ಕನಕದಾಸರ ಜೀವನ ಮತ್ತು ಸಾಹಿತ್ಯದರ್ಶನ

-ಮಂಜುನಾಥ .ಎಸ್. , ಸವಣೂರ

ರಂಪರೆಯ ಪರ್ವತದ ಮೇಲಿದ್ದವರು ಶಿಖರವೇರುವುದು ಮಹಾನ್ ಸಾಧನೆಯೇನಲ್ಲ ; ಆದರೆ ಕಣಿವೆಯಾಳದಲ್ಲಿದ್ದವರು ಶಿಖರವೇರುವುದು ಅದ್ಬುತ ಸಾಧನೆ. ಅಂದಿನ ಸಮಾಜದ ಕೆಳಸ್ತರದ ವ್ಯಕ್ತಿಯೋರ್ವ ಕಣಿವೆಯಾಳದಿಂದ ನೋಡುನೊಡುತ್ತಲೇ ಎತ್ತರಕ್ಕೇರಿ ಗೋಪುರವಾಗಿ ಬೆಳೆದು,ಗೊಮ್ಮಟನಾಗಿ ಮಂದಹಾಸ ಬೀರಿ, ಮಂದಹಾಸದಿಂದ ಜನಮನ ಸೂರೆಗೊಂಡ ಮಹಾನ್ದೃಷ್ಟಾರ ಕನಕದಾಸರು. ವರಕವಿಗಳು, ಕೀರ್ತನಕಾರರು, ಸಂತರು ಎನ್ನಿಸಿಕೊಂಡ ಕನಕದಾಸರು ಕನರ್ಾಟಕ ಹರಿದಾಸಸಾಹಿತ್ಯದ ಅಶ್ವಿನಿದೇವತೆಗಳಲೊಬ್ಬರು. ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರಲ್ಲೊಬ್ಬರಾಗಿ, ಯಾವ ಮತವನ್ನು ಬಿಡದೆ, ಯಾವ ಮತಕ್ಕೂ ಅಂಟಿಕೊಳ್ಳದೆ, ಸಕಲತತ್ವಗಳನ್ನು ಮೀರಿ, ನಿಧರ್ಿಗಂತವಾಗಿ ಬೆಳೆದು ವಿಶ್ವಮಾನವರಾಗಿ ವಿಜೃಂಭಿಸಿದ ಯೋಗಪುರುಷéರು ಕನಕದಾಸರು.

ಕನಕದಾಸರ ಜೀವನ:

