ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ನಡಿಯೋಣ: ಪಿಎಸ್‌ಐ ಭಂಗಿ

ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ನಡಿಯೋಣ: ಪಿಎಸ್‌ಐ ಭಂಗಿ Let's walk on the path laid down by the prophets: PSI's stance

ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ನಡಿಯೋಣ: ಪಿಎಸ್‌ಐ ಭಂಗಿ

ತಾಳಿಕೋಟಿ 05: ಈ ಜಗತ್ತಿಗೆ ಬಂದ ಪೈಗಂಬರರು, ದಾರ್ಶನಿಕರು, ಸಂತರು, ಮಹಾತ್ಮರು ಹಾಗೂ ಶರಣರು ನಮಗೆ ಬದುಕುವ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳೋಣ ಎಂದು ಅಪರಾಧ ವಿಭಾಗದ ಪಿಎಸ್‌ಐ ಆರ್‌.ಎಸ್‌.ಭಂಗಿ ಹೇಳಿದರು.  

ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮಿಲಾದುನ್ನಬಿ ಯಂಗ್ ಕಮಿಟಿ ವತಿಯಿಂದ ಕತ್ರಿ ಬಜಾರ್ ಹತ್ತಿರ ಶುಕ್ರವಾರ ಹಮ್ಮಿಕೊಂಡ "ಸಿಹಿ ವಿತರಣಾ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಮನುಷ್ಯ ಎಲ್ಲ ಕೆಡುಕುಗಳಿಂದ ಉಳಿಯಲು ಸಾಧ್ಯ. ಇವತ್ತು ಯುವ ಸಮುದಾಯ ವ್ಯಸನಿಗಳಾಗಿ ಮಾರು​‍್ಡತ್ತಿದ್ದಾರೆ ಅವರನ್ನು ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ಬದುಕುವ ಅಗತ್ಯ ಇದೆ, ಆರೋಗ್ಯವಂತ ಸಮಾಜದಿಂದ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದರು. ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ಮನಗೂಳಿ ಮಾತನಾಡಿ ಮೊಹಮ್ಮದ್ ಪೈಗಂಬರ್ ಅವರ ಜಯಂತಿಯನ್ನು ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆ ನಮ್ಮ ಸಮುದಾಯದ ಯುವಕರು ಎಲ್ಲಾ ಕೆಡುಕುಗಳಿಂದ ಮುಕ್ತರಾಗಬೇಕು. ಧರ್ಮದ ಉನ್ನತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಪ್ರಯತ್ನಿಸಬೇಕು ಎಂದರು.  

ಮಿಲಾದುನ್ನಬಿ ಯಂಗ್ ಕಮಿಟಿ ಮುಖ್ಯಸ್ಥ ನದೀಮ ಕಡು ಮಾತನಾಡಿ ಕಳೆದ 12 ವರ್ಷಗಳಿಂದ ನಮ್ಮ ಕಮಿಟಿಯ ವತಿಯಿಂದ ಈದ್ ಮಿಲಾದ್ ಆಚರಿಸುತ್ತಾ ಬಂದಿದ್ದೇವೆ ಜಾತಿ ಮತ ಭೇದವಿಲ್ಲದೆ ಎಲ್ಲರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದೇವೆ ಕರೋನಾ ಸಂಕಷ್ಟದ ಸಮಯದಲ್ಲಿ ಪಟ್ಟಣದಲ್ಲಿ ಬಡ ಅನಾಥ ಹಾಗೂ ವಿಧವೆಯರಿಗಾಗಿ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದೇವೆ. ಇನ್ನು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.  

ಕಾರ್ಯಕ್ರಮದಲ್ಲಿ ಗಣ್ಯರಾದ ಬಲವಂತ ಸಜ್ಜನ,ಹವಾಲ್ದಾರ್ ಎಂ.ಎಲ್‌.ಪಟ್ಟೇದ,ಬಸೀರ ಎಕ್ಕೇಲಿ, ಪೀರ್ ಮೊಹಮ್ಮದ್ ಖಾಜಿ, ಮಹೆಬೂಬ ಕೆಂಭಾವಿ, ಹುಸೇನ ಆನೇಸೂರ, ಮೆಹಬೂಬ ವಠಾರ, ನಜೀಬ ಕಡು, ಸದ್ದಾಂ ನಾಯ್ಕೋಡಿ, ಅಲ್ತಾಫ್ ಹವೇಲಿ,ಎಚ್‌.ಆರ್‌.ಕಟಗಿ ಮತ್ತಿತರರು ಇದ್ದರು.ಹಾಪೀಜ.ಸೋಫಿಯಾನ ಖಾಜಿ ಕುರ್ ಆನ್ ಪಠಿಸಿದರು. ಮೆಹಬೂಬ ಕೆಂಭಾಯಿ ಸ್ವಾಗತಿಸಿದರು. ಪಿ.ಎ.ಕಾಜಿ ನಿರೂಪಿಸಿದರು, ಎಂ.ಎಚ್‌.ವಠಾರ ವಂದಿಸಿದರು.