ಕಾನೂನು ಸೇವೆಗಳ ಬಗ್ಗೆ ಜನಜಾಗೃತಿ ನಮ್ಮೂರ ಬಾನುಲಿ ರೇಡಿಯೋದಲ್ಲಿ ನೇರ ಪೋನ್-ಇನ್ ಕಾರ್ಯಕ್ರಮ
Live phone-in program on Nammura Banuli Radio to raise awareness about legal services
ಯಮಕನಮರಡಿ 10: ರಿಬಿಲ್ಡ್ ಇಂಡಿಯಾ ಫಂಡ್ನ ಆವಾಜ್ ಯೋಜನೆಯ ಅಡಿಯಲ್ಲಿ, ತಾಲೂಕಿನ ಕರಗುಪ್ಪಿ- ಯೆಲ್ಲಾಪುರ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ 90.8 ಎಫ್.ಎಂ ನಲ್ಲಿ ಇತ್ತೀಚೆಗೆ ಕಾನೂನು ಜಾಗೃತಿ ಉದ್ದೇಶಿತ ನೇರ ್ಯೆ್ಲೂಹಿಪಿ್ಲೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಸಂದೀಪ ಪಾಟೀಲ ಅವರು ಭಾಗವಹಿಸಿ, ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯವ್ಯಾಪ್ತಿ, ಉದ್ದೇಶ ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ವಿವರಿಸಿದರು. ಜೊತೆಗೆ ಮಧ್ಯಸ್ಥಿಕೆ ವ್ಯವಸ್ಥೆ ಹಾಗೂ ಲೋಕ್ ಅದಾಲತ್ ಕುರಿತು ಶ್ರೋತೃಗಳಿಗೆ ಸ್ಪಷ್ಟ ಮಾಹಿತಿ ನೀಡಿದರು.
ನಮ್ಮೂರ ಬಾನುಲಿ ಸಮುದಾಯ ರೇಡಿಯೋದ ನಿರೂಪಕರಾದ ಆರ್.ಜೆ. ಚೇತನ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಂದೀಪ ಪಾಟೀಲ ಅವರು, ಸಾಮಾನ್ಯ ಜನರು ಕಾನೂನು ಸೇವೆಗಳ ಪ್ರಾಧಿಕಾರವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದರು. ಉಚಿತ ಕಾನೂನು ನೆರವು ಯಾರಿಗೆ ಲಭ್ಯ, ಬಡವರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದೊರೆಯುವ ಸಹಾಯ, ಉಚಿತ ವಕೀಲರ ಸೌಲಭ್ಯ ಮತ್ತು ಅದರ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳ ಮಹತ್ವ, ಪ್ಯಾರಾಲೀಗಲ್ ವಾಲಂಟಿಯರ್ಗಳ ಪಾತ್ರ, ದೂರವಾಣಿ ಮೂಲಕ ಸಹಾಯ ಪಡೆಯುವ ವ್ಯವಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಇರುವ ಸ್ಥಳದ ಕುರಿತು ಶ್ರೋತೃಗಳ ಪ್ರಶ್ನೆಗಳಿಗೆ ಸ್ಪಂದಿಸಲಾಯಿತು.
ವಿಶೇಷವಾಗಿ ಲೋಕ್ ಅದಾಲತ್ ಕುರಿತು ಮಾತನಾಡಿದ ಅವರು, ಲೋಕ್ ಅದಾಲತ್ ಎಂದರೇನು?, ಯಾವ ಪ್ರಕರಣಗಳು ಲೋಕ್ ಅದಾಲತ್‌ನಲ್ಲಿ ಪರಿಹಾರವಾಗುತ್ತವೆ, ಬ್ಯಾಂಕ್ ಸಾಲ, ಚೆಕ್ ಬೌನ್ಸ್, ಕುಟುಂಬ ಕಲಹ, ಅಪಘಾತ ಪ್ರಕರಣಗಳು ಲೋಕ್ ಅದಾಲತ್‌ನಲ್ಲಿ ಹೇಗೆ ಶೀಘ್ರ ಹಾಗೂ ಕಡಿಮೆ ವೆಚ್ಚದಲ್ಲಿ ಇತ್ಯರ್ಥಗೊಳ್ಳುತ್ತವೆ ಎಂಬುದನ್ನು ವಿವರಿಸಿದರು. ಲೋಕ್ ಅದಾಲತ್‌ಗೆ ಅರ್ಜಿ ಸಲ್ಲಿಸುವ ವಿಧಾನ, ವಕೀಲರ ಅವಶ್ಯಕತೆ ಮತ್ತು ಸಮಯದ ಉಳಿತಾಯದ ಕುರಿತು ಸಹ ಮಾಹಿತಿ ನೀಡಿದರು.
ಶ್ರೋತೃಗಳಿಂದ ಬಂದ ನೇರ ದೂರವಾಣಿ ಕರೆಗಳಿಗೆ ಉತ್ತರಿಸಿದ ಸಂದೀಪ ಪಾಟೀಲ ಅವರು, ಈ ರೀತಿಯ ರೇಡಿಯೋ ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ಕಾನೂನು ಅರಿವು ಮೂಡಿಸಲು ಬಹಳ ಸಹಕಾರಿಯಾಗಿವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೂಲಕ “ಕಾನೂನು ಸಮಸ್ಯೆ ಎದುರಿಸುವವರು ಹೆದರದೆ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ, ತಮ್ಮ ಹಕ್ಕುಗಳನ್ನು ತಿಳಿದುಕೊಂಡು ನ್ಯಾಯ ಪಡೆಯಬೇಕು” ಎಂಬ ಸಂದೇಶವನ್ನು ಜನರಿಗೆ ನೀಡಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 