   ಹಾವೇರಿ ಜಿಲ್ಲೆಯ ಬಾಡಗ್ರಾಮದಲ್ಲಿ ಕ್ರಿ.ಶ. 1509ರಲ್ಲಿ ಕುರುಬಜನಾಂಗಕ್ಕೆ ಸೇರಿದ ಬೀರಪ್ಪ ಮತ್ತು ಬಚ್ಚಮ್ಮನವರ ಪವಿತ್ರಉದರದಲ್ಲಿ ಕನಕದಾಸರ ಜನನವಾಯಿತು. ತಿರುಪತಿ ತಿಮ್ಮಪ್ಪನ ಪ್ರಸಾದದಿಂದ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಡಣ್ಣಾಯಕ ಬೀರಪ್ಪನ ಮಗನಾದ ತಿಮ್ಮಪ್ಪನಾಯಕನು ಬಾಲ್ಯದಲ್ಲಿ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆಸವಾರಿಯನ್ನು ಕಲಿತನು. ಕೆಲವು ವರ್ಷಗಳ ನಂತರ ಬೀರಪ್ಪನಾಯಕನು ತೀರಿಕೊಂಡನು. ಬಳಿಕ  ತಿಮ್ಮಪ್ಪನಾಯಕನು ತನ್ನ ಕಿರಿವಯಸ್ಸಿನಲ್ಲಿಯೇ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಬಂಕಾಪೂರ ಪ್ರಾಂತ್ಯಕ್ಕೆ ದಂಡನಾಯಕನಾದ.ವಿದ್ಯೆ,ಬುದ್ದಿ ಹಾಗೂ ಶೌರ್ಯ ಮೂರರ ತ್ರೀವೇಣಿ ಸಂಗಮವೇ ಈ ಯುವದಂಡನಾಯಕ. ತಿಮ್ಮಪ್ಪನಾಯಕನು ತಾಯಿಯ ಮಾರ್ಗದರ್ಶನದಲ್ಲಿ ರಾಜ್ಯಭಾರ ಮಾಡುತ್ತಲ್ಲಿದ್ದ.ತಮ್ಮ ಕುಟುಂಬದ ಇಷ್ಟ ದೈವನಾದ ನರಸಿಂಹದೇವರ ದೇವಸ್ಥಾನವನ್ನು ನಿಮರ್ಿಸಲು ತೊಡಗಿದಾಗ ತಿಮ್ಮನಿಗೆ ಅಪಾರವಾದ ಹೊನ್ನಿನ ನೀಕ್ಷೆಪ ಲಭಿಸಿತಂತೆ! ಅದೆಲ್ಲವನ್ನೂ ತಿಮ್ಮಪ್ಪನು ದೇವಾಲಯಗಳ, ಕೆರೆಕಟ್ಟೆೆಗಳ,ಕಾಲುವೆಗಳ, ಧರ್ಮಛತ್ರಗಳ ನಿಮರ್ಾಣಕ್ಕೆ ಬಳಸಿದನು. ತಮ್ಮ ಪ್ರಭುಗಳ ಪ್ರಜಾಹಿತವನ್ನು ಮೆಚ್ಚಿ ಕನಕ ದೊರಕಿದ ತಿಮ್ಮನನ್ನು ಪ್ರೀತಿಯಿಂದ ಕನಕನಾಯಕ ಎಂದು ಕರೆಯಲು ಪ್ರಾರಂಭಿಸಿದರು. ಹೀಗೆ ತಿಮ್ಮಪ್ಪನಾಯಕನು ಞನಕನಾಯಕನಾದನು. ಮುಂದೆ ಕನಕನಾಯಕನ ತಾಯಿ ಹಾಗೂ ಕನಕನಮಡದಿಯಾಗಿದ್ದ ಬಂಕಾಪುರದ ಹಾಲುಮತಸ್ಥ ಗೌಡರಮಗಳು ತೀರಿಕೊಂಡರು. ಒಮ್ಮೆ ಕನಕನಾಯಕನಿಗೂ ವಿಜಯಪುರದ ಆದಿಲ್ಶಾಹಿಯ ಬೆಳಗಾವಿಯ ಪ್ರತಿನಿಧಿಗಳಿಗೂ ಬಾಡದಲ್ಲಿ ಘನಘೋರ  ಯುದ್ಧ ನಡೆಯಿತು. ಯುದ್ದದಲ್ಲಿ ಸೋತ ಕನಕನಾಯಕನಿಗೆ ಮಾರಣಾಂತಿಕ ಪೆಟ್ಟುಗಳಾದವು. ರಕ್ತದಮಡುವಿನಲ್ಲಿ ಬಿದ್ದಿದ್ದ ಕನಕನಾಯಕನಿಗೆ ಭಗವಂತನದರ್ಶನವಾಗುತ್ತದೆ. ಈಗಾಗಲೇ  ಕನಕನಾಯಕನಿಗೆ ಅನೇಕ ಸಲ ಕನಸ್ಸಿನಲ್ಲಿ ತಿರುಪತಿಯ ಶ್ರೀನಿವಾಸ ಬಂದು "ಕನಕ ನನ್ನ ದಾಸನಾಗು''ಎಂದು ನುಡಿದಿದ್ದಿನಂತೆ.ಕನಕನು ಮಾತ್ರ ಮನಸ್ಸು ಮಾಡಿರಲಿಲ್ಲ. ಈಗ ಯುದ್ದ,ಮಾರಣಾಂತಿಕ ನೋವು,ಹರೀಕೃಪೆಗಳೆಲ್ಲವೂ ಸೇರಿ ಕನಕನಾಯಕನು ದಾಸರದಾಸನಾಗಿ (ಕನಕದಾಸನಾಗಿ) ಪರಿವತರ್ಿತನಾದನು. ರಾಜ್ಯಾಧಿಕಾರ ಮತ್ತು ಶಾರೀರಿಕ ಸುಖಲೋಲುಪತೆಗಳಲ್ಲಿ ಮೋಹ ದೂರವಾಗಿ ಹರಿನಾಮ ಸ್ಮರಣೆಗೆ ಕನಕದಾಸನು ಮುಂದಾದನು. ಮತ್ತೆ ಮತ್ತೆ ಸೇನೆಕಟ್ಟಿ ಯುದ್ಧ ಮಾಡಿ ರಾಜ್ಯಾಧಿಕ್ಕಾರವನ್ನು ಪಡೆಯುವ ಸಾದ್ಯತೆಯಿದ್ದೂ ಅದನ್ನು ತ್ಯಜಿಸಿ ಭಗವಂತನೆಡೆಗೆ ನಡೆವ ಕನಕದಾಸನು ಅರಿವಿನ ಗುರುವಾದನು, ಪರಮಜ್ಞಾನಿಯಾಗುವತ್ತ ಮುನ್ನಡೆದರು.

