ಪ್ರತಿಯೊಂದು ಜೀವನ ಮೌಲ್ಯದ ವಿಷಯಗಳನ್ನು ಆಲಿಸಿ, ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ.ಅಧ್ಯಕ್ಷ.ವಿ.ತಿಪ್ಪೇಸ್ವಾಮಿ

ಪ್ರತಿಯೊಂದು ಜೀವನ ಮೌಲ್ಯದ ವಿಷಯಗಳನ್ನು ಆಲಿಸಿ, ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ.ಅಧ್ಯಕ್ಷ.ವಿ.ತಿಪ್ಪೇಸ್ವಾಮಿ             Listen to every life-value topic and emerge as good citizens. President. V. Thippeswamy

         ಕಂಪ್ಲಿ 16 : ಸಮೀಪದ ಹೋಸ ದರೋಜಿ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಜವಹರ್‌ಲಾಲ್ ನೆಹರು ಜನ್ಮದಿನದ ಪ್ರಯುಕ್ತದ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಶುಕ್ರವಾರ ನಡೆಯಿತು. ಮಕ್ಕಳ ಸಭೆಯನ್ನು ಎ.ಡಿ.ಎಂ.ಸಿ ಅಧ್ಯಕ್ಷ ವಿ.ತಿಪ್ಪೇಸ್ವಾಮಿ  ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಜವಹರ್‌ಲಾಲ್ ದೇಶಕ್ಕೆ ಅಪಾರವಾದ ಕೊಡುಗೆ ಇದೆ ಮಕ್ಕಳ ಶಿಕ್ಷಣವನ್ನು ನೀಡಿದ ಮೊದಲ ಶಿಕ್ಷಕ ಎಂಬ ಹೆಗ್ಗಳಿಗೆ ಜವಹರ್‌ಲಾಲ್ ನೆಹರು ಅವರದ್ದಾಗಿದೆ.  ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬಂತೆ ಶಿಕ್ಷಕರು ನೀಡುವ ಪಾಠ, ಪ್ರವಚನ ಸೇರಿದಂತೆ ಪ್ರತಿಯೊಂದು ಜೀವನ ಮೌಲ್ಯದ ವಿಷಯಗಳನ್ನು ಆಲಿಸಿ, ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ.  

         ಕಲಿಕಾ ಹಂತದಲ್ಲಿ ಒಳ್ಳೆಯ ಶಿಕ್ಷಣ ಪಡೆದು, ಪೋಷಕರ ಆಸೆ, ನೇರವೇರಿಸುವುದರ ಜೋತೆಗೆ ದೊಡ್ಡ ದೊಡ್ಡ ಹುದ್ದೆಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಿರಿ ಎಂದರು. ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಮಲ್ಲಿಕಾರ್ಜುನ ಶಿಕ್ಷಣ ಪ್ರೇಮಿ ಗುರುಮೂರ್ತಿ ಎ.ಡಿ.ಎಂ.ಸಿ ಸದಸ್ಯರಾದ ಎರೀ​‍್ರಸ್ವಾಮಿ  ರಂಗಸ್ವಾಮಿ ಈರಮ್ಮ ಲಕ್ಷೀ ಕವಿತ ರಫೀಜಾ ರಮೀಜಾ ಸೇರಿದಂತೆ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.