ಧಾರವಾಡ 12: ಸುಗಮ ಸಂಗೀತ ಹಾಗೂ ಜಾನಪದ ಇವುಗಳ ಉಪಯುಕ್ತತೆ ಜೀವನದಲ್ಲಿ ಹೇಗೆ ಸಹಕಾರಿ ಎಂಬುವುದನ್ನು ಈಗಿನ ಶಾಲೆಗಳಲ್ಲಿ ಸಂಗೀತಕ್ಕೆ ಪ್ರೋತ್ಸಾಹ ನೀಡುವಲ್ಲಿ ಸಂಗೀತ ಆಸಕ್ತರು ಹಾಗೂ ಸರಕಾರದಿಂದ ಸಹಿತ ಯೋಗ್ಯವಾದ ಕ್ರಮ ಹಾಗೂ ಸಹಾಯಸ್ತದ ಬಗ್ಗೆ ಗಮನ ಹರಿಸುವಂತಾಗಬೇಕು ಎಂದು ಡಾ. ವಿ.ಸಿ. ಐರಸಂಗ ಹೇಳಿದರು.
ನಗರದ ಸಪ್ತಾಪೂರ ಶಾಲೆಯಲ್ಲಿ ವಿದ್ಯಾನಿಧಿ ಎಜ್ಯುಕೇಷನ್ ಟ್ರಸ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಗಮ ಸಂಗೀತದಲ್ಲಿ ವೈವಿಧ್ಯತೆ ಹಾಗೂ ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಈಗಿನ ವಿದ್ಯಾರ್ಥಿ ಗಳಿಗೆ ಜಾನಪದ ಕಲೆ ಮತ್ತು ಸುಗಮ ಸಂಗೀತದ ಬಗ್ಗೆ ಹೆಚ್ಚು ಒಲವು ಮೂಡುವಂತಾಗಬೇಕು ಎಂದು ಮಾತನಾಡಿದರು.
ಸಂಗೀತದ ವಿಷಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ ಬಗ್ಗೆ ಈಗಿನ ಮಕ್ಕಳಿಗೆ ಪಠೇತರ ಚಟುವಟಿಕೆಗಳಲ್ಲಿ ಸಂಗೀತವೂ ಒಂದು ಅವಿಭಾಜ್ಯ ಅಂಗವಾಗಿದೆ. ಅದೇ ರೀತಿ ದೂರದರ್ಶನ ಮಾಧ್ಯಮಗಳಿಂದ ಸಂಗೀತದ ತನ್ನ ಮಹತ್ವ ಪಡಿದುಕೊಂಡಿದೆ ಎಂದು ಹು-ಧಾ ಕೆ.ಪಿ.ಸಿ.ಸಿ ಕಾರ್ಯದಶರ್ಿ ವಸಂತ ಅಕರ್ಾಚಾರ ಹೇಳಿದರು.
ಸಂಗೀತದಲ್ಲಿ ಪದವಿ ಮುಗಿಸಿದ ಸಂಗೀತ ಶಿಕ್ಷಕರನ್ನು ಸಕರ್ಾರದ ವಸತಿ ಶಾಲೆಯಲ್ಲಿ ನೇಮಕ ಮಾಡಿಕೊಂಡು ವಿದ್ಯಾಥರ್ಿಗಳಿಗೆ ನಿರಂತರವಾಗಿ ಸಂಗೀತದ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಎಸ್.ಎನ್. ಇದಿಯಮ್ಮನವರ ಹೇಳಿದರು.
ಸಂಗೀತ ಪರಿಷತ್ತಿನ ಜಿಲ್ಲಾ ಸಂಘಟನ ಕಾರ್ಯದರ್ಶಿ ಯಮನಪ್ಪ ಜಾಲಗಾರ, ವಿದ್ಯಾನಿಧಿ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷೆ ಚಂದ್ರಮ್ಮ ಆರ್, ಅನಿತಾ ಆರ್, ಶ್ರೀಧರ, ಪ್ರಮೋದಕುಮಾರ, ನಿರೂಪಣೆ ಸುರೇಶ ಆರ್. ಹಿರೇನ್ನವರ, ಪ್ರಸನ್ನ ವಂದಿಸಿದರು. ಇತರರು ಉಪಸ್ಥಿತರಿದ್ದರು.