ರಾಣೆಬೆನ್ನೂರು ವಾಣಿಜ್ಯ ನಗರದಲ್ಲಿ ಜ. 25 ರಂದು ಲಯನ್ಸ್ ಪ್ರಾದೇಶಿಕ ಸಮ್ಮೇಳನ
Lions Regional Conference to be held on January 25th at Ranebennur Commercial City
ರಾಣೆಬೆನ್ನೂರು: 22 ವಾಣಿಜ್ಯ ನಗರದಲ್ಲಿ ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ, "ಜಿಲ್ಲಾ-317- ಬಿ ಪ್ರಾದೇಶಿಕ ಸಮಾವೇಶ" 2026.ರಾಣೆಬೆನ್ನೂರು ಲಯನ್ಸ್ ಸೇವಾ ಸಂಸ್ಥೆ ಆಥಿತ್ಯದಲ್ಲಿ ಏರಿ್ಡಸಲಾಗಿದೆ ಎಂದು ರಿಜನ್ ಚೇರ್ಮನ್, ಎಂಜೆಎಫ್, ಲ : ಟಿ. ವೀರಣ್ಣ ಹೇಳಿದರು. ಬುಧವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಸಮಾವೇಶವು, ಜನೇವರಿ 25, 2026 ನೇ ರವಿವಾರ ಮುಂಜಾನೆ 10:00 ಗಂಟೆಗೆ ಪಿ.ಬಿ.ರಸ್ತೆ, ಕೆಎಸ್ ಎಸ್ ಐಡಿಸಿ ಇಂಡಸ್ಟ್ರಿಯಲ್ ಸಭಾಂಗಣದಲ್ಲಿ ನಡೆಯಲಿದೆ. ಅಂದಿನ ಸಮಾವೇಶದಲ್ಲಿ ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ಲಯನ್ಸ್, ಸಿಟಿ ಲೈನ್ಸ್, ರಟ್ಟಿಹಳ್ಳಿ, ಹಾವೇರಿ ಜಿಲ್ಲೆ ಮತ್ತು ಹಾವೇರಿ ಪರಿವಾರ, ಬಂಕಾಪುರ, ಸವಣೂರ, ಹಿರೇಕೇರೂರ ಸೇರಿ ಗೋವಾ ರಾಜ್ಯದ ವಿವಿಧ ಜಿಲ್ಲೆಗಳ 8 ಸೇವಾ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮಹಿಳಾ ಸದಸ್ಯರು ಸೇರಿ 500ಕ್ಕೂ ಹೆಚ್ಚು ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳವರು.ನಡೆಯುವ ಪ್ರಾದೇಶಿಕ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಎಂಜೆಎಫ್ ನೀಲಕಂಠ ಎಂ. ಹೆಗಡೆ, ಭಾಗವಹಿಸುವರು.
ಲಯನ್ ಎಂಜೆಎಫ್, ಸುಧೇಶ ಬೋರ್ಕರ್ ಸಮಾವೇಶ ಉದ್ಘಾಟಿಸುವರು. ಪಿಡಿಜಿ, ಎಂಜೆಎಫ್, ಹರ್ಸ ದೇಸಾಯಿ ಅವರು ಉಪಸ್ಥಿತರಿರುವರು. ರಾಣೆಬೆನ್ನೂರು ಲಯನ್ ಸೇವಾ ಸಂಸ್ಥೆಯು ಆರಂಭವಾಗಿ ಇಂದಿಗೆ 49 ವರ್ಷಗಳು ಕಳೆದಿವೆ, ಸಾಮಾಜಿಕವಾಗಿ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ, ಕೃತಕ ಕಾಲು ಜೋಡಣೆ, ಆರೋಗ್ಯ ತಪಾಸಣೆ, ಕ್ರೀಡಾ ಚಟುವಟಿಕೆ, ಸಾಹಿತಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಚಿತ್ರಕಲೆ, ಲಲಿತ ಕಲೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಮತ್ತಿತರೆ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಾ ಜನಮನ್ನಣೆಯಲ್ಲಿ ಸಾಗಿದೆ. ಇದೇ ಸಂದರ್ಭದಲ್ಲಿ ಸಮಾವೇಶದ ಸವಿ ನೆನಪಿಗಾಗಿ, ಲಯನ್ಸ್ ಮಾಜಿ ಅಧ್ಯಕ್ಷ ಲ: ಟಿ. ಕೆ. ಎಂ. ಬಸವರಾಜಯ್ಯ ಅವರು, ರೋಟರಿ ಶಾಲೆಯ ಗ್ರಂಥಾಲಯಕ್ಕಾಗಿ, ಕನ್ನಡ- ಆಂಗ್ಲ ಮತ್ತು ಇತರೆ ವಿಷಯಕ್ಕೆ ಸಂಬಂಧಿಸಿದ ಒಟ್ಟು 108875 ರೂಪಾಯಿಗಳ ಮೊತ್ತದ 1705 ಮೌಲ್ಯಯುತ ಪುಸ್ತಕಗಳನ್ನು ದೇಣಿಗೆಯಾಗಿ ವಿತರಿಸಲಿದ್ದಾರೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 