ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾಧೀಶರ ಮತ್ತು ಮಹಾಸಭಾ ಬೆಂಬಲ
Lingayat Mathadhishar and Mahasabha support the sugarcane farmers' struggle
ಬೆಳಗಾವಿ, 06 ; ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ನಿಗೆ ಯೋಗ್ಯ ಬೆಲೆ ನಿಗದಿ ಪಡಿಸಬೇಕೆಂದು ಹಿರೇಬಾಗೇವಾಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇಂದು ಲಿಂಗಾಯತ ಮಠಾದೀಶರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪಧಾದಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು. ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಶೇಗುಣಿಸಿಯ ಪೂಜ್ಯ ಮಹಾಂತ ಪ್ರಭುಸ್ವಾಮಿಗಳು, ಅರಳಿಕಟ್ಟಿ ಪೂಜ್ಯರು, ಶಿವಬಸವ ದೇವರು ಹಾಗೂ ಸಿದ್ಧಬಸವ ಸ್ವಾಮಿಗಳು ಭಾಗವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶ್ರೀಬಸವರಾಜ ರೊಟ್ಟಿ, ಶ್ರೀ ಮೋಹನ ಗುಂಡ್ಲೂರ, ಶ್ರೀ ಸಿ ಎಂ ಬೂದಿಹಾಳ, ಶ್ರೀ ಮುರಿಗೆಪ್ಪ ಬಾಳಿ, ಶ್ರೀ ಎಫ್ ಆರ್ ಪಾಟೀಲ ಶ್ರೀ ಬಿ ಜಿ ವಾಲಿ ಇಟಗಿ ಹಾಗೂ ಪಧಾದಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 