ತೊರವೆ ರಾಮಾಯಣಕ್ಕೆ ನರಸಿಂಹ ದೇವರೇ ಪ್ರೇರಣೆ ಹಿ ನಾರಾಯಣ ಬಾಬಾನಗರ
Lord Narasimha is the inspiration for the Torave Ramayana, Narayana Babanagar
ವಿಜಯಪುರ 20: ತೊರವೆ ನರಸಿಂಹ ದೇವರೇ ಕುಮಾರ ವಾಲ್ಮೀಕಿ ಅರ್ಥಾತ್ ನರಹರಿ ಕವಿಗೆ ತೊರವೆ ರಾಮಾಯಣ ಬರೆಯಲು ಪ್ರೇರಣೆ ಮಾಡಿದ್ದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಹೇಳಿದರು. ಸೋಮವಾರ ಸಂಜೆ ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ನಡೆದ 'ತೊರವೆ ರಾಮಾಯಣದ ಗಮಕ' ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಹಿರಿಯ ಗಮಕಿಗಳಾದ ಶ್ರೀಮತಿ ಶಾಂತಾಬಾಯಿ ಕೌತಾಳ ತೊರವೆ ರಾಮಾಯಣದ ಸೀತಾರಾಮ ಕಲ್ಯಾಣ ಪ್ರಸಂಗವನ್ನು ವಾಚನ ಮಾಡಿದರು. ಕಲ್ಯಾಣರಾವ ದೇಶಪಾಂಡೆ ವ್ಯಾಖ್ಯಾನಿಸಿದರು. ನಿರ್ವಹಣೆ - ಡಾ.ಚಿದಂಬರ ಪಾಟೀಲ , ಸ್ವಾಗತ-ಪರಿಚಯ - ವಿದ್ಯಾವತಿ ಬೆಣ್ಣೂರು , ಪ್ರಾಸ್ತಾವಿಕ - ಆನಂದ ಗೋಡಸೆ , ವಂದನಾರೆ್ಣ - ವಿಠ್ಠಲ ಜಾಧವ , ಶಾಂತಿ ಮಂತ್ರ ಅನಿಲ ಬಳ್ಳುಂಡಗಿ ನಿರ್ವಹಿಸಿದರು. ಕಾರ್ಯಕ್ರಮಲ್ಲಿ ಸುಧೀರ ಟಂಕಸಾಲಿ , ಹರ್ಷವರ್ಧನ ಸರಾಫ್, ವಿವೇಕ ಕುಲಕರ್ಣಿ , ಬಾಬುರಾವ ಕುಲಕರ್ಣಿ , ಶ್ರೀರಂಗ ಪುರಾಣಿಕ , ಸುಕಾಂತ ಕುಲಕರ್ಣಿ ,ಮಯೂರ ತಿಳಗೂಳಕರ , ಸುಭಾಷ್ ಕನ್ನೂರ ಮುಂತಾದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 