ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ನೆಮ್ಮದಿಯ ಬದುಕು ಸಾಗಿಸಿ

ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ನೆಮ್ಮದಿಯ ಬದುಕು ಸಾಗಿಸಿ Live a peaceful life through education, organization, and struggle.

ಕಂಪ್ಲಿ  22 : ಬಡ ಹಾಗೂ ಮಧ್ಯಮ ವರ್ಗದ ಜನರ ಧ್ವನಿಯಾಗಿ ನಿಲ್ಲಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ನೀಡುವೆ ಜನರ ಸಂಕಷ್ಟವನ್ನು ಆಲಿಸಿ, ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರೋ.ಬಿ.ಕೃಷ್ಣಪ್ಪ ಇವರು ಸಂಘಟನೆ ಹುಟ್ಟು ಹಾಕಿದ್ದಾರೆ ಎಂದು ರಾಜ್ಯ ಸಂಘಟನಾ ಸಂಚಾಲಕ ಕೆ.ಮಲ್ಲಿಕಾರ್ಜುನ ಹೇಳಿದರು.    ಪಟ್ಟಣದ ಸಣಾಪುರ ರಸ್ತೆಯ ಶಾರದಾ ಶಾಲೆ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ನಗರ ಘಟಕ ಸಂಚಾಲಕ ಹೆಚ್‌.ಶ್ರೀನಿವಾಸ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ನೆಮ್ಮದಿಯ ಬದುಕು ಸಾಗಿಸಬೇಕು ಎಂದರು.

ಕಂಪ್ಲಿ ತಾಲೂಕು ಸಂಚಾಲಕ ಹೆಚ್‌.ಗುಂಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 72ನೇ ದಶಕದಲ್ಲಿ ಸಂಘಟನೆ ಹುಟ್ಟು ಹಾಕಿದರು. ದಲಿತ ಮೇಲಿನ ದೌರ್ಬಲ್ಯ ಸೇರಿದಂತೆ ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಧ್ವನಿ ಎತ್ತುವ ದೃಷ್ಠಿಕೋನದಿಂದ ಸಂಘಟನೆ ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದೊಂದಿಗೆ ತಡೆಗಟ್ಟಬೇಕಾಗಿದೆ ಎಂದರು.ನಗರ ಘಟಕ ಸಂಚಾಲಕ ಹೆಚ್‌.ಶ್ರೀನಿವಾಸ ಮಾತನಾಡಿ, ಸಂಘಟನೆಯ ಧ್ಯೇಯ ಉದ್ದೇಶದೊಂದಿಗೆ ದಲಿತ ಹಾಗೂ ಹಿಂದುಳಿತ ಜನತೆಗೆ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಹಂಪಿ ಮಾತಂಗ ಪರ್ವತದ ಪೂರ್ಣನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಉಪನ್ಯಾಸಕ ಜಡೆಪ್ಪ ಸಂವಿಧಾನದ ಪೀಠಿಕೆ ಪಠಿಸುವ ಜೊತೆಗೆ ಉಪನ್ಯಾಸ ನೀಡಿದರು.

ನಗರ ಘಟಕ ಸಂಚಾಲಕ ಹೆಚ್‌.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಎ.ದುರುಗೇಶ, ಉಪಾಧ್ಯಕ್ಷರಾದ ಶಂಭುಲಿಂಗ, ಹನುಮಂತ, ಬಾಬು ನೇತೃತ್ವದಲ್ಲಿ ಮಾರೇಶ, ಶರಣ, ಶೇಖರ್, ಮಂಜುನಾಥ, ಮಾರುತಿ, ರಾಘು, ಹುಲುಗಪ್ಪ, ಮೌಲಾಹುಸೇನ್, ರಾಜಶೇಖರ, ಸಾಬಣ್ಣ, ಹನುಮಂತ, ಹೊನ್ನೂರ​‍್ಪ, ಸುಧಾಕರ ಸೇರಿದಂತೆ ಪದಾದಿಕಾರಿಗಳನ್ನು ನೇಮಕ ಮಾಡಿದರು ಈ ಸಂದರ್ಭದಲ್ಲಿ ಮುಖಂಡರಾದ ಎ.ಲಕ್ಣ್ಮೀಪತಿ, ಪಕ್ಕೀರ​‍್ಪ, ಮರಿಸ್ವಾಮಿ, ಹುಲುಗಪ್ಪ, ವಸಂತರಾಜ ಕಹಳೆ, ವಿಬಿ ನಾಗರಾಜ, ಸಣ್ಣ ಹುಲುಗಪ್ಪ, ತಾಯಪ್ಪ, ಜಂಬಣ್ಣ, ಪಂಪಾಪತಿ, ವಿಘ್ನೇಶ್ವರ, ಹುಸೇನಪ್ಪ, ಆರ್‌.ಪಿ.ಶಶಿಕುಮಾರ, ರಾಜಪ್ಪ, ಪರಶುರಾಮ, ಹೊನ್ನೂರ​‍್ಪ, ಉಮೇಶ, ಬುಜ್ಜಿಕುಮಾರ, ಲಕ್ಷ್ಮಣ ಬಂಡಾರಿ ಸೇರಿದಂತೆ ಮಹಿಳೆಯರು, ಪದಾಧಿಕಾರಿಗಳು ಇದ್ದರು.