ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ

ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ  Lok Adalat: A total of 190 cases have been disposed of

ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ  

ಮುಂಡಗೋಡ, 14 ; ಮುಂಡಗೋಡ  ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರ, ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರವಾರ ರವರ ನಿರ್ದೇಶನ ಮೇರೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನ್ಯಾಯಿಕ ಸ0ದನಕಾರರಾಗಿ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಸಿ.ಆರ್‌. ಹಾಗೂ ನ್ಯಾಯ ಕೇತರ ಸಂಧಾನಕಾರರಾಗಿ ವಕೀಲರಾದ ಕೆ.ಆರ್‌.ಹಂಚಿನಮನಿ ಹಾಜರಿದ್ದರು.  

      ಶನಿವಾರ ನಡೆದ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ 172.8 ಆಕ್ಟ್‌ ಪ್ರಕರಣಗಳು, ಅಮಲ್ದಾರಿ 8 ಪ್ರಕರಣಗಳು, ಮೂಲದಾವಾ 7 ಪ್ರಕರಣಗಳು, ಜನನ-ಮರಣ 41 ಪ್ರಕರಣಗಳು, ಪಿ.ಸಿ.ಆರ್02 ಪ್ರಕರಣಗಳು, ಎಫ್‌ಡಿಪಿ ಹಾಗೂ 114 ಪೊಲೀಸ ಸಿಬಂದಿ ಪೊಲೀಸ ಸಿಬ0ದಿ ವ್ಯಾಜ್ಯ ಪೂರ್ವ 337 ಪ್ರಕರಣಗಳು ಇತ್ಯರ್ಥಗೊಂಡು ಅವುಗಳ ಪೈಕಿ 11,75, 386/-ರೂ ವಸೂಲಾಗಿಸದ್ರಿ ಹಣವನ್ನು ಸರ್ಕಾರಕ್ಕೆ ಹಾಗೂ ಬ್ಯಾಂಕುಗಳಿಗೆ ಬಣ ಮಾಡಲಾಯಿತು.  

ಈ  ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ ಪ್ರಸಾದ ಹೆಗಡೆ, ಮುಂಡಗೋಡ ವಕೀಲರ ಸಂಘದ ಅಧ್ಯಕ್ಷರಾದ ಎನ್‌.ಎ.ನಿಂಬಾಯಿ, ಉಪಾದ್ಯಕ್ಷ ರಾದ ಎಸ್‌.ಎವರ್‌.ಮಲವಳ್ಳಿ, ಕಾರ್ಯದರ್ಶಿ ಎಸ್‌.ಕೆ.ಕೊಳ್ಳಾನ ವರ, ಖಜಾಂಚಿ ಕೆ.ಎಸ್‌. ಗುಲ್ಯಾನವರ ಹಿರಿಯ ವಕೀಲರಾದ ಸಿ.ಎಸ್‌.ಗಾಣಗೇರಿ, ಕೆ.ಎನ್‌. ಹೆಗಡೆ, ಬಿ.ಎಫ್‌.ಪೂಜಾರ, ಗುಡ್ಡಪ್ಪ ಕಾತೂರ, ಮೊಹ್ಮದಸಲೀಂ ನಂದಿಗಟ್ಟಿ, ಸುಜೀತ ಎಸ್‌., ನಟರಾಜ ಕಾತೂರ, ಆರ್‌.ಎಸ್‌. ಹಂಚಿನಮನಿ, ಆರಿ​‍್ಬ. ಹುಬ್ಬಳ್ಳಿ, ಜಿ.ಆರ್‌.ಆಲದಕಟ್ಟಿ, ಗೀತಾಡಿ.ಕೆ,, ದೀಪ್ತಿ ಅಂಡಗಿ, ಭಾರತಿ, ಪ್ರಮೋದ ಸಣ್ಣಮನಿ, ನಾಗರಾಜ ಬಾರ್ಕಿ, ಹಾಗೂ ಉಪಸ್ಥಿತರಿದ್ದರು.