ಕೊಪ್ಪಳದಲ್ಲಿ 24 ರಂದು ಲಯನ್ಸ್‌ ಕ್ಲಬ್ ಸುವರ್ಣ ಮಹೋತ್ಸವ

ಕೊಪ್ಪಳದಲ್ಲಿ 24 ರಂದು ಲಯನ್ಸ್‌ ಕ್ಲಬ್ ಸುವರ್ಣ ಮಹೋತ್ಸವ  Lions Club Golden Jubilee Celebration on the 24th in Koppal


ಕೊಪ್ಪಳ 20: ಲಯನ್ಸ್‌ ಕ್ಲಬ್ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಎರಡೂ ಸಂಸ್ಥೆಗಳು ಸ್ಥಾಪನೆಯಾಗಿ ಐವತ್ತು ವರ್ಷಗಳಾದ ಈ ನಿಮಿತ್ಯ ಸುವರ್ಣ ಸಂಭ್ರಮ ಸಮಾರಂಭವನ್ನು ಇದೇ ಜನೇವರಿ 24, ಶನಿವಾರ ಸಂಜೆ 4.45 ಕ್ಕೆ, ಚುಕ್ಕನಕಲ್ ರಸ್ತೆಯ ಸ್ವಾಮಿ ವಿವೇಕಾನಂದ ಸಿ.ಬಿ.ಎಸ್‌.ಇ. ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಲಯನ್ ವೀರಬಸಪ್ಪ ಬಳ್ಳೊಳ್ಳಿ ಮತ್ತು ಲಯನ್ ಚಂಪಾಲಾಲ್ ಮೆಹತಾ ವೇದಿಕೆಯಲ್ಲಿ ನಡೆಯುವ ಸುವರ್ಣ ಸಂಭ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ವಿಶೇಷ ಆಮಂತ್ರಿತರಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಚಂದ್ರಶೇಖರ ಶೆಟ್ಟಿ ಆಗಮಿಸಲಿದ್ದಾರೆ. 

ಲಯನ್ಸ್‌ ಇಂಟರ್ ನ್ಯಾಷನಲ್ ಡೈರೆಕ್ಟರ್ ಲಯನ್ ಪಂಕಜ ಮೆಹತಾ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಲಯನ್ಸ್‌ ಪಾಸ್ಟ್‌ ಇಂಟರ್ ನ್ಯಾಷನಲ್ ಡೈರೆಕ್ಟರ್ ಲಯನ್ ವಂಶೀಧರ ಬಾಬು ಲೋಕಾರೆ​‍್ಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಲಯನ್ ಎನ್‌. ಮೋಹನ ಕುಮಾರ, ಡಿಸ್ಟ್ರಿಕ್ಟ್‌ ಗವರ್ನರ್ ಲಯನ್ ಜೈಅಮೋಲ್ ನಾಯ್ಕ್‌, ಇಂಟರ್ ನ್ಯಾಷನಲ್ ಡೈರೆಕ್ಟರ್ ಎಂಡೋರ್ಸಿ ಲಯನ್ ರಾಮಚಂದ್ರ ಎಸ್‌., ಪಿಡಿಜಿಗಳಾದ ಲಯನ್ ಆನಂದ ಪೋಟ್ನಿಸ್, ಲಯನ್ ರವಿ ಹೆಗಡೆ, ಲಯನ್ ಮಾಧವಶೆಟ್ಟಿ ಆಗಮಿಸಲಿದ್ದಾರೆ. 

ಅತಿಥಿಗಳಾಗಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಾಮ್ ಎಲ್‌. ಅರಸಿದ್ಧಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ಪರೀಕ್ಷಿತರಾಜ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್ ಸಂಸ್ಥೆಗಳಲ್ಲಿ ಸೇವೆ ಗಣನೀಯ ಸೇವೆ ಸಲ್ಲಿಸಿದ ಕಾಯಕಜೀವಿಗಳಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮದ ನಂತರ ಹೆಸರಾಂತ ಗಾಯಕ ರಾಮಚಂದ್ರ ಹಡಪದ ಇವರಿಂದ ಸಂಗೀತ, ಸಾಂಸ್ಕೃತಿಕ ಸಮಾರಂಭ ನೆರವೇರುತ್ತದೆ. 

ಕೊಪ್ಪಳ ಲಯನ್ಸ್‌ ಕ್ಲಬ್ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಎರಡೂ ಸಂಸ್ಥೆಗಳ ಸುವರ್ಣ ಸಂಭ್ರಮ ಸಮಾರಂಭಕ್ಕೆ ಕೊಪ್ಪಳದ ನಾಗರಿಕರು, ಕ್ಲಬ್‌ನ ಹಿತೈಷಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸುವರ್ಣ ಸಂಭ್ರಮ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲಯನ್ ಬಸವರಾಜ ಬಳ್ಳೊಳ್ಳಿ, ಗೌರವಾಧ್ಯಕ್ಷ ಲಯನ್ ಅಭಯಕುಮಾರ ಮೆಹತಾ, ಕೊಪ್ಪಳ ಲಯನ್ಸ್‌ ಕ್ಲಬ್ ಅಧ್ಯಕ್ಷ ಲಯನ್ ಪರಮೇಶ್ವರ​‍್ಪ ಕೊಪ್ಪಳ, ಲಯನ್ಸ್‌ ಕ್ಲಬ್ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ, ಲಯನ್ಸ್‌ ಕ್ಲಬ್ ಕಾರ್ಯದರ್ಶಿ ಲಯನ್ ಪ್ರದೀಪ ಸೋಮಲಾಪುರ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.