ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾ ರಥೋತ್ಸವ
Lingaykya Karsiddeshwara Shivacharya Maha Rathotsava
ಕಂಪ್ಲಿ 29: ಸಮೀಪದ ಬುಕ್ಕಸಾಗರ ಗ್ರಾಮದ ದಕ್ಷಿಣಕಾಶಿ ಕರಿಸಿದ್ದೇಶ್ವರ ಸಂಸ್ಥಾನದ ಮಠದಲ್ಲಿ ಬಾಲ ತಪಸ್ವಿ ಲಿಂಗೈಕ್ಯ ಷ.ಬ್ರ.ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಮಹಾರಥೋತ್ಸವವು ಅತ್ಯಂತ,ಶ್ರದ್ಧೆ,ಭಕ್ತಿಗಳಿಂದ ವಿಜೃಂಭಣೆಯಿಂದ ಜರುಗಿತು.ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ, ಅಧ್ಯಾತ್ಮಿಕ ಪ್ರವಚನಗಳು, ಸಂಗೀತ, ವಚನ ಸಂಗೀತ, ಹಾಸ್ಯ ಸಂಜೆ, ಭರತನಾಟ್ಯ ವಿಶೇಷವಾಗಿ ವೀರಭದ್ರೇಶ್ವರರ ಗಂಗೆಸ್ಥಳ ಮತ್ತು ಅಗ್ನಿಕುಂಡ ಹಾಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದವು ಇಂದು ಬೆಳಿಗ್ಗೆ ಮಹಾರಥೋತ್ಸವದ ಅಂಗವಾಗಿ ಕರಿಸಿದ್ಧಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ಸಾಮೂಹಿಕ ವಿವಾಹ, ಧಾರ್ಮಿಕ ಸಭೆ ಹಾಗೂ ಮಡಿ ತೇರು ಜರುಗಿದವು. ನಂತರ ಅನ್ನಸಂತರೆ್ಣ ನಡೆಯಿತು.ಸಂಜೆ ವಿವಿಧ ಮಠಾಧೀಶರು, ಸ್ವಾಮಿಗಳ ಸಮ್ಮುಖದಲ್ಲಿ ಸಾವಿರಾರು ಸದ್ಭಕ್ತರು ಜಯ ಘೋಷದ ನಡುವೆ ವಿವಿಧ ಜಾನದಪ ಕಲಾತಂಡಗಳ ಪ್ರದರ್ಶನದೊಂದಿಗೆ ಮಹಾರಥೋತ್ಸವವು ಅದ್ದೂರಿಯಿಂದ ನಡೆಯಿತು. ರು ಭಾಗವಹಸಿದ್ದರು.ರಾರಾವಿಯ ಚಿದಾನಂದ ಗವಾಯಿಗಳ ನಿರ್ದೇಶನದಲ್ಲಿ ಶ್ರೀಕರಿಸಿದ್ದೇಶ್ವರ ಸಂಸ್ಕೃತ,ವೇದ,ಜ್ಯೋತಿಷ್ಯ ಗುರುಕುಲ ಪಾಠಶಾಲೆ ವಿದ್ಯಾರ್ಥಿಗಳಿಂದ ನಾರದ ವಿನೋದ ಮತ್ತು ಮುದುಕನ ಮದುವೆ ನಾಟಕಗಳು ಪ್ರದರ್ಶನಗೊಂಡವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 