ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಐಹೊಳೆ ಭೂಮಿ ಪೂಜೆ
MLA Aihole Bhumi Pooja for road development work
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಐಹೊಳೆ ಭೂಮಿ ಪೂಜೆ
ಚಿಕ್ಕೋಡಿ, 04 : ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಾಗನೂರ ಗ್ರಾಮದಲ್ಲಿ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಜಾಗನೂರ ಗುರುಕುಲ ರಸ್ತೆ ಹಾಗೂ ಜಾಗನೂರಹಿಪಾಮಲದಿನ್ನಿ ರಸ್ತೆಗೆ 80 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮೀಣ ರಸ್ತೆಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿತ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು.
ಇನ್ನೂ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಸರ್ಕಾರ ಅನುದಾನ ನೀಡಿದ ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಗ್ರಾಮದ ಜನರ ಬೇಡಿಕೆಯಾದ ಜಾಗನೂರ-ಪಾಮಲದಿನ್ನಿ ರಸ್ತೆಗೆ 30 ಲಕ್ಷ ರೂ ಮತ್ತು ಜಾಗನೂರ-ಗುರುಕುಲ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಮಂಗಿ, ಗ್ರಾ.ಪಂ ಉಪಾಧ್ಯಕ್ಷ ಮಲ್ಲೇಶ ಹನಮಂತಗೋಳ,ಮಹೇಂದ್ರ ಖೇಮಲಾಪುರೆ, ಮಾರುತಿ ಹಮ್ಮಾರ, ಮುತ್ತೇಪ್ಪ ಮರಾಠೆ, ಲಕ್ಷ್ಮಣ ಹನಮನ್ನವರ, ಮಾಳಪ್ಪ ಗೋರಗುದ್ದಿ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ಕರಿಕಟ್ಟಿ, ಉಪಾಧ್ಯಕ್ಷ ಮುತ್ತೇಪ್ಪ ಹನಮನ್ನವರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಕೋಶಾಧ್ಯಕ್ಷ ಸಿದ್ದು ಖಿಂಡಿ, ಪರಸಪ್ಪ ಹನಮನವರ, ಪಾಂಡುರಂಗ ಹಂಜಾನಟ್ಟಿ, ಹನುಮಂತ ರಬಕವಿ, ಮುತ್ಯಪ್ಪ ಕೇಸ್ತಿ, ಗೋಪಾಲ ನಾವಿ, ರಾಮಪ್ಪ ಗಿಡ್ಡಪಗೋಳ, ಶಿವಾನಂದ ಪಾಟೀಲ್, ನಾರಾಯಣ ನರಗುಂದ, ಸಂಜು ಮಾದರ, ಮಾಂತೇಶ್ ಶಿರೂಗೊರ್, ಶಿವರಾಜ ಗುಡಸ, ಲಕ್ಷ್ಮಣ ಆದರಗಿ, ಭೀಮರಾವ ಪೇಡರೆ, ಸುರೇಶ್ ಕೇಸ್ತಿ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 