ಸಾಮಾನ್ಯ ಜನರಿಗೆ ರೀತಿ ಲೈಫ್ ಕೇರ್ ಆಧಾರ: ಧರೆಪ್ಪ ಸಾಂಗ್ಲೀಕರ
Life Care is a way for the common people: Dharappa Sanglikara
ರನ್ನ ಬೆಳಗಲಿ 31: ಸಾಮಾನ್ಯ ಜನರಿಗೆ ರೀತಿ ಲೈಫ್ ಕೇರ್ ಆಧಾರವಾಗಿದೆ. ಪ್ರಸ್ತುತ ದಿನಗಳಲ್ಲಿ ಆರ್ಥಿಕ ತೊಂದರೆಯಿಂದ ಅನೇಕ ರೋಗಿಗಳು ಮನೆಯಲ್ಲೇ ಇದ್ದು, ಮತ್ತಷ್ಟು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರಿ್ಡಸಿ, ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ರೋಗಿಗಳಿಗೆ ವರದಾನವಾಗಿದೆ ಎಂದು ಧರ್ಪ ಸಾಂಗ್ಲೀಕರ ಹೇಳಿದರು.
ಮಹಾಲಿಂಗಪುರದ ರೀತಿ ಲೈಫ್ ಕೇರ್ ವತಿಯಿಂದ ಪಟ್ಟಣದ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈ ಒಂದು ಆರೋಗ್ಯ ತಪಾಸಾಣಾ ಶಿಬಿರದಲ್ಲಿ ಎಲ್ಲಾ ಬಗೆಯ ಖಾಯಿಲೆಯನ್ನು ಗುರುತಿಸಿ ಸರ್ಕಾರದ ವಿವಿಧ ಸೌಲಭ್ಯಗಳ ಜೊತೆಗೆ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಗುಣಪಡಿಸುವ ಕಾರ್ಯವನ್ನು ರೀತಿ ಲೈಫ್ ಕೇರ್ ಮಹಾಲಿಂಗಪುರ ಆಸ್ಪತ್ರೆ ಮಾಡುತ್ತಿದ್ದು, ಈ ಕಾರ್ಯಕ್ರಮವು ಅಭಿನಂದನಾಹರ್ವಾಗಿದೆ. ಎಲ್ಲಾ ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳಬೇಕೆಂದು ಸಾಂಗ್ಲೀಕರ ಅವರು ತಿಳಿಸಿದರು. ಡಾ. ಬಸವರಾಜ ನಾಗರಾಳ, ಡಾ. ಶ್ರೀದೇವಿ ತೇಲಿ, ಡಾ.ರಾಜೇಶ ಬಾವಲತ್ತಿ, ಡಾ.ಅರುಣ ಕುದರಿ ವೈದ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಿಕ್ಕ ಮಕ್ಕಳ ಅರೋಗ್ಯ ಸಮಸ್ಯೆ, ಎಲುಬು-ಕೀಲು, ಬಿಪಿ, ಶುಗರ್ ಹಾಗೂ ದಂತ ವೈದ್ಯಕೀಯಗಳ ತಪಾಸನೆ ಹಾಗೂ ಉಚಿತ ಓಷಧಿ ವಿತರಣೆ ಜರುಗಿತು.
ನೂರಾರು ಸಂಖ್ಯೆಯಲ್ಲಿ ರೋಗಿಗಳು ಭಾಗವಹಿಸಿ ವೈದ್ಯಕೀಯ ತಪಾಸನೆಯನ್ನು ಪಡೆದುಕೊಂಡರು. ಚಿಕ್ಕಪ್ಪ ನಾಯಕ, ಸಂದೀಪ ಕುಲಕರ್ಣಿ, ಅಲ್ಲಪ್ಪಗೌಡ ಶಂಕ್ರಟ್ಟಿ, ಚಿನ್ನಪ್ಪ ಪೂಜೇರಿ, ಗಿರಿಯಪ್ಪ ಬಳಗಾರ, ಮಹಾದೇವ ಹಾದಿಮನಿ, ಸಿದ್ದು ಪಾಟೀಲ, ಸಂಜು ಚನ್ನಾಳ, ಜ್ಯೋತಪ್ಪ ಕಡಪಟ್ಟಿ, ಚೆನ್ನಪ್ಪ ಹಳ್ಳಿ, ಶ್ರೀಶೈಲ ಸನಟ್ಟಿ, ಹನಮಂತ ಹೊಸೂರ, ಗಂಗಪ್ಪ ಕುಂಬಾಳಿ, ಮಹಾಂತೇಶ ಬ್ರೂಕ್ಲಿ, ಸುರೇಶ ಗೋರಬಾಳ, ಮಹಾಲಿಂಗಪ್ಪ ಕೊಣ್ಣೂರ, ನಾಗಪ್ಪ ಹುಣಸಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಲ್ಲಪ್ಪ ಹೊಸಪೇಟೆ ನಿರೂಪಿಸಿದರು, ಪತ್ರಕರ್ತರ ರಾಘವೇಂದ್ರ ನೀಲನ್ನವರ ಸ್ವಾಗತಿಸಿ, ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 