ಸಾಧನೆಗಳು ಮಾತನಾಡಲಿ: ಪ್ರೊ. ಮೂಗನೂರುಮಠ
Let the achievements speak: Prof. Muganur Math
ಸಾಧನೆಗಳು ಮಾತನಾಡಲಿ: ಪ್ರೊ. ಮೂಗನೂರುಮಠ
ಬಾಗಲಕೋಟೆ 18: ಸಾಧನೆಗಳು ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಗಳಾಗಬಾರದು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಸ್ ಆರ್ ಮೂಗನೂರು ಮಠ ಅವರು ಅಭಿಪ್ರಾಯ ಪಟ್ಟರು.
ಅವರು ಮಹಾವಿದ್ಯಾಲಯದಲ್ಲಿ ಏರಿ್ಡಸಿದ್ದ ಸಮಾರಂಭದಲ್ಲಿ ಡಿ.ಲಿಟ್ ಪದವಿ ಪಡೆದ ಡಾ ಆರ್ ನಾಗರಾಜು ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ.ಎಂ ಹೆಚ್ ವಡ್ಡರ್.ಹಾಗೂ ಡಾ.ಸಂತೋಷ್ ಗೊರವರ್ ಇವರಿಗೆ ಸನ್ಮಾನ ಮಾಡಿ ಮಾತನಾಡುತ್ತಿದ್ದರು.
ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಸಾಧಿಸಿ ನೋಡಬೇಕು. ಸಾಧಕನು ತಾನು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಬೇಕು ಎಂದು ಅವರು ತಿಳಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಎಸ್ ಎನ್ ರಾಂಪುರ್. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ ಕೆ ವಿ ಮಠ ವಿದ್ಯಾರ್ಥಿ ಪ್ರತಿನಿಧಿಗಳಾದ ವಾಗೀಶ ಯಂಕಂಚಿ ಪಾರ್ವತಿ ಹಿರೇಮಠ ಉಪಸ್ಥಿತರಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಅಪ್ಪು ರಾಥೋಡ್ ಸ್ವಾಗತಿಸಿದರು ಡಾ. ಕೆ. ವಿ ಮಠ ಕಾರ್ಯಕ್ರಮ ನಿರೂಪಿಸಿದರು ದೈಹಿಕ ನಿರ್ದೇಶಕರಾದ ಪ್ರೊ ಮಂಜುನಾಥ್ ದೇವನಾಳ ವಂದಿಸಿದರು. ಬಾಗಲಕೋಟೆ ಜಿಲ್ಲೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲೇ ್ರ್ರಥಮವಾಗಿ "ಡಾಕ್ಟರ್ ಆಫ್ ಲಿಟರೇಚರ್" ಪದವಿ ಪಡೆದ ಡಾ ಆರ್ ನಾಗರಾಜ್ ರವರು ಮೂಲತಹ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನವರು ಕಳೆದ ಎರಡು ದಶಕಗಳಿಂದ ಬಾಗಲಕೋಟೆಯ ಬಿವಿವಿ ಸಂಘದ ಪದವಿ ಮಹಾವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 