ಚಿಂತನೆ ಮತ್ತು ಚಿಂತಿಯ ಭೀತಿಯಲ್ಲಿ ಜೀವನ : ಸಂಗನಬಸವ ಶ್ರೀಗಳು
Living in the Fear of Thought and Worry: Sangana Basava Sri
ಶಿಗ್ಗಾವಿ 04 : ಇಂದಿನ ಜನಾಂಗ ಚಿಂತನೆಯಲ್ಲಿ ಜೀವನ ನಿರ್ವಹಣೆ ಮಾಡಬೇಕು ಹೊರತು ಚಿಂತಿಯ ಬೀತಿಯಲ್ಲಿ ಅಲ್ಲ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಸಂಗನಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಆಶ್ರಯದಲ್ಲಿ ಬೆಳದಿಂಗಳ ನೋಟ ಸತ್ಸಂಗದ ಕೂಟವು ನೇರವೇರಿಸಿ ಆರ್ಶಿವದಿಸಿದ ಅವರು ನಾಡಿನ ಅನೇಕ ಮಠದಲ್ಲಿ ಪ್ರಸಾದ ಭಾವನೆ ಮೊದಲಿನಿಂದಿದೆ ಆದರೆ ಬೆಳದಿಂಗಳ ಊಟದ ಉದ್ದೇಶ ಸಂಸ್ಕಾರ, ಸಂಸ್ಕೃತಿ, ಕಲೆಯ ಚಿಂತನೆ ಮತ್ತು ಚಿಂತಿಯ ಬಾಂಧವ್ಯ ಬೆಸೆಯುವದರೊಂದಿಗೆ ಸರ್ವ ಜನಾಂಗದೊಂದಿಗೆ ಒಗ್ಗಟ್ಟಾಗಿ ಸತ್ಸಂಗ ಮಾಡುವುದು ಎಂದರು.ಶಿಗ್ಗಾವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ ಬೆಳದಿಂಗಳ ಊಟದ ಆಯೋಜನೆ ಮಾಡಿದ್ದರು.
ಸಾಹಿತಿ ಶಿವಾನಂದ ಮ್ಯಾಗೇರಿ, ವರದಿಗಾರರಾದ ದೇವರಾಜ ಸುಣಗಾರ, ವಿಶ್ವನಾಥ ಬಂಡಿವಡ್ಡರ ಕವಿತೆ ವಾಚನ ಮಾಡಿದರು.ಶಿಕ್ಷಕಿ ಪ್ರತಿಭಾ ಗಾಂಜಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೇ ಅವರ ಜನ್ಮ ದಿನಾಚರಣೆ ಕುರಿತು, ಕದಳಿ ವೇದಿಕೆ ಅಧ್ಯಕ್ಷೆ ಡಾ.ಲತಾ ನಿಡಗುಂದಿ ಬೆಳದಿಂಗಳ ಊಟದ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನಾಗಪ್ಪ ಬೆಂತೂರ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸಿ.ಡಿ.ಯತ್ನಳ್ಳಿ, ಬಂಕಾಪೂರ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ಪಕ್ಕಿರೇಶ ಕೊಂಡಾಯಿ, ಪ್ರೋ ಶಶಿಕಾಂತ ರಾಠೋಡ, ಬಸವರಾಜ ಶಿಗ್ಗಾವಿ, ರಮೇಶ ಹರಿಜನ, ಅಶೋಕ ಕಾಳೆ, ಸಂಜನಾ ರಾಯ್ಕರ್, ಶಂಭು ಕೇರಿ, ರವಿ ಕಡಕೋಳ, ಕಲಕೋಟಿ, ಹೊಸಮನಿ, ಹನುಮಂತಪ್ಪ ಬಂಡಿವಡ್ಡರ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಾಂತೇಶ ನಾಯ್ಕೋಡಿ ಕಾರ್ಯಕ್ರಮ ನಿರ್ವಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 