ಕನಕದಾಸರ ಆದರ್ಶವನ್ನು ಪಾಲಿಸಿ ಉತ್ತಮ ಸಮಾಜ ಕಟ್ಟೋಣ: ತಹಶೀಲ್ದಾರ ರವೀಂದ್ರ ಹಾದಿಮನಿ
Let's follow the ideals of Kanakadasa and build a better society: Tahsildar Ravindra Hadimani
ಕಾಗವಾಡ 08: ತಾಲೂಕಾಡಳಿತದ ವತಿಯಿಂದ ಭಕ್ತಶ್ರೇಷ್ಟ ಕನಕದಾಸರ 538ನೇ ಜಯಂತಿಯನ್ನು ಶನಿವಾರ ದಿ. 08 ರಂದು ಅದ್ದೂರಿಯಾಗಿ ಆಚರಿಸಿಲಾಯಿತು. ತಹಶೀಲ್ದಾರ ಕಚೇರಿ ಹಾಗೂ ಚೆನ್ನಮ್ಮ ವೃತ್ತದಲ್ಲಿರುವ ಕನಕದಾಸರ ಭಾವಚಿತ್ರಕ್ಕೆ ತಹಶೀಲ್ದಾರ ರವೀಂದ್ರ ಹಾದಿಮನಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕನಕದಾಸರು ಸಮಾಜದ ಅಂಕುಡೊಂಕುಗಳು, ಶೋಷಣೆಗಳನ್ನು ತಮ್ಮ ಕಾವ್ಯಗಳ ಮುಖಾಂತರ ಹೊಡೆದೊಡಿಸಿದ್ದಾರೆ. ಅವರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲಿಸಿ, ಉತ್ತಮ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಪಿಎಸ್‌ಐ ರಾಘವೇಂದ್ರ ಖೋತ, ಕ್ಷೇತ್ರಶಿಕ್ಷಣಾಧಿಕಾರಿ ಪಿ.ಬಿ ಮಧಬಾವಿ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಸುರೇಖಾ ಬಸನಾಯಿಕ, ಜ್ಯೋತಿಗೌಡಾ ಪಾಟೀಲ, ಕಾಕಾ ಪಾಟೀಲ, ಪ್ರಕಾಶ ಪಾಟೀಲ, ನಾಥಗೌಡ ಪಾಟೀಲ, ಸಿದ್ದು ಭಾನುಸೆ, ಸದಾಶಿವ ಪೂಜಾರಿ, ಸಿದ್ದು ಒಡೆಯರ, ಗಣೇಶ ಕೋಳೆಕರ, ಕಿತ್ತೂರು ಕರ್ನಾಟಕ ಸೇನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಕುರುಬರ ಯುವ ಮೋರ್ಚಾ ಅಧ್ಯಕ್ಷ ಸಿದ್ದರಾಮ ಬಸ್ತವಾಡ, ಕುರುಬ ಸಮಾಜದ ತಾಲೂಕಾ ಅಧ್ಯಕ್ಷ ಪ್ರಕಾಶ ಢಂಗ, ಉಪಾಧ್ಯಕ್ಷ ರಾವಸಾಹೇಬ ಜುಗಳೆ ಸೇರಿದಂತೆ ಅನೇಕರು ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 