ಲೋಕದರ್ಶನ ವರದಿ ಗಾನ ಶಿಶಿರ ಕಾರ್ಯಕ್ರಮ ಆಯೋಜನೆ ಉದ್ಘಾಟನೆ: ವಿಜಯಲಕ್ಷ್ಮಿ ಮ್ಯಾಗಡೆ

ಲೋಕದರ್ಶನ ವರದಿ ಗಾನ ಶಿಶಿರ ಕಾರ್ಯಕ್ರಮ ಆಯೋಜನೆ ಉದ್ಘಾಟನೆ: ವಿಜಯಲಕ್ಷ್ಮಿ ಮ್ಯಾಗಡೆ  Lokdarshan Report Gaana Shishir program organized and inaugurated by: Vijayalakshmi Magade

ಕೊಪ್ಪಳ 23:  ಗಾನಾಮೃತ ಸಂಗೀತ ಪ್ರತಿಷ್ಠಾನ  ಭಾಗ್ಯನಗರ  ಗಾನ ಶಿಶಿರ ಕಾರ್ಯಕ್ರಮವು ನವಚೇತನ ಇಂಗ್ಲಿಷ್ ಟೆಕ್ನೋ ಪ್ರೈಮರಿ ಸ್ಕೂಲ್ ಭಾಗ್ಯನಗರ ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆಯಲ್ಲಿ ಸಂಸ್ಥೆಯ ವತಿಯಿಂದ ಗಾನ ಶಿಶಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹನುಮಂತ ಕಡದಳ್ಳಿ ಮುಖ್ಯ್ಯೊಪಾಧ್ಯಯರು  ಮಾತನಾಡಿದರು, ಅಧ್ಯಕ್ಷತೆಯನ್ನು ವಿಜಯಲಕ್ಷ್ಮಿ ಮ್ಯಾಗಡೆ ವಹಿಸಿದ್ದರು , ಮುಖ್ಯ ಅತಿಥಿಗಳು ಆನಂದ ಕಟ್ಟಿಮನಿ ದೈಹಿಕ ಶಿಕ್ಷಕರು , ಬಸವರಾಜ ಸಹಶಿಕ್ಷಕರು, ಕಾವ್ಯ ಸಹಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು, ಮಾರುತಿ ಬಿನ್ನಾಳ ಈ ಕಾರ್ಯಕ್ರದ ಪ್ರಾಸ್ಥಾವಿಕ ನುಡಿಯ ಮುಖಾಂತರ ಇಂದಿನ ದಿನಮಾನದಲ್ಲಿ ದೂರವಾಣಿ, ಮೊಬೈಲ್ ಫೋನ್ ಮಕ್ಕಳ ಮೇಲೆ ಅತಿ ದೊಡ್ಡ ಪರಿಣಾಮ ಬೀರಿದೆ ಆದ್ದರಿಂದ ಮಕ್ಕಳ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಆದ್ದರಿಂದ ಮಕ್ಕಳಲ್ಲಿ ಸಂಗೀತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿವಿಕೆ ಕುಸಿಯುತ್ತಿದೆ  ಎಂಬುವುದನ್ನು ಸಂಗೀತ ಶಿಕ್ಷಕರಾದ ಶ್ರೀಮಾರುತಿ ಬಿನ್ನಾಳ ರವರು ಅಚ್ಚುಕಟ್ಟಾಗಿ ತಿಳಿಸಿದರು, ಉದ್ಘಾಟಿಸಿ ಮಾತನಾಡಿದ ಹನುಮಂತ ಕಡದಳ್ಳಿ ಜಾನಪದ ಸಂಗೀತ ಈಗಿನ ಪೀಳಿಗೆಯಲ್ಲಿ ಅಶ್ಲೀಲತೆ, ಮತ್ತು ತಾತ್ಕಾಲಿಕ ಹಾಗೂ ಕ್ಷಣಿಕ ಸಂಗೀತವಾಗಿದೆ, ಆದರೆ ಜನಪದ ಮೂಲ ಸಂಗೀತ, ದೇಶಿಯ ಶಾಸ್ತ್ರಿಯ ಸಂಗೀತವಾಗಿದೆ, ಎಂದು ಜಾನಪದ ಸಂಗೀತ ಮತ್ತು ಜನಪದ ಸಂಗೀತಕ್ಕೆ ಇರುವ ವ್ಯತ್ಯಾಸವನ್ನು ತಿಳಿಸಿದರು