ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲಿ: ಸುನಿತಾ ಮ್ಯಾಗಿನಮನಿ

ಕಲಘಟಗಿ 04: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಮಕ್ಕಳು ಎಲ್ಲವನ್ನು ವಿಜ್ಞಾನದ ಕಣ್ಣಿನಿಂದ ನೋಡುವಂತಾಗಬೇಕು. ದೊಡ್ಡವರು ಹೇಳಿದರು ಎಂಬ ಮಾತ್ರಕ್ಕೆ ಆ ವಿಷಯವನ್ನು ನಂಬದೇ ಕೂಲಂಕುಷವಾಗಿ ಯೋಚಿಸಿ ಆಲೋಚಿಸಿ ಪ್ರಯೋಗ ಮಾಡಿ ಸತ್ಯವನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳ ವಿಜ್ಞಾನ ಹಬ್ಬ ಆಯೋಜಿಸಿರುವುದು ಇದು ಊರ ಹಬ್ಬದ ವಾತಾವರಣ ಆಗಲು ಕಾರಣವಾಗಿದೆ ಎಂದು ತಾಲೂಕು ಪಂಚಾಯತ ಅಧ್ಯಕ್ಷ ಸುನಿತಾ ಮ್ಯಾಗಿನಮನಿ ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ಗುಡ್ಡದಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬವನ್ನು ಸಸಿಗೆ ನೀರೆರೆಯುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕರಾದ ಗಜಾನನ ಮನ್ನಿಕೇರಿ ಮಾತನಾಡಿ "ಇಂದು ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದೇ ಜೀವನವಿಲ್ಲ. ನಮ್ಮ ದೈನಂದಿನ ಪ್ರತೀ ಕೆಲಸದಲ್ಲು ನಮಗೆ ಗೊತ್ತಿದ್ದೋ ಗೊತ್ತಿಲ್ಲದೇಯೋ ವಿಜ್ಞಾನವನ್ನು ಬಳಸುತ್ತಿದ್ದೇವೆ. ಹತ್ತು ಹಲವು ಹಬ್ಬಗಳ ಹಾಗೆ ಇದು ವಿಜ್ಞಾನ ಹಬ್ಬ. ವಿಜ್ಞಾನದ ಹಲವು ಕುತೂಹಲಕಾರಿ ಅಂಶಗಳನ್ನು ಪ್ರಯೋಗ, ಚಟುವಟಿಕೆ, ಆಟ, ಹಾಡಿನ ಮೂಲಕ ತಿಳಿದುಕೊಳ್ಳುವ ಹಬ್ಬ ಎಂದು ಹೇಳಿದರು.

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿ "ಮಕ್ಕಳಲ್ಲಿ ಸಹಜ ಕುತೂಹಲವಿದೆ. ಆ ಕುತೂಹಲವನ್ನು, ಪ್ರಶ್ನೆಗಳನ್ನು ಇಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ಮಕ್ಕಳು ವೈಜ್ಞಾನಿಕ ಧರ್ಮವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ" ಎಂದು ಹೇಳಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಲಿಂಗರಾಜ ರಾಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ಜನಸಮುದಾಯ ಪಾಲ್ಗೊಂಡಾಗಲೇ ಹಬ್ಬ, ಇಂತಹ ಪ್ರಯತ್ನ ಈ ಗುಡ್ಡದಹೂಲಿಕಟ್ಟಿಯಂತಹ ಗ್ರಾಮದಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಯತ್ನಗಳು ಸರಕಾರಿ ಶಾಲೆ ಕಡೆಗೆ ಪಾಲಕರನ್ನು ಆಕಷರ್ಿಸುತ್ತವೆ ಎಂದು ಹೇಳಿದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ.ಎಸ್. ಹಿರೇಮಠ, ಗ್ರಾಮ ಪಂಚಾಯತ ಸದಸ್ಯರಾದ ಬಸವಂತರಾವ್, ದಾವಲಸಾಬ, ದೇವಕ್ಕ ಪಾಟೀಲ, ಹನುಮಂತಪ್ಪ ಹೊಸಮನಿ, ಕುಬೇರಪ್ಪ ಸುಬ್ಬಣ್ಣವರ, ಶಾಂತವ್ವ ಕೊಪ್ಪದ, ಉಪನಿದರ್ೇಶಕ ಕಚೇರಿಯ ಶಿವಲೀಲಾ ಕಳಸಣ್ಣವರ, ಬಿ.ಆರ್.ಸಿ ಸಮನ್ವಯಾಧಿಕಾರಿ ಕುಮಾರ ಕೆ.ಎಫ್, ಶಿಕ್ಷಣ ಸಂಯೋಜಕ ಭಜಂತ್ರಿ  ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಾಯ್.ಎಚ್.ಬಣವಿ, ತಾಲೂಕಾ ಅಧ್ಯಕ್ಷ ಎಫ್.ಎಸ್.ಹಿರೇಮಠ, ತಾಲೂಕಾ ನೌಕರ ಸಂಘದ ಅಧ್ಯಕ್ಷರಾದ ರಮೇಶ ಹೊಲ್ತಿಕೋಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಆಯ್.ವಿ.ಜವಳಿ ಉಪಸ್ಥಿತರಿದ್ದರು.

ಊರಿನಲ್ಲಿ ವಿಜ್ಞಾನ ಹಬ್ಬದ ಪ್ರಯುಕ್ತ ಮಕ್ಕಳ ಹೆಜ್ಜೆ ಮಜಲು ತಂಡ, ವಾದ್ಯವೃಂದ, ಪೂರ್ಣ ಕುಂಭ ಮೆರವಣಿಗೆ ನಡೆಯಿತು. ಮಕ್ಕಳಿಗಾಗಿ ರಾಜಶೇಖರ ಮುತ್ತಿನಮಠ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು. ಮಕ್ಕಳು 5 ತಂಡಗಳಲ್ಲಿ ವಿಜ್ಞಾನದ ಮಾಡಿ ನೋಡು, ಆಡಿ ಹಾಡು, ಕಾಗದ ಕತ್ತರಿ, ಊರು ಸುತ್ತೋಣ, ಚುಕ್ಕಿ ಚಂದ್ರಮ ಚಟುವಟಿಕೆಗಳನ್ನು ಮಾಡಿ ಖುಷಿಪಟ್ಟರು.

ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಮ್.ನದಾಫ ಕಾರ್ಯಕ್ರಮ ನಿರ್ವಹಿಸಿದರು. ಯು.ಎಸ್.ಬಿದರಿ ಸ್ವಾಗತಿಸಿದರು. ಹ