ಸರ್ಕಾರಿ ಶಾಲೆಗಳ ಮಕ್ಕಳು ದೊಡ್ಡ ಗುರಿ ಗುರಿಯನ್ನು ಇಟ್ಟುಕೊಳ್ಳಲಿ ಡಾ.ಬಸವರಾಜ

ಸರ್ಕಾರಿ ಶಾಲೆಗಳ ಮಕ್ಕಳು ದೊಡ್ಡ ಗುರಿ ಗುರಿಯನ್ನು ಇಟ್ಟುಕೊಳ್ಳಲಿ ಡಾ.ಬಸವರಾಜ Let children of government schools set big goals, says Dr. Basavaraj

ಬ್ಯಾಡಗಿ 03  :ಸರ್ಕಾರಿ ಶಾಲೆಗಳ ಮಕ್ಕಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕೆಂದು ಡಾ. ಬಸವರಾಜ ವೀರಾಪುರ ಹೇಳಿದರು.       ತಾಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  ಸರಕಾರಿ ಶಾಲೆಗಳು ಸಮುದಾಯದ ಬಹುದೊಡ್ಡ ಆಸ್ತಿಯಾಗಿದೆ. ದೇಶ - ರಾಜ್ಯಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ಸರ್ಕಾರಿ ಶಾಲೆಗಳು ಬಹುದೊಡ್ಡ ಕೊಡುಗೆಯನ್ನು ನೀಡಿವೆ. ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ಬಹುದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು.

ಆ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಮಕ್ಕಳು ಮಾಡಬೇಕೆಂದರು.ಗ್ರಾಮೀಣ ಭಾಗದ ಮಕ್ಕಳು ಜಾಗತಿಕವಾಗಿ ಸಾಧನೆ ಮಾಡಲು ಸಾಧ್ಯವಿದೆ. ಅದಕ್ಕೆ ಬೇಕಾದ ಜ್ಞಾನವನ್ನು ಕಟ್ಟಿಕೊಳ್ಳಬೇಕೆಂದರು. ಶಾಲೆಗೆ ಬೇಕಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.      ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಿಂದೆ ತೋಳ್ಬಲ, ಹಣ್ಬಲ ಇದ್ದವರು ಆಳ್ವಿಕೆ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಜ್ಞಾನವುಳ್ಳವರು ಆಳುವಂತಹ ಕಾಲವಾಗಿದೆ. ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಗಮನವಿಟ್ಟು ಅಧ್ಯಯನ ಮುಂದುವರೆಸಬೇಕು ಎಂದರು.   

 ಯುವ ಉದ್ಯಮಿಗಳು,ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಯುವ ನಾಯಕರಾದ ಉಮೇಶ ಕರಿಗಾರ ರವರು ಮಾತನಾಡುತ್ತ ಮಕ್ಕಳನ್ನು ಆರಂಭಿಕ ಹಂತದಲ್ಲಿ ಮೊಬೈಲ್ ಸಂಪರ್ಕದಿಂದ ದೂರವಿಡಬೇಕು ಎಂದರು. ಸಮಾಜದ ಬಡಮಕ್ಕಳು ಅಧ್ಯಯನ ಸರ್ಕಾರಿ ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಗುಂಡೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೇಕಾದ ಸ್ವಂತ ಹಣದಲ್ಲಿ  ಸುಸಜ್ಜಿತ ರಂಗಮಂದಿರ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.   

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ ಹೊಸಮನಿ ವಹಿಸಿದ್ದರು.     ವೇದಿಕೆ ಮೇಲೆ ಉಪಾಧ್ಯಕ್ಷರಾದ ಶ್ರುತಿ ಲಮಾಣಿ ಎಸ್ಡಿಎಂಸಿ ಸದಸ್ಯರಾದ ಮಲ್ಲಿಕಾರ್ಜುನಗೌಡ ಪಾಟೀಲ, ಕಲವೀರ​‍್ಪ ಹುಣಸಿಕಟ್ಟಿ, ಕರಬಸಪ್ಪ ಆನ್ವೇರಿ, ಪ್ರಕಾಶ ಲಮಾಣಿ, ಫಕ್ಕೀರ​‍್ಪ ಹೊಂಬರಡಿ, ಯಲ್ಲಪ್ಪ ರ್ಯಾವಣ್ಣನವರ,ಟೋಪಣ್ಣ ಲಮಾಣಿ, ಬಸವರಾಜ ಲಮಾಣಿ, ಮಂಗಳಾ ಶಿಗ್ಗಾವಿ, ನೇತ್ರಾವತಿ ಯತ್ನಳ್ಳಿ, ಶಿಲ್ಪಾ ಆನವಟ್ಟಿ, ಶೋಭಾ ಮಾಳಗಿ, ಈರಮ್ಮ ಮನ್ನಂಗಿ, ಶಾಂತಮ್ಮ ಲಮಾಣಿ,ಮರಿಯಪ್ಪ ಮಾಳಗಿ,ಪ್ರಮುಖರಾದ ಶಿವಾನಂದ ಹಟ್ಟಿಯವರ, ಚಂದ್ರಶೇಖರ ತಾವರೆಗೊಪ್ಪ , ಶಿಕ್ಷಕರಾದ ಜಿ ಬಿ ಮಾಗಳ, ವಿ ಡಿ ಅಕ್ಕೂರ, ಚಂದ್ರಶೇಖರ ಹೊನ್ನಪ್ಪನವರ, ಎನ್ ಬಿ ಅಬಲೂರು, ಚೈತ್ರರಾವ್ ಟಿ ಎಸ್, ಡಿ ಜಿ ಕಮದೋಡ, ಸುನಿತಾ ಟಿ, ಹೊನ್ನಪ್ಪ ತಳವಾರ, ಕೆ ಎಸ್ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಿಕ್ಷಕ ಮಲ್ಲಪ್ಪ ಕರೇಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.