ಕನಕದಾಸರ ಪವಾಡಗಳು:

ಕನಕದಾಸರು ವ್ಯಾಸರಾಯರ ಮೆಚ್ಚಿನ ಶಿಷ್ಯರು. ಒಮ್ಮೆ ಗುರುಗಳು,ಕನಕನ ಭಕ್ತಿಯ ಹಿರಿಮೆಯನ್ನು ಜನತೆಗೆ ತಿಳಿಯಪಡಿಸಲು ಒಂದು ಪರೀಕ್ಷೆ ನಡೆಸಿದರು.ಎಲ್ಲರಿಗೂ ಒಂದೊಂದು ಬಾಳೆಹಣ್ಣು ನೀಡಿ "ಯಾರೂ ಇಲ್ಲದಿರುವ ಸ್ಥಳದಲ್ಲಿ ಈ ಹಣ್ಣನ್ನು ತಿಂದು ಬನ್ನಿ" ಎಂದರು. ಮಾರನೆಯ ದಿನ ಶಿಷ್ಯರೆಲ್ಲರೂ ತಮಗೆ ಸರಿಕಂಡ ಸ್ಥಳದಲ್ಲಿ ತಿಂದು ಬಂದರು.ಕನಕದಾಸರು ಮಾತ್ರ "ಆ ಭಗವಂತ ಇರದ ಸ್ಥಳವು ದೊರೆಯಲಿಲ,್ಲ ಹೀಗಾಗಿ ಬಾಳೆ ಹಣ್ಣನ್ನುತಿನ್ನಲಿಲ್ಲ ಗುರುಗಳೇ"ೆ ಎಂದು ಹೇಳಿದ. ಅದು ಕನಕದಾಸರ ಭಕ್ತಿಯ ಪರಾಕಾಷ್ಟೆ.

ಕನಕದಾಸರು ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆಂದು ಹೋದಾಗ, ಅಲ್ಲಿನ ಬ್ರಾಹ್ಮಣರು ಹೀನಕುಲದವನೆಂದು ಈತನನ್ನು ಮಂದಿರದ ಒಳಗೆ ಬಿಡಲಿಲ್ಲ. ಈತನ ಭಕ್ತಿ ಆವೇಗಕ್ಕೆ ದಯಾಗುಣನಾದ ಶ್ರೀಕೃಷ್ಣನೇ ಕನಕದಾಸರಿದ್ದ ಕಡೆಗೆ ಕಿಂಡಿಯ ಮೂಲಕ ದರ್ಶನನೀಡಿದನು. ಇದು ಕನಕನ ಕಿಂಡಿಯೆಂದೇ ಪ್ರಸಿದ್ದಿ ಪಡೆದಿದೆ.

ವ್ಯಾಸರಾಯರೊಮ್ಮೆ ಶಿಷ್ಯರನ್ನುದ್ದೇಶಿಸಿ "ನಿಮ್ಮಲ್ಲಿಯಾರು ಮೋಕ್ಷವನ್ನು ಪಡೆಯುವಿರಿ?"ಎಂದು ಪ್ರಶ್ನಿಸಿದರು.

