ದೇವಿ ಪುರಾಣ ಆಲಿಸುವುದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ : ಒಪ್ಪತ್ತೇಶ್ಬರ ಸ್ವಾಮೀಜಿ

ದೇವಿ ಪುರಾಣ ಆಲಿಸುವುದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ : ಒಪ್ಪತ್ತೇಶ್ಬರ ಸ್ವಾಮೀಜಿ  Listening to Devi Purana helps one lead a peaceful life: Oppatteshbara Swamiji

ದೇವಿ ಪುರಾಣ ಆಲಿಸುವುದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ : ಒಪ್ಪತ್ತೇಶ್ಬರ ಸ್ವಾಮೀಜಿ  

ಯಲಬುರ್ಗಾ 05: ದೇವಿ ಪುರಾಣ ಆಲಿಸುವುದರಿಂದ ನಮ್ಮ ಜೀವನದ ಚಿಂತೆ ದೂರವಾಗಿ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಲಹೆ ನೀಡಿದರು. ತಾಲೂಕಿನ ಜಿ.ವೀರಾಪೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದ 32ನೇ ವರ್ಷದ ದುರ್ಗಾದೇವಿ ಪುರಾಣ ಮಂಗಳ ಹಾಗೂ ಮಹಾರಥೋತ್ಸವ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಭಗವಂತನ ನಾಮ ಸ್ಮರಣೆಯಿಂದ ಮನಸ್ಸು ಶುಚಿಯಾಗಿಟ್ಟುಕೊಳ್ಳಬಹುದು. ಹೀಗಾಗಿಯೇ ಹಿರಿಯರು ಹಬ್ಬ ಹರಿದಿನಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ ದೇವಿ ಪುರಾಣ ಪಾರಾಯಣದಿಂದ ಭಯ ದೂರವಾಗಿ ಶಾಂತಿ, ನೆಮ್ಮದಿ ದೊರಕುತ್ತದೆ ಅಲ್ಲದೆ ನಿಸ್ವಾರ್ಥ ಜೀವನ ಮಾರ್ಗ ಬೋಧಿಸುತ್ತದೆ ಎಂದರು. ದೇವಿ ಪುರಾಣ ಕೇವಲ ಪುರಾಣವಲ್ಲ ಇದು ದೇಹದ ಮಹತ್ವವನ್ನು ಸಾರುತ್ತದೆ, ಕ್ರೋಧದಿಂದ ಏನನ್ನೂ ಗೆಲ್ಲಲಾಗದು, ಲೌಕಿಕ ವಸ್ತು ವಿಷಯಗಳಿಗೆ ಮಹತ್ವ ನೀಡಬಾರದು. ಮನಸ್ಸನ್ನು ನಿಯಂತ್ರಿಸಿ ತಾನೇ ಸ್ವತಃ ದೇವಿಯಾಗುವುದೇ ದೇವಿ ಪುರಾಣದ ಆಶಯವಾಗಿದೆ ಎಂದರು. ಕುದ್ರಿಮೋತಿ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪುರಾಣ ಪ್ರವಚನಗಳಿಂದ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆದು ಸಂತೃಪ್ತ ಸಮಾಜ ನಿರ್ಮಾಣವಾಗುತ್ತದೆ. ಜಿ.ವೀರಾಪೂರು ಗ್ರಾಮ ಚಿಕ್ಕದಾದರೂ ಪ್ರತಿಯೊಬ್ಬರಲ್ಲಿ ಸಂಸ್ಕಾರ, ಭಕ್ತಿ, ಧಾರ್ಮಿಕ ಎಲ್ಲಾ ಭಕ್ತ ಸಮೂಹ ಎಲ್ಲರನ್ನು ಕಾಣಬಹುದು. ಎಲ್ಲಾ ಭಕ್ತರ ಬಾಳು ಹಸನ ಮಾಡಲು ಗ್ರಾಮದ ದೇವಿ ಕೃಪೆ ಸದಾ ಇರಲಿ. ದುಶ್ಚಟಗಳಿಗೆ ಯುವಕರು ದೂರ ಇರುವ ಮೂಲಕ ಗ್ರಾಮದಲ್ಲಿ ಎಲ್ಲರೊಂದಿಗೆ ಒಗ್ಗೂಡುವ ಮೂಲಕ ಮಾದರಿಯಾಗುವಂತೆ ಸಲಹೆ ನೀಡಿದರು.  ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀ ಷ ಬ್ರ ಬಸವಲಿಂಗೇಶ್ಬರ ಶಿವಾಚಾರ್ಯ ಮಹಾಸ್ವಾಮೀಜಿಗಳು  ಮಾತನಾಡಿ, ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಿ ದುಶ್ಟಟಗಳಿಂದ ದೂರ ಇರುವ ಮೂಲಕ ಸುಖ ಸಂಸಾರ ನಡೆಸುವ ಸಲುವಾಗಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕುವಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.  

