ಕಲಾವಿದರ ಬದುಕಿಗೆ ಭದ್ರತೆ ಗೌರವಯುತ ಜೀವನ ಅಗತ್ಯಹಿ ಎಂ. ಬಿ.ಗಣಿ
M. B. Gani: Artists need security and a dignified life
ರಬಕವಿ-ಬನಹಟ್ಟಿ 14 : ಕಲಾವಿದರ ಬದುಕಿಗೆ ಭದ್ರತೆಅಗತ್ಯಆದ್ದರಿಂದ ಕಲಾವಿದರ ಆರ್ಥಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯ ಕುರಿತು ಸರ್ಕಾರ ಮತ್ತು ಸಮಾಜಗಂಭೀರವಾಗಿಚಿಂತಿಸಬೇಕೆಂದು ಸಮ್ಮೇಳನದ ಸರ್ವಾಧ್ಯಕ್ಷ ಮಲ್ಲಪ್ಪಗಣಿ ಹೇಳಿದರು.
ಅವರುತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿಜರುಗಿದಜಿಲ್ಲಾಮಟ್ಟದಕಲಾವಿದರ ಪ್ರಥಮ ಸಮ್ಮೇಳನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಲೆ ಕೇವಲ ಮನರಂಜನೆಯ ಸಾಧನವಲ್ಲ,ಅದು ಸಮಾಜದ ಸಂಸ್ಕೃತಿ,ಪರಂಪರೆ ಮತ್ತುಗುರುತಿನ ಜೀವಾಳವಾಗಿದ್ದು,ಕಲೆ ಉಳಿಯಬೇಕಾದರೆ ಕಲಾವಿದರ ಬದುಕು ಭದ್ರವಾಗಿರಬೇಕು, ಪ್ರಸ್ತುತಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ ಮೊತ್ತಅತ್ಯಂತಅಲ್ಪವಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸಲೂ ಸಾಲದಾಗಿದೆ.
ಆದ್ದರಿಂದಕಲಾವಿದರಿಗೆ ನೀಡುವ ಮಾಶಾಸನವನ್ನು ಕನಿಷ್ಠ 2500 ರಿಂದ 5000 ಕ್ಕೆ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಜೀವನ ಪೂರ್ತಿ ಕಲೆಗಾಗಿ ಶ್ರಮಿಸಿದ ಹಿರಿಯಕಲಾವಿದರು ವೃದ್ಯಾಪ್ಯದಲ್ಲಿಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದಈಗಿರುವ ಮಾಶಾಸನ ವಯೋಮಿತಿ ಸಡಿಲಿಕೆ ಮಾಡುವ ಮೂಲಕ ಕಲಾವಿದರಿಗೆ ನೆರವಾಗಬೇಕು. ಬಡ ಹಾಗೂ ನಿರ್ಗತಿಕಕಲಾವಿದರಿಗೆ ವಸತಿಯೋಜನೆ ಜಾರಿಗೊಳಿಸಬೇಕು.
ಮತ್ತುಕಲಾವಿದರ ಮಕ್ಕಳಿಗೆ ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿ ನೀಡಬೇಕು. ಇದರಿಂದಕಲಾವಿದರ ಕುಟುಂಬಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ. ಕಲೆಯ ಉಳಿವಿಗಾಗಿ ಕಲಾವಿದರೆಲ್ಲರೂಒಂದಾಗಿ ಸಂಘಟಿತರಾಗಿ ಶ್ರಮಿಸಬೇಕು. ಕಲೆ ಹಾಗೂ ಕಲಾವಿದರು ನಮ್ಮ ಸಂಸ್ಕೃತಿಯ ಉಸಿರಾಗಿದ್ದು. ಜಾನಪದಕಲೆಯ ವಿವಿಧ ರೂಪಗಳು ಗ್ರಾಮೀಣ ಬದುಕಿನ ಭಾಗವಾಗಿದೆ. ಇಂತಹ ಕಲಾ ರೂಪಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕಲಾವಿದರದಷ್ಟೆಅಲ್ಲ ಸಮಾಜದ ಪ್ರತಿಯೊಬ್ಬರ ಮೇಲಿದೆ. ಕಲೆ ಹಾಗೂ ಕಲಾವಿದರು ಬೆಳೆದರೆ ಮಾತ್ರ ಸಮಾಜ ಸಂತಸ ಸಂಭ್ರಮದಿಂದಇರಲು ಸಾಧ್ಯವೆಂದರು.
ಈ ಸಂದರ್ಭದಲ್ಲಿಜಿಲ್ಲೆಯ ಸಾಧನೆಗೈದ ಸ್ಮರಣೀಯ ಕಲಾಧಾರೆಗಳಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಇಬ್ರಾಹಿಂ ಸುತಾರ,ತಾಳ ಗಾರುಡಿಗ ಸದಪ್ಪ ಕಂಪು ಸೇರಿದಂತೆ ಅನೇಕ ಕಲಾ ಸಾಧಕರನ್ನು ಸ್ಮರಿಸಲಾಯಿತು. ಸುಮಾರು 30 ಕ್ಕೂ ಅಧಿಕ ಕಲಾ ತಂಡಗಳು 500 ಕ್ಕೂ ಅಧಿಕಕಲಾವಿದರುಒಂದೇ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಜಿಲ್ಲೆಯ ವಿವಿಧ ಕ್ಷೇತ್ರಗಳ 50 ಕ್ಕೂ ಅಧಿಕ ಸಾಧಕರಿಗೆ ಕಲಾಶ್ರೀ ಪ್ರಶಸ್ತಿ ನೀಡಿಗೌರವಿಸಲಾಯಿತು. ಕಾರ್ಯಕ್ರಮದಲ್ಲಿಚಿಮ್ಮಡದ ಶ್ರೀ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಜಮಖಂಡಿ ಶಾಸಕ ಜಗದೀಶಗುಡಗುಂಟಿ,ಕವಿತಾಕೊಣ್ಣೂರ, ವಿದ್ಯಾ ವಿದ್ಯಾಧರ ಸವದಿ,ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕಾಧ್ಯಕ್ಷ ಮ ಕೃ ಮೇಗಾಡಿ, ಗಂಗಾಧರ ಮೋಪಗಾರ,ಸಿದ್ದು ದಿವಾಣ,ಗ್ರಾಪಂಅಧ್ಯಕ್ಷೆರೇಖಾಕಾಂತಿ, ಉಪಾಧ್ಯಕ್ಷ ಮುತ್ತವ್ವ ಭಜಂತ್ರಿ,ಗುರುಮರಡಿಮಠ,ಆನಂದ ಕಂಪು,ಹಣಮಂತ ಸವದಿ, ದಾನಪ್ಪ ಆಸಂಗಿ, ಎಂ. ಆರ್. ವಾಲಿ, ದಾಕ್ಷಾಯಿಣಿ ಮಂಡಿ, ಕಲಾವಿದರಾದ ಮಲ್ಲಪ್ಪ ಹೂಗಾರ,ಜೀವಪ್ಪ ಬಡಿಗೇರ,ಸಿದ್ದಪ್ಪ ಕಂಚು,ಮಾರುತಿ ಭಜಂತ್ರಿ,ಶ್ರೀಶೈಲ ಪಟ್ಟಣಶೆಟ್ಟಿ ಶೋಭಾ ವಾರದ,ಎಂ.ಎಸ್.ತುಪ್ಪದ,ಶಿಲ್ಪಾ ಕುಲಹಳ್ಳಿ ಸೇರಿದಂತೆಅನೇಕರು ಹಾಜರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 