ಹುಟ್ಟೂರಿನ ಪ್ರೀತಿ, ಎಲ್ಲಾ ಪುರಸ್ಕಾರಗಿಂತಲೂ ದೊಡ್ಡದು: ನಾರಾಯಣ ಬರಮನಿ
Love for hometown is greater than all awards: Narayana Baramani
ಹುಟ್ಟೂರಿನ ಪ್ರೀತಿ, ಎಲ್ಲಾ ಪುರಸ್ಕಾರಗಿಂತಲೂ ದೊಡ್ಡದು: ನಾರಾಯಣ ಬರಮನಿ
ರನ್ನ ಬೆಳಗಲಿ 08: ಪಟ್ಟಣದ ಬಂದ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಇತ್ತೀಚಿಗೆ ನೂತನವಾಗಿ ಬೆಳಗಾವಿ ನಗರದ ಡಿಸಿಪಿ ( ಕಾನೂನು ಮತ್ತು ಸುವ್ಯವಸ್ಥೆ ) ಅಧಿಕಾರಿಯಾಗಿ ಪದೋನ್ನತಿ ಹೊಂದಿದ ರನ್ನ ಬೆಳಗಲಿ ಸುಪುತ್ರ ನಾರಾಯಣ ವೆಂಕಪ್ಪ ಬರಮನಿ ಅವರಿಗೆ ಪಟ್ಟಣದ ಸಮಸ್ತ ಬಂಧುಬಾಂಧವರಿಂದ ಅಭಿನಂದನಾ ಸಮಾರಂಭ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ, ಊರಿನ ಹಿರಿಯರಿಂದ ಸತ್ಕಾರ ಸ್ವೀಕರಿಸಿದ ಡಿಸಿಪಿ ನಾರಾಯಣ ಬರಮನಿ ಅವರು ಹುಟ್ಟೂರಿನ ಪ್ರೀತಿ, ಎಲ್ಲಾ ಪುರಸ್ಕಾರಕಿಂತಲೂ ದೊಡ್ಡದು. ತಂದೆ-ತಾಯಿ ಗುರುಗಳ ಆಶೀರ್ವಾದದಿಂದ ಯಾವುದೇ ಕಳಂಕ ಇಲ್ಲದೆ ನಿಸ್ವಾರ್ಥ ಸೇವೆಯಿಂದ 21 ವರ್ಷಗಳ ಸುದೀರ್ಘವಾದ ಸೇವೆಯನ್ನು ಸಲ್ಲಿಸುವುದರೊಂದಿಗೆ. ಸರ್ಕಾರ ನೀಡಿದ ಬೆಳಗಾವಿ ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಧಿಕಾರಿಯಾಗಿ ಪದೋನ್ನತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.ನನ್ನೂರಿನ ಯುವಜನತೆಗೆ ನನ್ನ ವಿನಂತಿ ಏನೆಂದರೆ ತಂದೆ ತಾಯಿ ಗುರುವನ್ನು ಗೌರವಿಸಿ, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಆರೋಗ್ಯ ಪಡೆದು, ಶೈಕ್ಷಣಿಕ ಸಾಧನೆಯಿಂದ ಉನ್ನತ ಅಧಿಕಾರಿಯಾಗಿ ಊರಿನ ಕೀರ್ತಿಯನ್ನು ಬೆಳಗಬೇಕು. ಎಲ್ಲಾ ತಪ್ಪುಗಳಿಗೆ ಶಿಕ್ಷೆ ಮಾನದಂಡವಲ್ಲ, ತಪ್ಪುಗಳ ಹಿಂದಿರುವ ಉದ್ದೇಶಗಳು ಹುಡುಕಿದಾಗ ಅದೆಷ್ಟೋ ಬಾರಿ ಮನಸ್ಸು ಕಲ್ಲಾಗಿದೆ. ಮನಸ್ಸು ಕರಗಿ ನೀರಾಗಿದೆ. ನಮ್ಮೂರಿನಲ್ಲಿ ಪ್ರತಿಭೆಗಳು ಅರಳಲಿ, ಅರಳಿದ ಹೂಗಳ ಸುಗಂಧ ಊರಲ್ಲಿ ಬೀರುವಂತೆ ಆಗಲಿ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ ಸಿದ್ಧರಾಮ ಶಿವಯೋಗಿಗಳು ಸಿದ್ದಾರೂಢ ಆಶ್ರಮ ಮುಧೋಳ ಬರಮಣಿ ಕುಟುಂಬವು ರೈತಾಪಿ ಕುಟುಂಬವಾಗಿ, ಅತ್ಯಂತ ಸರಳ ಸಜ್ಜನಿಕೆಯಿಂದ ಎಲ್ಲರ ಜೊತೆಗೆ ಬೆರೆತು ಉತ್ತಮ ಬಾಂಧವ್ಯ ಹೊಂದಿದ ಹಿರಿಯ ಮನೆತನವಾಗಿದೆ. ಕಷ್ಟಗಳ ದಿನದಲ್ಲಿ ಕುಗ್ಗದೆ, ಸಂತಸ ದಿನದಲ್ಲಿ ಹಿಗ್ಗದೆ ಸದಾವಂದೆ ಮನೋಭಾವದಿಂದ ಜನರ ಪ್ರೀತಿಯ ಗಳಿಸಿದ ಬರಮಣಿ ಸಾಹೇಬರು,ಅವರ ಕೀರ್ತಿಯಿಂದ ಬೆಳಗಲಿಯ ಗೌರವ ಹೆಚ್ಚಾಗಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ ಯೋಗಿರಾಜೇಂದ್ರ ಸದಾಶಿವ ಗುರೂಜಿ, ಜ್ಯೋತಿಷ್ಯ ರತ್ನ ರಮೇಶ ಕುಮಾರ ಶಾಸ್ತ್ರಿ ಶುಭ ಹಾರೈಸಿ ಆಶೀರ್ವಚನ ನೀಡಿದರು. ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಪೊಲೀಸ್ ಇಲಾಖೆಯು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪ್ರಮುಖ ಅಂಗವಾಗಿದೆ. ಮೊದಲ ನ್ಯಾಯ ತೀರ್ಮಾನ ಮಾಡುವವನೇ ಊರಿನ ಜವಾಬ್ದಾರಿ ವ್ಯವಸ್ಥೆ ಹೊತ್ತ ಪೊಲೀಸ್ ಕಾನ್ಸ್ಟೇಬಲ್ ಅವರಿಂದ ಹಂತ ಹಂತವಾಗಿ ಕಾನೂನು ಮೇಲೆ ಮಟ್ಟವನ್ನು ತಲುಪುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಬಗೆಯ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಗಟ್ಟಿಯಾಗಿ ನಿಂತ ನಮ್ಮ ಬರಮನಿಯವರು ಉನ್ನತ ಹುದ್ದೆಯನ್ನು ಪಡೆದು ಊರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಲಕ್ಕಪ್ಪ ಹಾರೂಗೇರಿ, ಚಿಕ್ಕಪ್ಪ ನಾಯಕ, ಪರ್ಪ ದೊಡಹಟ್ಟಿ, ಹರೀಶಗೌಡ ಪಾಟೀಲ, ಈಶ್ವರ ಅಮಾತಿ, ಅಶೋಕ ಸಿದ್ದಾಪುರ, ಪಂಡಿತ ಪೂಜಾರಿ, ಪ್ರವೀಣ ಬರಮನಿ, ರಾಘವೇಂದ್ರ ನೀಲಣ್ಣವರ ಮತ್ತು ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 