ಪ್ರತಿಯೊಬ್ಬರಲ್ಲಿ ದಾನ ಮಾಡುವ ಪ್ರವೃತ್ತಿ ಬರಬೇಕು. ಸದಾ ಭಕ್ತಿಮಾರ್ಗದಲ್ಲಿ ನಡೆಯುವ ಮೂಲಕ ಗ್ರಾಮದ ಸಕಲ ಭಕ್ತರು ನಡೆದುಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದಾಯಕ ವಿಷಯ ಎಂದರು. ನಂತರ ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ಕೆ.ಟಿ.ಬೆಟಗೇರಿ, ಯುವ ಮುಖಂಡ ಈಶ್ವರ ಅಟಮಾಳಗಿ, ಹನಮಂತಪ್ಪ ಹನಾಪೂರು ಸೇರಿದಂತೆ ಮತ್ತಿತರರು ಮಾತನಾಡಿದರು. ಈ ವೇಳೆ ದೇವಸ್ಥಾನ ಕಮೀಟಿ ಅಧ್ಯಕ್ಷ ಶಿವಕುಮಾರ ಸಾಹುಕಾರ, ಶಂಭುಲಿಂಗಯ್ಯ ಹಿರೇಮಠ, ಬಾಳಪ್ಪ ಬಂಡ್ಲಿ, ಸುಭಾಸಚಂದ್ರ ಕೊಂಗಿ, ಮಹೇಶ ಹರಿಜನ, ಶೇಖಪ್ಪ ಪೂಜಾರ, ಶಂಕರಗೌಡ ಪೋಲೀಸ್ ಪಾಟೀಲ್, ಈಶಪ್ಪ ಹೊಳಿ, ಹನಮಗೌಡ ಕೊಳಿಹಾಳ, ಖಾದರಸಾಬ, ರಾಮಪ್ಪ ನಾಯಕ, ಶೀನಪ್ಪ ರಾಠೋಡ, ರುದ್ರ​‍್ಪ ನಡುಲಮನಿ, ವಿರಭದ್ರಗೌಡ ಮ್ಯಾಗೇರಿ, ರಾಮಪ್ಪ ಹೊಳಿ, ಚಂದ್ರಶೇಖರ ಹಿರೇಮನಿ, ಹನಮಂತಪ್ಪ ಕುರಿ, ರಮೇಶ ಕುರಿ, ಅಂದಪ್ಪ ವಡ್ಡರ ಸೇರಿದಂತೆ ಗ್ರಾಮಸ್ಥರು, ಶ್ರೀದೇವಿ ದೇವಸ್ಥಾನದ ಸದ್ಬಕ್ತ ಮಂಡಳಿಯ ಸಕಲ ಭಕ್ತ ಸಮೂಹ ಉಪಸ್ಥಿತರಿದ್ದರು. ನಂತರ ಸಂಜೆ ಮಹಾರಥೋತ್ಸವವು ವಿಜೃಂಭನೆಯಿಂದ ಜರಗಿತು.ಅಪಾರ ಭಕ್ತ ಸಮೂಹ ಉತ್ತತ್ತಿ,ಬಾಳೆ ಹಣ್ಣು ಎಸೆದು ತಮ್ಮ ಭಕ್ತಿ ಸಮರ​‍್ಿಸಿದರು.