ಕನಕದಾಸರು-  "ನಾನು ಹೋದರೆ ಹೋದೇನು"ಎಂದರು. ಉಳಿದ ಶಿಷ್ಯರೆಲ್ಲರೂ ಈತನು ಅಹಂಕಾರಿ, ಮೇಲ್ಜಾತಿಯವರಿಗಿಲ್ಲದ ಮೋಕ್ಷ ಇವನಿಗೆ ಹೇಗೆ ದೊರೆಯುತ್ತದೆ ಎಂದರು.    ಅದಕ್ಕೆ   ಕನಕದಾಸರು "ನಾನು ಎಂಬ ಅಹಂಂಕಾರ ನಾಶವಾದರೆ ಯಾರೂ ಬೇಕಾದರೂ ಮೋಕ್ಷವನ್ನು ಪಡೆಯಬಹುದು" ಎಂದು ವಿವರಿಸಿದರು. ಶಿಷ್ಯರೆಲ್ಲರೂ ಮೌನವಾಗಿದ್ದರು. ಗುರುವ್ಯಾಸರಾಯರು ಸಂತಸಗೊಂಡರು. ಕನಕದಾಸರ ಭಕ್ತಿಪಾರಮ್ಯತೆಗೆೆ ಸಂತೃಪ್ತಗೊಂಡರು.

ಕನಕದಾಸರ ಸಾಹಿತ್ಯದರ್ಶನ:

    ತಮ್ಮ ನಿರಂತರ ಸಾಧನೆ, ಸಹಜಕಾವ್ಯ ಶಕ್ತಿ, ವ್ಯಾಸರಾಯರ ಆಶರ್ೀವಾದ, ಬದುಕಿನ ದಟ್ಟ ಅನುಭವ, ಆದ್ಯಾತ್ಮಿಕ ನೆಲೆಗಳಿಂದೊಡಗೂಡಿದ ಕನಕದಾಸರ ದಾಸಸಾಹಿತ್ಯವು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಹಾಗೂ ಜನಸಾಮಾನ್ಯರಿಗೆ ಅವರು ನೀಡಿದ  ಅಮೋಘಕೊಡುಗೆ. ಮೋಹನತರಂಗಿಣಿ, ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯಚರಿತೆ ಹಾಗೂ ಸುಮಾರು 300 ಕ್ಕೂ ಹೆಚ್ಚು ಕೀರ್ತನೆಗಳು ಕನಕದಾಸರ  ಹೃದಯಂತರಾಳದಿಂದ  ಒಡಮೂಡಿದವು. ಕನಕರ ಕಾವ್ಯಕ್ಕೆ ಎರಡುದೃಷ್ಠಿಗಳು ಒಂದು ಭಗವಂತನ ಸ್ಮರಣೆ ಮತ್ತೊಂದು ಸಮಾಜದ ಅಭಿವೃದ್ಧಿ.

ಮೋಹನತರಂಗಿಣಿ:

42 ಸಂಧಿಗಳಿಂದ ಸಾಂಗತ್ಯದಲ್ಲಿ ರಚನೆಗೊಂಡಿರುವ ಮೋಹನತರಂಗಿಣಿಯಲ್ಲಿ ಪೌರಾಣಿಕತೆ ಹಾಗೂ ಸಮಕಾಲೀನ ಜೀವನ  ಮೇಳೈಸಿವೆ. ಕನಕದಾಸರು ಈ ಕೃತಿಯಲ್ಲಿ ಕೃಷ್ಣಚರಿತೆಯನ್ನು ಹೇಳುತ್ತಾ ವಿಜಯನಗರದ ಕೃಷ್ಣದೇವರಾಯನನ್ನು  ಭಗವಾನ್ ಶ್ರೀಕೃಷ್ಣನಿಗೆ  ಹೋಲಿಸಿದ್ದಾರೆ. ವಿಜಯನಗರವು ದ್ವಾರಕೆಯೇ ಎಂಬಂತೆ ಸಮಾನ ಹೋಲಿಕೆ ಮೆರೆದಿದ್ದಾರೆ. ಶ್ರೀಕೃಷ್ಣ-ರುಕ್ಮಿಣಿ, ಪ್ರದ್ಯುಮ್ನ-ರತಿದೇವಿ, ಅನಿರುದ್ಧ-ಉಷೆ ಇವರುಗಳ ಶೃಂಗಾರಜೀವನ ಮೋಹನತರಂಗಿಣಿಯ  ಜೀವಾಳವಾಗಿದೆ.

 ಹರಿಭಕ್ತಸಾರ:

ಹರಿಭಕ್ತಸಾರವು  110 ಪದ್ಯಗಳನ್ನು ಒಳಗೊಂಡ ಭಾಮಿನಿ ಷಟ್ಪದಿಯಲ್ಲಿರುವ ಕಾವ್ಯ.  ನೀತಿ, ಭಕ್ತಿ, ವೈರಾಗ್ಯಗಳಿಂದೊಡಗೂಡಿದ  ಈ ಕೃತಿಯಲ್ಲಿ ಸುರಪುರನಿಲಯಚೆನ್ನಿಗರಾಯನ ಸ್ತುತಿಇದೆ.

