ಅದ್ದೂರಿಯಾಗಿ ಲಿಂಗೈಕ್ಯ ಗುರುಲಿಂಗೇಶ್ವರ ಶಿವಾಚಾರ್ಯರ ಜಾತ್ರೆ
Lingaykya Gurulingeshwara Shivacharya fair held in grand style
ಇಂಡಿ 31: ತಾಲೂಕಿನ ತಡವಲಗಾ ಗ್ರಾಮದಲ್ಲಿ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ್ರ ಪ್ರಭುಕುಮಾರ ಶಿವಾಚಾರ್ಯರು ಹಿರೇಮಠ ಮಸೂತಿ ಡಾ ವಿರುಪಾಕ್ಷ ದೇವರು ಗೋರನಾಳ ಹಾಗೂ ತಡವಲಗಾ ಸಂಸ್ಥಾನ ಹಿರೇಮಠದ ಶಿವಯೋಗೇಂದ್ರ ದೇವರು ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಆರ್ಶಿವಚನ ನೀಡಿ ಮಾತನಾಡಿದ ಅವರು ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರು ಮಾಹಾತಪಸ್ವಿಗಳು ಆಗಿದರೂ ಹಾಗೂ ಪೂಜ್ಯ ನಿಷ್ಠೆವುಳ್ಳವರು ಭಕ್ತರ ಪಾಲಿಗೆ ನಡೆದಾಡುವ ದೇವರು ಆಗಿದ್ದರು. ಅವರ 82 ನೇ ಪುಣ್ಯಾರಾಧನೆಯ ನಿಮಿತ್ತವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ತುಂಬಾ ಒಳ್ಳೆಯದು ಎಂದು ಹೇಳಿದರು. ಗೋರನಾಳದ ವಿರುಪಾಕ್ಷ ದೇವರು ಹಾಗೂ ತಡವಲಗಾ ಶಿವಯೋಗೇಂದ್ರ ದೇವರು ಆಶಿರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಮಳಸಿದ್ದಪ್ಪ ಬ್ಯಾಳಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಗುರುಮೂರ್ತಿಯ್ಯ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಅಶೋಕ ಪೂಜಾರಿ, ಚಂದ್ರಕಾಂತ ಮೇತ್ರಿ, ಭೀಮಣ್ಣ ಪಂತೋಜಿ, ಡಾ. ಪ್ರಕಾಶ ಹೂಗಾರ, ಈರ್ಪಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಿಗ್ಗೆ ಆರು ಗಂಟೆಗೆ ಕೃತ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. ನಂತರ ತಡವಲಗಾ ಶಿವಯೋಗೇಂದ್ರ ದೇವರು ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿದರು. ಶ್ರೀ ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರ ಪೋಟೋ ಪಲ್ಲಕ್ಕಿಯಲ್ಲಿ ಇಟ್ಟು ವಾದ್ಯ ವೃಂದ ಸಂಗೀತ ನೃತ್ಯ ವೈಭವದ್ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ಮಠಕ್ಕೆ ತರಲಾಯಿತು. ಅನ್ನ ಸಂತರೆ್ಣ ನಡೆಯಿತು. ಜಾತ್ರೆ ನಿಮಿತ್ತ ಗೀಗೀ ಪದಗಳು ಪಾರಿಜಾತ ಬೈಲಾಟ ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 