ಭ್ರಾತೃತ್ವ ಭಾವದಿಂದ ಭಾರತೀಯರಾಗೋಣ- ಮುಜಮ್ಮಿಲ್
ರಾಣೇಬೆನ್ನೂರು 27: ಹಲಗೇರಿ: ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿವೆ. ನಾವು ಈ ಸಂವಿಧಾನವನ್ನು ಗೌರವಿಸೋಣ ಅದರಲ್ಲಿ ಇರುವ ನಿಯಮಗಳನ್ನು ಅನುಸರಿಸೋಣ ಮೂಲಭೂತ ಹಕ್ಕುಗಳಂತೆ, ದೇಶದ ಪ್ರಜೆಗಳಾಗಿ ಇದರಲ್ಲಿ ನೀಡಲಾದ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸೋಣ ಎಂದು ಎಸ್. ಡಿ.ಎಮ್. ಸಿ ಅಧ್ಯಕ್ಷರಾದ ಮುಜಮ್ಮಿಲ್ ಖತೀಬ ಹೇಳಿದರು. ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿಯ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಬೆನ್ನೂರ ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ದ್ಯೇಯನ್ನಿಟ್ಟುಕೊಂಡು ಬದುಕೋಣ. ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತನ್ನಿ ಎಂದು ಹೇಳಿದರು. ಗಣರಾಜ್ಯೋತ್ಸವ ನಿಮಿತ್ತ ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಜಗದೀಶ ಮಳೆಮಠ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ. ಮತ್ತೊಮ್ಮೆ ವಿಶ್ವಗುರು ಆಗುವತ್ತ ಸಾಗುತ್ತಿರುವ ಭಾರತದ ಸತ್ಪ್ರಜೆಗಳಾಗೋಣ. ಹಕ್ಕುಗಳನ್ನು ಆನಂದಿಸುವುದರ ಜೊತೆಗೆ ಕರ್ತವ್ಯಗಳನ್ನು ಕೂಡ ಪಾಲಿಸೋಣ ಎಂದರು.ವಿಶೇಷ ಅತಿಥಿಗಳಾಗಿ ಆಗಮಿಸಿದ ಚಮನ್ ಸಾಬ್ ಕಮದೋಡ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಧದ ಹಂತಗಳಲ್ಲಿ ಕ್ರೀಡಾಕೂಟ ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ಮಕ್ಕಳಿಗೆ ಬಹುಮಾನಗಳನ್ನು ವಿತರರಿಸಲಾಯಿತು. ವೇದಿಕೆಯಲ್ಲಿ ಮಾಜಿ ಎಸ್. ಡಿ.ಎಂ. ಸಿ ಅಧ್ಯಕ್ಷ ಸೈಯದ್ ಅಹ್ಮದ್ ಚಳಗೇರಿ, ಪದಾಧಿಕಾರಿಗಳಾದ, ರಫೀಕ್ ಖಾನ್ ಇಟಗಿ, ಜಿಯಾವುಲ್ಲ ಚೂಡಿಗಾರ, ಮೊಹಮ್ಮದ್ ಯೂಸುಫ ಅತ್ತಾರ, ಶಬ್ಬೀರ್ ಅಹ್ಮದ್ ತಿಮ್ಮೇನಹಳ್ಳಿ, ರಾಬಿಯಾ ಕುಪ್ಪೆಲೂರ ಹಾಗೂ ಯಾಸ್ಮಿನ್ ಬಾನು ಐರಣಿ, ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಮೀರ ಚಳಗೇರಿ, ಶಾಲಾ ಸಿಬ್ಬಂದಿಗಳಾದ ಇರ್ಷಾದ್ ಅಹ್ಮದ್ ಖಾಜಿ, ಮಮತಾ ಕೆ, ಮಿರ್ಜಾ, ರಿಯಾಜ್ ಭಿಕ್ಬಾ , ಕೆ. ಬಿ. ದುರ್ಗದ, ಬಿ.ಎನ್. ಕೆಂಪಳ್ಳೇರ, ಅಕ್ಕಮ್ಮ ಅಬ್ಬಿಗೇರಿ ಹಾಗೂ ಸಲೀಮಾ ಪೀರಜಾದೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸುಮಯ್ಯ ಕಾಟೇನಹಳ್ಳಿ ಹಾಗೂ ಜೋಯ್ ಮುಜಾವರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರುಖಯ್ಯಾ ಕರ್ಜಗಿ ಪಥಸಂಚಲನದ ನೇತೃತ್ವ ವಹಿಸಿ ಧ್ವಜ ವಂದನೆ ಮಾಡಿದರು. ಐ.ಜಾ. ಚಳಗೇರಿ ಸ್ವಾಗತಿಸಿ, ಅಲಿಷಾ ಉದಗಟ್ಟಿ ನಿರೂಪಿಸಿ, ವಂದಿಸಿದರು.