ಹೋಮೊಯೋಪೆಥಿಕ ವೈದ್ಯರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಲಿ: ಡಾ.ರಿಯಾಜ ಪಾಷಾ

ಹೋಮೊಯೋಪೆಥಿಕ ವೈದ್ಯರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಲಿ: ಡಾ.ರಿಯಾಜ ಪಾಷಾ Let homeopathic doctors take the lead in building a healthy society: Dr. Riyaza Pasha

ಹೋಮೊಯೋಪೆಥಿಕ ವೈದ್ಯರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಲಿ: ಡಾ.ರಿಯಾಜ ಪಾಷಾ 

ಬೆಳಗಾವಿ 6: ಇಂದು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಹೋಮೊಯೋಪೆಥಿ ಚಿಕಿತ್ಸೆಯ ಪಾತ್ರ ಆತೀ ಮುಖ್ಯವಾಗಿದ್ದು, ಹೋಮೊಯೋಪೆಥಿಕ ವೈದ್ಯರು ಉತ್ತಮ ಮತ್ತು ನಿರೋಗಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮೌಲ್ಯಮಾಪನ ರಜಿಸ್ಟ್ರಾರ ಡಾ. ರಿಯಾಜ ಪಾಷಾ ಅವರು ಇಂದಿಲ್ಲಿ ಹೇಳಿದರು.   ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಎ.ಪಿ.ಜೆ,.ಅಬ್ದುಲ ಕಲಾಂ ಸಭಾಂಗಣದಲ್ಲಿಂದು ಭರತೇಶ ಹೋಮಿಯೋಪೆಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾದ  “ಏಕಲವ್ಯ” ಎರಡು ದಿನಗಳ ರಾಷ್ಟ್ರೀಯ ಹೋಮಿಯೋಪೆಥಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಉತ್ತಮ ಆರೋಗ್ಯದಾಯಕ ಸಮಾಜ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶವಾಗಿರಲಿ ಎಂದರು.  ಇಂದು  ಮಧುಮೇಹ ರೋಗ ಯಾವ ರೀತಿಯಲ್ಲಿ ಬೆಳೆಯುತ್ತ ಹೋಗಿದೆ. ಅದೇ ಮಾದರಿಯಲ್ಲಿ ಕ್ಯಾನ್ಸರ ರೋಗವೂ ಸಹ ಹರಡುತ್ತಲಿದೆ ಮಧಮೇಹ ಮತ್ತು  ಕ್ಯಾನ್ಸರ ರೋಗಗಳ  ಮೇಲೆ ಪರಿಣಾಮಕಾರಿ ಓಷಧಿಗಳನ್ನು ಕಂಡು ಹಿಡಿಯಬೇಕಾಗಿದೆ .ಈ ನಿಟ್ಟಿನಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯಬೇಕೆಂದು ಅವರು ಹೇಳಿದರು. ಹೆಚ್ಚಿನ ಸಂಶೋಧನಾ ಕಾರ್ಯಗಳು ಮತ್ತು ಪುರಾವೆ ಆಧಾರಿತ ಅಧ್ಯಯನಗಳನ್ನು ಕೈಗೆತ್ತಿಕೊಳ್ಳುವುದು ಇಂದಿನ ಅಗತ್ಯತೆಯಾಗಿದ್ದು, ಈನಿಟ್ಟಿನಲಿ ಯುವ ವೈದ್ಯರು ಮುಂದಾಗಬೇಕೆಂದು ಹೇಳಿದ ಅವರು ಇಂದು ಆಯೋಜಿಸಲಾದ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು, ಇದಕ್ಕೆ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು . ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ ಹೊಮೊಯೋಪೆಥಿ ಕೇಂದ್ರಿಯ ಮಂಡಳಿ ನವ ದೆಹಲಿಯ ಮಾಜಿ ಅಧ್ಯಕ್ಷ ಡಾ.