ್‌.ಎಸ್‌.ಪಾಟೀ ಸೇರಿ ಅನೇಕರು ಇದ್ದರು.