ದೀಪೋತ್ಸವ ಜ್ಞಾನದ ದೀವಿಗೆಯನ್ನು ಬೆಳಗುತ್ತೇವೆ : ರಾಘವೇಂದ್ರ
Let's light the lamp for the goddess of knowledge: Raghavendra
ದೀಪೋತ್ಸವ ಜ್ಞಾನದ ದೀವಿಗೆಯನ್ನು ಬೆಳಗುತ್ತೇವೆ : ರಾಘವೇಂದ್ರ
ಕೊಪ್ಪಳ 10: ದೀಪೋತ್ಸವ ಮನಸ್ಸಿನ ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು ಎಂದು ಅಗ್ನಿವೀರ ತರಬೇತಿದಾರರಾದ ರಾಘವೇಂದ್ರ ಬಾಕಳೆ ಹೇಳಿದರು.
ನಗರದ ಹೊರವಲಯದಲ್ಲಿರುವ ಪುರಾತನ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೀಪೋತ್ಸವ ಎಂಬುದು ದೀಪಗಳನ್ನು ಬೆಳಗುವುದನ್ನು ಸೂಚಿಸುತ್ತದೆ. ಹಣತೆ ನಮ್ಮ ದೇಹವನ್ನು ಸಂಕೇತಿಸಿದರೆ ಬೆಳಕು ನಮ್ಮ ಆತ್ಮವನ್ನು ಸೂಚಿಸುತ್ತದೆ. ದೀಪ ಹಚ್ಚುವಾಗ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತೇವೆ. ಅಂದರೆ ಕತ್ತಲೆಯನ್ನು ಸಂಕೇತಿಸುವ ಅಜ್ಞಾನ, ಕೋಪ, ಮದ, ಮತ್ಸರ, ಅಹಂಕಾರ, ಅಸೂಯೆ, ದ್ವೇಷ, ಕಹಿಯನ್ನು ದೇಹದಿಂದ ಹೊರಹಾಕಲ್ಪಟ್ಟು ಜ್ಞಾನದ ದೀವಿಗೆಯನ್ನು ಬೆಳಗುತ್ತೇವೆ ಎಂದರು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಸಂಜೆ ಭಕ್ತಾಧಿಗಳಿಂದ ದೀಪೋತ್ಸವ ಜರುಗಿತು. ಇದೇ ವೇಳೆ ಸೈನ್ಯಕ್ಕೆ ಆಯ್ಕೆಯಾದ 40ಕ್ಕೂ ಹೆಚ್ಚು ನೂತನ ಸೈನಿಕರಿಗೆ ಮಳೆಮಲ್ಲೇಶ್ವರ ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.ದೀಪೋತ್ಸವದಲ್ಲಿ ಮಳೆಮಲ್ಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಸಮಿತಿಯ ಸದಸ್ಯರಾದ ಬಸವರಾಜ ಪುರದ, ರಾಜು ಶಟ್ಟರ್, ವಿರೂಪಾಕ್ಷಪ್ಪ ಮುತ್ತೇನವರ್, ಶಿವು ಕೊಣಂಗಿ, ಅಮರಸಿಂಗ್, ಸಿದ್ದಯ್ಯ ಹಿರೇಮಠ, ಮೀಸ್ತ್ರಿಮಲ್, ಪಂಡಿತ ಹಡಗಲಿ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 