ರಾಮಜೀ ಸಿಂಗ ಅವರು ಮಾತನಾಡಿ, ಸಮುದಾಯದ ಆರೋಗ್ಯ ರಕ್ಷಣೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಯುವಲ್ಲಿ ಹಾಗೂ ಜೀವನಶೈಲಿಯ ಅಸ್ವಸ್ತತೆಗಳನ್ನು ಅಭಿವೃದ್ಧಿಶೀಲಗೊಳಿಸುವಲ್ಲಿ ಹೋಮಿಯೋಪೆಥಿ ವೈದ್ಯರ ಪಾತ್ರ ಅತೀ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ ಇಂದು ಹೋಮಿಯೋಪೆಥಿ ಚಿಕಿತ್ಸಾ ಪದ್ದತಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ, ಅಭ್ಯಾಸ ಪಠ್ಯಕ್ರಮವಾಗಿ  ಹಾಗೂ ಚಿಕಿತ್ಸಾ ಪದ್ದತಿಯಾಗಿ ಎಲ್ಲದರಲ್ಲೂ  ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಸರಕಾರಗಳು ಈ ಸಮಸ್ಯೆಗಳತ್ತ ಗಮನ ಹರಿಸಿ ಈ ಬಗ್ಗೆ ನಿರ್ಧಿಷ್ಟವಾದ ನಿಲುವುಗಳನ್ನು ಕೈಗೋಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಪ್ರಯತ್ನಿಸಬೇಕೆಂದು ಹೇಳಿದರು.  ಕರೋನಾ ಕಾಲದಲ್ಲಿ  ಹೋಮಿಯೋಪೆಥಿಕ ಮತ್ತು ಆಯುಷ್ಯ ವೈದ್ಯಾಧಿಕಾರಿಗಳು ಇಡಿ ದೇಶದಲ್ಲಿ ತಮ್ಮದೆ ಆದ ಸೇವೆಯನ್ನು ನೀಡಿದ್ದಾರೆ.  ಕಠಿಣ ಸಂದರ್ಭದಲ್ಲಿ  ವೈದ್ಯರ ಕೊರತೆ ನಿಗಿಸಿ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ  ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದ್ದಾರೆ. ಹಾಗಾಗಿ ಹೋಮಿಯೋಪೆಥಿಕ ಚಿಕಿತ್ಸಾ ಮಟ್ಟದಲ್ಲಿ ಸಂಶೋಧನೆಗಳು ನಡೆಯಬೇಕಾಗಿದೆ ಎಂದರು.    ವೇದಿಕೆ ಮೇಲೆ ಭರತೇಶ ಶೀಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ, ಖಜಾಂಚಿ ಭೂಷಣ ಮಿರ್ಜಿ,ಕರ್ನಾಟಕ ಹೋಮೊಯೋಪೆಥಿ ಮಹಾವಿದ್ಯಾಲಯಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು. ಭುವನೇಶ್ವರಿ ಹಾಗೂ ಸಂಗಡಿಗರಿಂದ ಸ್ವಾಗತ ಗೀತೆ ಹಾಡಲಾಯಿತು. ಭರತೇಶ ಹೋಮಿಯೋಪೆಥಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಡಾ. ಸಾವಿತ್ರಿ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪ್ರದೀಪಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಜಶ್ರೀ ಮಿಸಾಳೆ ಮತ್ತು  ಡಾ.ಜ್ಯೋತಿ ದಾಬೋಳಕರ ಅತಿಥಿಗಳನ್ನು ಪರಿಚಿಯಿಸಿದರು.ಪ್ರಾಚಾರ್ಯ ಡಾ. ಶ್ರೀಕಾಂತ ಕೊಂಕಣಿ ವಂದಿಸಿದರು.  ಡಾ,ಮಿಲಿಂದ ಬೆಳಗಾಂವಕರ ನಿರೂಪಿಸಿದರು. ಈ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು  ಪ್ರಬಂಧಗಳನ್ನು ಮಂಡಿಸಲಾಯಿತು. ಈ ಸಮ್ಮೇಳನದಲ್ಲಿ ಒಟ್ಟು 1400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಂಬೈನ ಖ್ಯಾತ ಹೋಮಿಯೋಪೆಥಿಕ ತಜ್ಞ ಡಾ.ಫಾರುಖ ಜೆ.ಮಾಸ್ಟರ ಮತ್ತು ಕೊಲ್ಕತ್ತಾ ಪಟ್ಟಣ್ಣದ ಡಾ.ಸಪ್ತರ್ಷಿ ಬ್ಯಾನರ್ಜಿ ಅವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.