ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯವಾಗಲಿ: ಶಾಸಕ ರಾಜು ಸೇಠ

ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯವಾಗಲಿ: ಶಾಸಕ ರಾಜು ಸೇಠ Let's work to preserve our culture and heritage: MLA Raju Setha

ಬೆಳಗಾವಿ 12:  ನಮ್ಮ ದೇಶದ ಸಂಸ್ಕೃತಿ, ಪರಂಪರೆಗೆ ಪುರಾತನ ಇತಿಹಾಸ ಇದೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪರಂಪರೆಯ ಮರೆಯಾಗುತ್ತಿದೆ.  ಹೀಗಾಗಿ ಅದನ್ನು ಉಳಿಸುವ ಬೆಳೆಸುವ ಕಾರ್ಯವಾಗಬೇಕು ಎಂದು ಶಾಸಕ ರಾಜು (ಆಸೀಫ್) ಸೇಠ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ  ಮಹಾಂತೇಶ್ ನಗರದಲ್ಲಿರುವ ಮಹಾಂತ್ ಭವನದಲ್ಲಿ ಬೆಳಗಾವಿಯ ಸ್ಫೂರ್ತಿ ಸೋಷಿಯಲ್ ವೆಲ್‌’ಫೇರ್ ಅಸೋಸಿಯೇಷನ್‌’ನ ವತಿಯಿಂದ  ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಹಾಗೂ  ಭಾವಗೀತೆ ಗಾಯನ ಸ್ಪರ್ಧೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿಶ್ವದ ಅನೇಕ ರಾಷ್ಟ್ರಗಳು ಭಾರತೀಯ  ಸಂಸ್ಕೃತಿಗೆ ತಲೆಬಾಗಿವೆ. ಭಾರತೀಯರಾದ ನಾವೇ ನಮ್ಮ ಸಂಸ್ಕೃತಿ- ಸಂಸ್ಕಾರವನ್ನು ಮರೆಯುತ್ತಿದ್ದೆವೆ. ಹಿರಿಯರ  ಈ ಪರಂಪರೆ ಬೆಳೆಯಲಿ. ಮುಂದಿನ ಬಾರಿ ಬೃಹತ್ ಸಾಮಾಜಿಕ ಸಾಂಸ್ಕೃತಿಕ ಉಪಕ್ರಮ ಆಯೋಜಿಸುವುದಾದರೇ, ತಮಗೆ ಸಹಾಯ ಸಹಕಾರವಿದೆ ನೀಡಲಾಗುವುದು ಎಂದು ಭರವಸೆ ನೀಡಿದರು. 

ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ ಅವರು ಮಾತನಾಡಿ, ಕಳೆದ 11 ವರ್ಷದಿಂದ ಸಮಾಜಿಕ, ಸಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲ ಮಹಿಳಾ ಮಂಡಳಿಗಳ ಸಹಯೋಗದಿಂದ ಮುಂಬರುವ ದಿನಗಳಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದ್ದೇವೆ.  ನಮ್ಮ ಮಹಿಳಾ ಮಂಡಳಕ್ಕೆ ಜಾಗೆಯನ್ನು ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು. 

ಸಂಗೀತ ಪ್ರಾಧ್ಯಾಪಕ ಡಾ. ಸುನೀತಾ ಪಾಟೀಲ್,  ರೇಷ್ಮಾ ನೇರ್ಲಿ, ಲತಾ ಕರಡಿಗುದ್ದಿ, ಗೀತಾ ಮಲ್ಲಾಪೂರ, ಪ್ರೇಮಾ ದೇಶನೂರ, ಉಷಾ ಶೆಟ್ಟರ್, ಅಂಜನಾ ಹಿರೇಮಠ, ಸವಿತಾ ಕಳಸಣ್ಣವರ, ಅಶ್ವಿನಿ ಪಾಟೀಲ್, ನಿಶಾ ಝೇಂಡ್, ಶ್ವೇತಾ ಪಾಟೀಲ್, ಅನೀತಾ ಚಟ್ಟೇರ್ ಇತರರು ಇದ್ದರು.