ಜೀವ ವಿಮಾ ಯೋಜನೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ: ಮಂಜುನಾಥಗೌಡ
Life insurance scheme gives confidence in life: Manjunath Gowda
ಜೀವ ವಿಮಾ ಯೋಜನೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ: ಮಂಜುನಾಥಗೌಡ
ರಾಣೇಬೆನ್ನೂರು 28:ಯಾವುದೇ ಸಮುದಾಯದ ಕುಟುಂಬದಲ್ಲಿ ಅನೇಕ ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಯಾರಿಗೂ ಕಷ್ಟಗಳು, ಆಕಸ್ಮಿಕ ಘಟನೆಗಳು ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಜೀವ ವಿಮಾ ಯೋಜನೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ ಸರಳ ಜೀವನ ಬದುಕಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಎಸ್. ಕೆ.ಡಿ.ಆರ್, ಡಿ.ಪಿ. ಬಿಸಿ ಟ್ರಸ್ಟ್ ವಲಯ 1ರ ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ. ಹೇಳಿದರು.
ಅವರು, ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ, ತಿಮ್ಮೇನಹಳ್ಳಿ ಕಾರ್ಯಕ್ಷೇತ್ರದ ಗಜಾನನ ತಂಡದ ಹನುಮಂತಪ್ಪ ತೆಕ್ಕೆದಾರ್ ಕಳೆದ ಆರು ತಿಂಗಳ ಹಿಂದೆ ಆಕಸ್ಮಿಕ ನಿಧನ ಹೊಂದಿದ್ದರು. ಅವರ( ಎಲ್‌ಐಸಿ ಮೈಕ್ರೋ ಬಚತ ) ಯೋಜನೆಯ ಅಡಿಯಲ್ಲಿ ಜೀವ ವಿಮಾ ನಿಗಮದಿಂದ ಬಿಡುಗಡೆಯಾದ, 200000-00ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಮಾತನಾಡಿದರು. ಇದೇ ಸಂದರ್ಭದಲ್ಲಿ
ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಕೃಷ್ಣಮೂರ್ತಿ,ಅವರು,ಕುಟುಂಬದ ಫಲಾನುಭವಿ ಮೀನಾಕ್ಷಿ ಹೆಚ್. ತೆಕ್ಕೆದಾರ್ ಅವರಿಗೆ ಜೀವ ವಿಮಾ ನಿಗಮದಿಂದ ಬಿಡುಗಡೆಯಾದ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಚಂದ್ರಶೇಖರ ಬಣಕಾರ್, ತಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕೇಲಗಾರ, ಗದಿಗೆಪ್ಪ ಬುಡಮಣ್ಣನವರ, ಗ್ರಾ. ಪಂ.ಸದಸ್ಯರಾದ ಮಾಲತೇಶ್ ಗಡ್ಡದ, ಷಣ್ಮುಖಪ್ಪ ಅರಿಕೇರಿ, ಪರಶುರಾಮ ಪೂಜಾರ,ಮೇಲ್ವಿಚಾರಕ ಹನುಮಂತಪ್ಪ ಪಿ.ಎಸ್, ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 