ಭಗವಾನ್ ಮಹಾವೀರರ ಪಂಚಶೀಲ ತತ್ವಗಳು ಪ್ರತಿಯೊಬ್ಬರ ಬದುಕಿಗೆ ದಾರೀದೀಪ : ಜೂಗಲ್ ಮಂಜುನಾಯಕ
Lord Mahavir's Panchasheel principles are a beacon of light for everyone's life: Jugal Manjunayak
ಲೋಕದರ್ಶನ ವರದಿ
ಕಂಪ್ಲಿ 31: ಸಮಸ್ತ ಜೈನ ಸಮುದಾಯದ 24ನೇ ತೀಥಂರ್ಕರರು ಹಾಗೂ ಕೊನೆಯ ತೀಥಂರ್ಕರರಾದ ಭಗವಾನ್ ಮಹಾವೀರರ ಪಂಚಶೀಲ ತತ್ವಗಳು ಪ್ರತಿಯೊಬ್ಬರ ಬದುಕಿಗೆ ದಾರಿ ದೀಪವಾಗಿವೆ ಎಂದು ತಹಸಿಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ಸೋಮವಾರ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಏರಿ್ಡಸಿದ್ದ ಭಗವಾನ್ ಮಹಾವೀರರ ಜಯಂತಿಗೆ ಚಾಲನೆ ನೀಡಿ ಮಾತನಾಡಿ ಭಗವಾನ್ ಮಹಾವೀರರು ಅಹಿಂಸೆ, ಸತ್ಯ,ಆಚಾರ್ಯ,ಬ್ರಹ್ಮಚರ್ಯ ಮತ್ತು ಅಪರಿಗ್ರಹವೆಂಬ ಪಂಚಶೀಲ ತತ್ವಗಳನ್ನು ಬೋದಿಸಿದ ಮಹಾವೀರರ ತತ್ವ ಚಿಂತನೆಗಳು, ಶಾಂತಿ ಮತ್ತು ಅಹಿಂಸಾ ಪ್ರತಿಪಾದಕರಾದ ಭಗವಾನ್ ಮಹಾವೀರರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸತ್ಯ,ಅಹಿಂಸೆ, ತ್ಯಾಗ, ತಪಸ್ಸು ಮತ್ತು ದಾನಕ್ಕೆ ದಾರಿ ಮಾಡಿಕೊಟ್ಟ ಮಹಾವೀರರು ಸರ್ವಕಾಲಕ್ಕೂ ಮಾರ್ಗದರ್ಶಕರಾಗಿದ್ದಾರೆ ಎಂದರು.ಜೈನ್ ಸಮುದಾಯ ಹಿರಿಯ ಮುಖಂಡರಾದ ಶಾಂತಿಲಾಲ್ ಬಾಲಾರ್ ಮಾತನಾಡಿ ಸಮುದಾಯದಿಂದ ರಾಜ್ಯಾದ್ಯಂತ ಮಾರ್ಚ್ 31 ರಂದು ಆಚರಿಸುತ್ತಿದ್ದೇವೆ. ಆದರೆ ಈ ವರ್ಷ್ ಸರ್ಕಾರವು ಒಂದು ದಿನ ಮುಂಚೆ ಸರ್ಕಾರದಿಂದ ಆದೇಶವಾಗಿರುವುದರಿಂದ ಇಲ್ಲಿ ಸರ್ಕಾರದೊಂದಿಗೆ ಆಚರಣೆ ಮಾಡುತ್ತಿದ್ದೇವೆ.
ಭಗವಾನ್ ಮಹಾವೀರರ ಜಯಂತಿಯನ್ನು ನಾವು ಜನ್ಮ ಕಲ್ಯಾಣೋತ್ಸವವಾಗಿ ಆಚರಿಸುತ್ತೇವೆ ಎಂದು ತಿಳಿಸಿದರು. ಮಾರ್ಚ್ 31ರಂದು ಭಗವಾನ್ ಮಹಾವೀರರ ಭವ್ಯ ಮೆರವಣಿಗೆ ಮತ್ತು ಜೈನ ಮಂದಿರದಲ್ಲಿ ವಿಶೇಷ ಪೂಜೆಯನ್ನು ಏರಿ್ಡಸಿದ್ದೇವೆಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಮಾಲತೇಶ ದೇಶಪಾಂಡೆ, ಜೈನ್ ಸಮುದಾಯದ ಮುಖಂಡರಾದ ಫತೇಕುಮಾರ್ ಭಾಫನಾ, ರಾಕೇಶ್ ಬಾಗ್ರೇಚಾ, ದಿನೇಶ್ ದಾಂತೇವಾಡಿಯಾ, ಚೇತನ್ ಹುಂಡಿಯಾ, ನವೀನ್ ವೀರಚಮದ್ ಬಾಗ್ರೇಚಾ ಹಾಗೂ ಇತರರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 