ನಳಚರಿತ್ರೆ:

 ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನಿ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿಂದ ಕೂಡಿದ ಕೃತಿಯಾಗಿದೆ. ನಳ-ದಮಯಂತಿಯರ  ಪ್ರೇಮಸಂದೇಶಗಳು, ಕಷ್ಟಕಾಲ ಹಾಗೂ ನಂತರದ  ಪುನಮರ್ಿಲನಗಳಿಂದೊಡಗೂಡಿದ  ಈ ಕೃತಿಯು  ಹೃದಯಸ್ಪಶರ್ಿಯಾದ ಚಿರಂತನ ಪ್ರೇಮಕಾವ್ಯವಾಗಿದೆ.

ರಾಮಧಾನ್ಯಚರಿತೆ:

    ರಾಮಧಾನ್ಯಚರಿತೆಯು ಭಾಮಿನಿಷಟ್ಪದಿಯಲ್ಲಿದ್ದು  156 ಪದ್ಯಗಳನ್ನೊಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ  ಸಂಘರ್ಷದ  ನಂತರ ರಾಗಿಯು ಮಹೋನ್ನತಿ ಪಡೆದು ರಾಮಧಾನ್ಯವೆಂಬ ಹೆಸರು ಪಡೆಯುವುದನ್ನು ಈ ಕೃತಿ ಮನೋಜ್ಞವಾಗಿ ಚಿತ್ರಿಸಿದೆ.

ಕನಕದಾಸರ ಕೀರ್ತನೆಗಳು:

     ಕನಕದಾಸರ ಕೀರ್ತನೆಗಳಲ್ಲಿ ಗೇಯತೆ, ಒಗಟು, ಭಾವ., ಲಯಗಳು ಸಾಧ್ಯಂತವಾಗಿ ಮೇಳೈಸಿದೆ. ತಲ್ಲಣಿಸದಿರು ಕಂಡ್ಯತಾಳು ಮನವೇ, ನೀ ಮಾಯೆಯೊಳಗೊ ನಿನ್ನೊಳುಮಾಯೆಯೋ, ತನು ನಿನ್ನದು ಜೀವನ ನಿನ್ನದು.. ಮುಂತಾದ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ನಿರ್ಭರತೆ, ಸಮಾಜದ ಕುಂದುಕೊರತೆಗಳನ್ನು ತಿದ್ದುವ ಪ್ರಾಂಜಲ ಹಂಬಲವಿದೆ.

      ಕನಕದಾಸರು ಕವಿ-ಸಂತರ ಸಂಗಮ. ತಮ್ಮ ಬದುಕು ಮತ್ತು ಸಾಹಿತ್ಯದಿಂದ ಮಹೋನ್ನತಿ ಮೆರೆದಿರುವ ಕನಕದಾಸರ ಬದುಕು ಮತ್ತು ಸಾಹಿತ್ಯಗಳು ಅಸ್ತವ್ಯಸ್ತವಾಗಿರುವ ನಮ್ಮ ಸಮಾಜಕ್ಕೆ ಮರ್ಗದರ್ಶನ ಮಾಡುತ್ತಿವೆ. ಕವಿಯಾಗಿ ಸಮಾಜದಅಂತರಂಗವನ್ನು ದಶರ್ಿಸಿದ, ಸಂತರಾಗಿ ಆದ್ಯಾತ್ಮಿಕ ಅಭ್ಯುದಯ ಪರಿಭಾವಿಸಿಕೊಂಡ ಕನಕದಾಸರು ಎಂದೆಂದಿಗೂ ಅಮರ. ಆಸೆ, ದುರಾಸೆ, ಮಹತ್ವಾಕಾಂಕ್ಷೆ, ಸವಾಲು-ಸಂಕೀರ್ಣಗಳಿಂದ  ತಲ್ಲಣಗೊಂಡಿರುವ ಜನಸಮುದಾಯಕ್ಕೆ ಕನಕದಾಸರ ಬದುಕು ಸಾಂತ್ವನದ ಸಂಜೀವಿನಿಯಾಗಬಲ್ಲದು.