ಮರಳಿ ಅರಳುವ ನಿವೃತ್ತಿ ಜೀವನ ಸಾಮಾಜಿಕ ಸೇವೆಗೆ ಮೀಸಲಾಗಿರಲಿ- ಜಿ.ಎಲ್.ಕುಲಕರ್ಣಿ
Let the blooming retirement life be dedicated to social service - G.L. Kulkarni
ಮರಳಿ ಅರಳುವ ನಿವೃತ್ತಿ ಜೀವನ ಸಾಮಾಜಿಕ ಸೇವೆಗೆ ಮೀಸಲಾಗಿರಲಿ- ಜಿ.ಎಲ್.ಕುಲಕರ್ಣಿ
ರಾಣೆಬೆನ್ನೂರು 04 : ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಸಮಾಜದಲ್ಲಿ ಸದಾಕಾಲ ಗೌರವ ಪ್ರೀತಿ ವಿಶ್ವಾಸ ಮತ್ತು ಅಭಿಮಾನ ಹೊಂದುವ ಏಕೈಕ ಕ್ಷೇತ್ರ ಶಿಕ್ಷಣ ಕ್ಷೇತ್ರವಾಗಿದೆ ಎಂದು ಪ್ರಾಚೀನ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ಜಿ. ಎಲ್.
ಕುಲಕರ್ಣಿ ಹೇಳಿದರು. ಅವರು ಇಲ್ಲಿನ ಸಿದ್ಧಿ ವಿನಾಯಕ ದೇವಸ್ಥಾನ ಸಬಾಭವನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಪ್ರಧಾನ ಗುರುಮಾತೆ ಪುಷ್ಪಾ ನಾಡಿಗೇರ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸತತ 40 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ನಾಡಿಗೇರ ಅವರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ ಹೊರತು, ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಸ್. ಎಸ್. ಕುಲಕರ್ಣಿ, ಜಿ.ಎಸ್. ಕುಲಕರ್ಣಿ, ಸಿ. ಸಿ.ಪಾಟೀಲ್, ಕೆ.ಆರ್. ವಡೇರಹಳ್ಳಿ ಡಯಟ್ ನ ಹಿರಿಯ ಉಪನ್ಯಾಸಕ ವಿಜಯಾ ಪಾಟೀಲ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ, ಅಕ್ಷರ ದಾಸೋಹ ನಿರ್ದೇಶಕ ಸಿ. ಬಿ ಅಡಿವೇರ, ಶಿಕ್ಷಣ ಸಂಯೋಜಕ ಶಿವು ಬನ್ನಿಕೋಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಂಗಪ್ಪ ನಾಯಕ, ಕ.ಸಾ.ಪ ಗೌರವ ಕಾರ್ಯದರ್ಶಿ ಜಗದೀಶ ಮಳೆಮಠ ಸೇರಿದಂತೆ ಶಾಲೆಯ ಶಿಕ್ಷಕರು, ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು.
ಗುರುಮಾತೆ ಸುವರ್ಣ ಕೆ, ಗೀತಾ ಹೆಗಡೆ, ಹಿರಿಯ ಸಾಹಿತಿ ಡಾ. ಕೆ.ಹೆಚ್. ಮುಕ್ಕಣ್ಣನವರ, ಎಸ್ ಎಚ್ ಕುಲಕರ್ಣಿ, ಸಾವಿತ್ರಮ್ಮ ಮೈಲಾರ, ಗುರುಮೂರ್ತಿ ದೀಕ್ಷಿತ್, ರಾಜೇಶ್ವರಿ ರಾಜೂರ, ವಿದ್ಯಾರ್ಥಿಗಳಾದ ರಮೇಶ ಬಡಕರಿಯಪ್ಪನವರ, ಸಿದ್ದು ಸೊಪ್ಪಿನ, ಮುರಳಿ ಅಗಡಿ, ಅಜಯ್ ಮಾಳಮ್ಮನವರ್, ರೂಪಾ ಶೆಟ್ಟರ, ದೀಪಾ ಶೆಟ್ಟರ್, ವಿಜಯ ಬಿಸನಹಳ್ಳಿ ವಿವೇಕಾನಂದ ಮನ್ನಂಗಿ, ವೈಷ್ಣವಿ ಸಿ, ಸುಷ್ಮಾ, ಶಿಲ್ಪ ಅಡಿಗೇರ, ಗೀತಾ ಅಡಿಗೇರ, ವೆಂಕಟೇಶ ಅಡಿಗೇರ್ ಮತ್ತಿತರರು ಪುಪ್ಪಾ ನಾಡಿಗೇರ ಅವರನ್ನು ಅಭಿನಂದಿಸಿ, ಸನ್ಮಾನಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 