ಧಾರವಾಡ 24: ವಿದ್ಯಾವಂತ ಯುವಕರು ಹಾಗೂ ಕೃಷಿ ಪದವೀಧರರು ತಮ್ಮ ಜ್ಞಾನಾರ್ಜನೆಯ ನಂತರ ಪ್ರತಿ ಗ್ರಾಮಗಳಿಗೆ ಹೋಗಿ ರೈತರಿಗೆ ನೂತನ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವಲ್ಲಿ ಯುವಕರು ಪ್ರಮುಖ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಅವರು ಇಂದು ಬೆಳಿಗ್ಗೆ ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಕಷ್ಟ ಸಹಿಷ್ಣುಗಳಾಗಿದ್ದು ಈ ವರ್ಷದಂತಹ ಹವಾಮಾನ ವೈಪರೀತ್ಯ ಕಾಲದಲ್ಲಿಯೂ ಕೂಡಾ ರೈತರು ಎದೆಗುಂದದೆ ತಮ್ಮ ಕೃಷಿ ಕಾರ್ಯವನ್ನು ಮುಂದುವರೆಸಿದ್ದಾರೆ. ಗ್ರಾಮೀಣ ರೈತರಲ್ಲಿ ಕಸಕಡ್ಡಿಗಳನ್ನು ಕಾಂಪೋಸ್ಟ್ ಮಾಡುವ ಹಾಗೂ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ತಂತ್ರಜ್ಞಾನವನ್ನು ರೈತರಿಗೆ ತಿಳಿಸಿಕೊಡವ ಅವಶ್ಯಕತೆ ಬಹಳ ಇದೆ ತಿಳಿಸಿದರು.
ಆಡಳಿತ ಮಂಡಳಿಯ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿ, ರೈತರನ್ನು ಆರ್ಥಿ ಕವಾಗಿ ಸಬಲೀಕರಣಗೊಳಿಸುವಲ್ಲಿ ವಿಜ್ಞಾನಿಗಳು, ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮವಹಿಸಬೇಕಾಗಿದೆ. ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರಗಳ ಉಪಯೋಗ, ನೂತನ ತಳಿಗಳು ಹಾಗೂ ಮಾರುಕಟ್ಟೆಗಳ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಮಹಾದೇವ ಬ.ಚೆಟ್ಟಿ ಮಾತನಾಡಿ, ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಚೌದರಿ ಚರಣಸಿಂಗ್ರವರ ಆಶಯದಂತೆ ರಾಷ್ಟ್ರೀಯ ರೈತ ದಿನಾರಣೆ ಆಚರಿಸುತ್ತಿದ್ದು, ಇಡೀ ವಿಶ್ವವೇ ಆರ್ಥಿ ಕ ಮುಗ್ಗಟ್ಟಿನಿಂದ ತತ್ತರಿಸಿದರೆ ಕೃಷಿ ಪ್ರಧಾನ ದೇಶವಾಗಿರುವ ಭಾರತಕ್ಕೆ ಯಾವುದೇ ತೆರನಾದ ತೊಂದರೆಯಾಗಿಲ್ಲವೆಂದರು.
ಭಾರತ ಸರ್ಕಾ ದಿಂದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳಿದ್ದು ಅವುಗಳ ಸದುಪಯೋಗಪಡೆದುಕೊಂಡು ಯುವ ರೈತರು ಕೃಷಿ ಆಧಾರಿತ ಕೈಗಾರಿಕೆಗಳತ್ತ ಗಮನ ಹರಿಸಬೇಕಾಗಿದೆ. ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಜ್ಞರೊಂದಿಗೆ ಚರ್ಚಿ ಸಿ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರೈತರು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿ ರೈತರ ಹಲವಾರು ತಾಂತ್ರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆದುಕೊಂಡರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ ಹಾಗೂ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇ ಶಕ ರಾಜಶೇಖರ ಬಿಜಾಪೂರ, ಸುರೇಶ ಎಸ್. ಗೊಣಸಗಿ, ಸುಶೀಲಕುಮಾರ ಬೆಳಗಲಿ ಭಾಗವಹಿಸಿದ್ದರು
ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇ ಶಕ ಡಾ.ರಮೇಶ ಬಾಬು ಸ್ವಾಗತಿಸಿದರು. ಡಾ. ದೇವೇಂದ್ರಪ್ಪ ಎಸ್. ನಿರೂಪಿಸಿದರು. ವಿದ್ಯಾಧಿಕಾರಿ ಡಾ. ಬಿ.ಡಿ.ಬಿರಾದಾರ ವಂದಿಸಿದರು. ಧಾರವಾಡದ ರಂಜನಿ ಮಹಿಳಾ ಮಂಡಳದ ಸದಸ್ಯರುಗಳು ರೈತ ಗೀತೆ ಹಾಡಿದರು.